Breaking News

ಕಲ್ಲಪಳ್ಳಿ ಗಡಿ ಪ್ರದೇಶದಲ್ಲಿ ರಸ್ತೆ ಮಣ್ಣು ಹಾಕಿ ಬಂದ್ ಮಾಡಿದ್ದಕ್ಕೆ ಮಾಜಿ ಗ್ರಾ.ಪಂ. ಸದಸ್ಯರ ವಿರೋಧ

Advt_Headding_Middle
Advt_Headding_Middle

 

ಸುಳ್ಯದಿಂದ ಕಲ್ಲಪಳ್ಳಿ ಮೂಲಕ ಪಾಣತ್ತೂರು ಕಡೆಗೆ ಹೋಗುವ ರಸ್ತೆಯನ್ನು ಕರ್ನಾಟಕದ ಅಧಿಕಾರಿಗಳು ಮಣ್ಣು ಹಾಕಿ ಮುಚ್ಚಿರುವುದನ್ನು ಕಲ್ಲಪಳ್ಳಿಯ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಅರುಣ್ ರಂಗತ್ತಮಲೆ ವಿರೋಧಿಸಿದ್ದಾರೆ.

ಕಲ್ಲಪಳ್ಳಿಯ ಜನತೆ ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಸುಳ್ಯವನ್ನು ಅವಲಂಬಿಸುವವರಾಗಿದ್ದಾರೆ. ಬಾರಿಕೇಡ್ ಹಾಕಿ ರಸ್ತೆ ಮುಚ್ಚಿದರೆ ತೊಂದರೆ ಇಲ್ಲ. ಆದರೆ ಶಾಶ್ವತವಾಗಿ ಮಣ್ಣು ರಾಶಿ ಹಾಕಿ ಬಂದ್ ಮಾಡಿರುವುದರಿಂದ ಜನರಿಗೆ ಬಾರೀ ತೊಂದರೆಯಾಗಲಿದೆ. ಕೇರಳದವರೇ ಆದ ಕಮ್ಮಾಡಿಯವರು ರೇಶನ್ ಸಾಮಾಗ್ರಿಗಾಗಿ ಕಲ್ಲಪಳ್ಳಿಗೆ ಬರಬೇಕಿತ್ತು. ಈಗ ಕಮ್ಮಾಡಿ ಪ್ರದೇಶದವರು ಬರಲು ಸಾಧ್ಯವಿಲ್ಲದಂತಾಗಿದೆ ಎಂದು ಅರುಣ್ ರಂಗತ್ತಮಲೆ ಹೇಳಿದ್ದಾರೆ.
ಕಲ್ಲಪಳ್ಳಿ ಪ್ರದೇಶದಲ್ಲಿ ಕೇರಳ ಭಾಗದ ನೂರು ಮೀಟರ್ ನಷ್ಟು ಒಳಕ್ಕೆ ಬಂದು ರಸ್ತೆಯಲ್ಲಿ ಮಣ್ಣು ಹಾಕಿದ್ದಾರೆ. ಇದರಿಂದ ಕಮ್ಮಾಡಿ, ಬಾಟೋಳಿ ಭಾಗದವರಿಗೆ ರೇಶನ್ ತರಲು ಸುಳ್ಯಕ್ಕೆ ತೆರಳಲು ಪೊಲೀಸರು ಅನುಮತಿ ನೀಡುವಂತೆ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.