ಆರ್ಥಿಕ ಸಂಸ್ಥೆಗಳ ಬಲವಂತದ ಸಾಲ ವಸೂಲಾತಿ ಹಾವಳಿ ತಡೆಯಲು ಕಿಶೋರ್ ಶಿರಾಡಿ ಆಗ್ರಹ

Advt_Headding_Middle
Advt_Headding_Middle

ಆರ್ಥಿಕ ಸಂಸ್ಥೆಗಳ ಬಲವಂತದ ಸಾಲ ವಸೂಲಾತಿ ಹಾವಳಿ ತಡೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದ್ದಾರೆ.

ಪ್ರಕೃತಿ ವಿಕೋಪ, ಕೃಷಿ ಕ್ಷೇತ್ರಕ್ಕೆ ರೋಗ, ಕಾಡು ಪ್ರಾಣಿಗಳ ಹಾವಳಿ ಇವೆಲ್ಲದಕ್ಕೆ ಸಿಲುಕಿ ನರಳುತ್ತಿರುವ ದ.ಕ ಮತ್ತು ಉಡುಪಿ ಜಿಲ್ಲೆಯ ಬೆಳೆಗಾರರು ಇದೀಗ ಕೊರೋನ ಭೀತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಂಕುಗಳ ಸಿಬಂದಿಗಳು ಹಾಗೂ ಡಿಸಿಸಿ ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳ ಆಡಳಿತ ವರ್ಗಗಳು ಸಹಕಾರಿ ಸಂಘಗಳ ಮೂಲಕ ರೈತರ, ಬೆಳೆಗಾರರ ಸಾಲಗಳನ್ನು ಬಲವಂತ ಹಾಗೂ ನಿರಂತರ ಕರೆ ಮಾಡುವ ಮೂಲಕ ವಸೂಲಾತಿಗೆ ಇಳಿದು ಕಿರುಕುಳ ನೀಡುವುದು,
ಮನೆಮನೆಗೆ ನುಗ್ಗಿ ಹಣ ತುಂಬುವಂತೆ ಒತ್ತಾಯಿಸುತ್ತಿರುವ ಘಟನೆಗಳು ಜಿಲ್ಲೆಯಾದ್ಯಂತ ಕಂಡು ಬರುತ್ತಿದೆ. ಮೊದಲೇ ಬೆಳೆ ನಷ್ಟ, ಕೂಲಿ ಕೆಲಸ ಇಲ್ಲದೆ ಕಂಗಾಲಾಗಿದ್ದವರು ಕೊರೊನಾ ವೈರಸ್ ಸೋಂಕುವಿನಿಂದ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಕೃಷಿಕರು ಕೂಲಿ ಕಾರ್ಮಿಕರು, ಖಾಸಗಿ ಉದ್ಯೋಗಿಗಳು ಮನೆಯಿಂದ ಹೊರಬರಲಾಗದೆ ತೀರಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೀವನ ಚಿಂತಾಜನಕ ಸ್ಥಿತಿಗೆ ತಲುಪಿದೆ.ಇದೆ ಹೊತ್ತಲ್ಲಿ ಆರ್ಥಿಕ ಸಂಸ್ಥೆಗಳು ಬಲವಂತವಾಗಿ ಸಾಲ ವಸೂಲಾತಿ ಮುಂದಾಗಿರುವ ಆರ್ಥಿಕ ಸಂಸ್ಥೆಗಳ ನಿರ್ಧಾರವನ್ನು ಮಲೆನಾಡು ರೈತ ಹಿತರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಈ ಕೂಡಲೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಹಣಕಾಸು ಸಂಸ್ಥೆಗಳಿಗೆ ಬಲವಂತದ ಸಾಲ ವಸೂಲಾತಿ ಮಾಡದಂತೆ ಸೂಚಿಸಬೇಕು ಎಂದು ಸಂಘಟನೆಯ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದ್ದಾರೆ.

ತುರ್ತು ಹೇಳಿಕೆ ನೀಡಿರುವ ಅವರು , ಸಾಲ ವಸೂಲಾತಿಗಾಗಿ ಮನೆಗೆ ಬರುತ್ತಿರುವ ಬ್ಯಾಂಕ್ ನವರಿಂದ ಕೊರೋನ ಹರಡುವ ಭೀತಿಯನ್ನೂ ಕೂಡ ಬೆಳೆಗಾರರು ಕೂಲಿ ಕಾರ್ಮಿಕರು ಎದುರಿಸುತ್ತಿದ್ದಾರೆ. ಕೆಲಸವಿಲ್ಲದೆ ಸಾಲ ತುಂಬಲಾಗದೆ ಮನೆಯಲ್ಲಿ‌ ಕುಳಿತವರಿಗೆ ಕರೆ ಮಾಡಿ ಸಾಲ ಕಟ್ಟುವಂತೆ ಸಂಘ ಸಂಸ್ಥೆಗಳು ಒತ್ತಾಯ ಮಾಡುತ್ತಿರುವುದರಿಂದ ಮಾನಸಿಕ ಹಿಂಸೆಗೆ ಒಳಗಾಗಿ ಆತ್ಮಹತ್ಯೆಯಂತಹ ಘಟನೆಗಳಿಗೆ ಇದು ಅವಕಾಶ ಮಾಡಿಕೊಡಬಹುದು.
ಹೀಗಾಗಿ ಸಾಲದ ಅವಧಿಯನ್ನು ಅನಿರ್ದಿಷ್ಟಾವಧಿ ತನಕ ಮುಂದೂಡುವಂತೆ ಅವರು ಆಗ್ರಹಿಸಿದ್ದಾರೆ.
ಬಲವಂತದ ವಸೂಲಾತಿ, ಹಿಂಸೆ ಹೀಗೆಯೇ ಮುಂದುವರೆದಲ್ಲಿ ಎರಡು ಜಿಲ್ಲೆಗಳ ರೈತರೆಲ್ಲಾ ಒಂದಾಗಿ ಬಲವಂತದ ಸಾಲ ವಸೂಲಿಗಾರರನ್ನು ತಾಳ್ಮೆ ಕಳೆದುಕೊಂಡು ಸಂಸ್ಥೆಗಳ ವಿರುದ್ದ ಕಾನೂನು ಬಾಹಿರವಾಗಿ ನಡೆದುಕೊಳ್ಳುವ ಸಂದರ್ಭಗಳೂ ಬರಬಹುದು.
ಇಂತಹ ಸಂದಿಗ್ಧ ಸಮಯದಲ್ಲಿ ಬ್ಯಾಂಕ್ ಗಳು ಬೆಳೆಗಾರರ ಮೇಲೆ ದಬ್ಬಾಳಿಕೆಯನ್ನು ಮಾಡಿದರೆ ಬೆಳೆಗಾರರೆಲ್ಲಾ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ.144 ಸೆಕ್ಷನ್ ಇರುವುದರಿಂದ ಪೋಲಿಸರು ಅರೆಸ್ಟ್ ಮಾಡಿದರೆ ಆರ್ಥಿಕ ಸಂಸ್ಥೆಗಳು, ಬ್ಯಾಂಕ್ ನವರೇ ನೇರ ಹೊಣೆಗಾರರಾಗಬೇಕಾಗುತ್ತದೆ.ದಯವಿಟ್ಟು ಬಲವಂತದ ಸಾಲ ವಸೂಲಿ ಮಾಡುವುದನ್ನು ಕೂಡಲೇ ನಿಲ್ಲಿಸಿ ಮತ್ತು ಈ ಬಗ್ಗೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ತತ್ ಕ್ಷಣ ಕ್ರಮವಹಿಸುವಂತೆ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.