ಸರಕಾರದ ಮನವಿಗೆ ಜನರ ಸ್ಪಂದನೆ ಕಡಿಮೆಯಾಗಿದೆ : ಇಸ್ಮಾಯಿಲ್ ಪಡ್ಪಿನಂಗಡಿ

Advt_Headding_Middle
Advt_Headding_Middle

 

ಕೊರೋನಾ ವೈರಸ್ ಎಂಬ ಭಯಾನಕ ರೋಗದಿಂದ ವಿಶ್ವದ ಹಲವಾರು ದೇಶಗಳು ತತ್ತರಿಸಿ ಹೋಗಿವೆ.ಇಟೆಲಿ, ಚೀನಾ ದಂತಹ ಬಲಿಷ್ಡ ದೇಶಗಳೇ ಇದರ ಪರಿಣಾಮಕ್ಕೆ ತುತ್ತಾಗಿವೆ.


ನಮ್ಮ ದೇಶದಲ್ಲೂ ಈ ರೋಗಕ್ಕೆತುತ್ತಾಗಿ ಕೆಲವು ಮಂದಿ ಮರಣ ಹೊಂದಿದ್ದಾರೆ. ಹಲವಾರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಸರಕಾರ ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿಯೇ 21 ದಿವಸಗಳ ಲಾಕ್ ಡೌನ್ ಜಾರಿ ತಂದಿದೆ ಆದರೂ ನಮಗೆ ಈ ಬಗ್ಗೆ ಜಾಗ್ರತಿ ಉಂಟಾಗಿಲ್ಲ. ಮನೆಯಲ್ಲಿಯೇ ಕುಳಿತುಕೊಳ್ಳಿ ಎಂಬ ಸರಕಾರದ ಮನವಿಗೂ, ಆದೇಶಕ್ಕೂ ನಮ್ಮ ಸ್ಪಂದನೆ ಏನೂ ಸಾಲದು. ಈ ರೋಗದ ಗಂಬೀರತೆ ನಾವು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಸ್ವಯಂ ನಿಯಂತ್ರಣ ವನ್ನು ನಾವು ಮಾಡಬೇಕು.ಆರೋಗ್ಯ ಇಲಾಖೆಯ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು.ನಾವು ಈಗಾಗಲೇ ಈ ಬಗ್ಗೆ ಸ್ಥಳೀಯ ಸಂಘಟನೆಗಳು ಜನ ಜಾಗ್ರತಿ, ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಬೇಕು
‌‌‌‌‌ಇದರ ದುಷ್ಪರಿಣಾಮ ದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೂಲಿ ಕೆಲಸಕ್ಕೆ ಹೋಗುವವರಿಗೆ ಮತ್ತು ಕ್ರಷಿಕರಿಗೆ, ವ್ಯಾಪಾರಸ್ಥರಿಗೆ ಮುಂದೆ ಬಹಳಷ್ಟು ತೊಂದರೆ ಆಗಲಿದೆ.ನಿತ್ಯ ಜೀವನಕ್ಕೆ ಬೇಕಾದ ಸಾಮಾಗ್ರಿಗಳು ಸಿಗುವಂತೆ ಸರಕಾರ ಮಾಡಿದ್ದರೂ ಇನ್ನೂ‌ ಹೀಗೆ ಮುಂದುವರಿದರೆ ಅದನ್ನು ಕೊಂಡುಕೊಳ್ಳಲು ಹಣಕಾಸಿನ ವ್ಯವಸ್ಥೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಮುಂದೆ ಬರಬಹುದು.ಸರಕಾರ ಮತ್ತು ಸಂಘ ಸಂಸ್ಥೆಗಳು ಈ ಬಗ್ಗೆ ಸಂಕಷ್ಟಕ್ಕೆ ತುತ್ತಾದವರಿಗೆ ಸಹಾಯ ಮಾಡಬೇಕು.ಎಲ್ಲರೂ ಈ ಬಗ್ಗೆ ಚಿಂತನೆಯನ್ನು ಮಾಡಬೇಕು ಎಂದು ಸುಳ್ಯ ಅಲ್ಪ ಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.