Breaking News

ಕಳಂಜ ಸಹಕಾರಿ‌ ಸಂಘದಿಂದ ಮನೆ ಮನೆಗೆ ದಿನಸಿ ಸಾಮಾಗ್ರಿ

Advt_Headding_Middle
Advt_Headding_Middle

 

ನಾಳೆಯಿಂದಲೇ ಆರಂಭ

ಜಗತ್ತನ್ನೇ ತನ್ನ ತೆಕ್ಕೆಯಲ್ಲಿ ಆಲಂಗಿಸಲು‌ ಮುಂದಾಗಿರುವ ಕೊರೊನಾ ಭೀತಿಯಿಂದ ಕಂಗಟ್ಟು ಮನೆಯಿಂದ ಹೊರ ಬಾರದಂತೆ ಸರಕಾರ ಆದೇಶಿದ್ದು, ಈ ಹಿನ್ನೆಲೆಯಲ್ಲಿ ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಿನೂತನ ರೀತಿಯಲ್ಲಿ ಗ್ರಾಹಕರ ಸಹಕಾರಕ್ಕೆ ಮುಂದಾಗಿದೆ. ಗ್ರಾಹಕರ ವಾಟ್ಸಾಫ್ ಗ್ರೂಪ್ ಮಾಡಿಕೊಂಡು ಆಮೂಲಕ ಗ್ರಾಹಕರು ತಮಗೆ ಬೇಕಾದ ಅಗತ್ಯ ಸಾಮಾಗ್ರಿಗಳ ಪಟ್ಟಿಯನ್ನು ಮೊಬೈಲ್ ಮೂಲಕ ಗ್ರೂಪಿಗೆ ಅಥವಾ ಸಿಬ್ಬಂದಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಬೇಕು. ಸಂಘದ ದಿನಸಿ ವಿಭಾಗದಲ್ಲಿ ಲಭ್ಯವಿರುವ ಸಾಮಾಗ್ರಿಗಳನ್ನು ನಿರ್ದೇಶಕರ ಮೂಲಕ ಮತ್ತು ಸ್ವಯಂ ಸೇವಕರ ಮೂಲಕ ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಈ ವ್ಯವಸ್ಥೆ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಎ.ಎಂ. ಸುಧಾಕರ ರೈ ಸ್ವಯಂ ಸೇವಕ ಸುಭಾಶ್ಚಂದ್ರ ಅಯ್ಯನಕಟ್ಟೆ ತಿಳಿಸಿರುತ್ತಾರೆ. ಈ ಸೌಲಭ್ಯ ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರು ಮತ್ತು ಬಾಳಿಲ ಶಾಖೆಯಲ್ಲಿ ಸಿಗಲಿದೆ. ಈ ಯೋಜನೆಯಿಂದ ಗ್ರಾಹಕರು ಅಂಗಡಿ ಮುಂದೆ ಕ್ಯೂ ನಿಲ್ಲೋ ಕೆಲಸನೂ ತಪ್ಪುತ್ತದೆ, ಅಲೆದಾಡೋ ಕೆಲಸನೂ ಇಲ್ಲ ಮತ್ತು ಕೊರೊನಾ ಸೋಂಕು ತಡೆಗಟ್ಟವ ಸರಕಾರದ ಲಾಕ್ ಡೌನ್ ಆದೇಶವನ್ನು ಪಾಲಿಸಿದಂತೆಯೂ ಅಗಲಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ಕೆ ಇಳಿದ ಮೊದಲ ಸಹಕಾರಿ ಸಂಘ ಇದಾಗಿದ್ದು, ಇತರರಿಗೂ ಮಾದರಿಯಾಗಲಿದೆ.

ಸದಸ್ಯ ಗ್ರಾಹಕರಿಗೆ ತುರ್ತಾಗಿ ಅಗತ್ಯ ಸಾಮಾಗ್ರಿಗಳು ಬೇಕಾದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಅಗತ್ಯ ಸಾಮಾಗ್ರಿಗಳ ಪಟ್ಟಿಯನ್ನು ವಾಟ್ಸಾಫ್ ಮಾಡಬಹುದು ಮೆಸೇಜ್ ಅಥವಾ ಕರೆ ಮಾಡಿ ತಿಳಿಸಬಹುದು. ಗ್ರಾಹಕರು ಸಂಘದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಕೋಟೆಮುಂಡುಗಾರು ಪ್ರಧಾನ ಕಚೇರಿ-
ಕೆ. ವೆಂಕಪ್ಪಯ್ಯ : 9480570462
ಕೇಶವ: 9449103829
ಅಖಿಲ್: 7619337332
ಸುಭಾಶ್ಚಂದ್ರ ಪಿ.: 9448501583
ಶುಭ ಕುಮಾರ್: 9448311904
ಅಜಿತ್ ರಾವ್: 9448428923
ಈಶ್ವರ ವಾರಣಾಶಿ 9449615878

ಬಾಳಿಲ ಶಾಖೆ-

ಚೇತನ್ ಕೆ.ಪಿ: 6360790234
ಸತೀಶ್ ಎ.ವಿ: 8762160987
ಆನಂದ ಗೌಡ ಕೆ.: 9449471351
ಸುಧಾಕರ ರೈ ಎ.ಎಂ.: 9741938889

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.