21 ದಿನ ನಮ್ಮ ಮನೆಗೆ ಬರಬೇಡಿ ನಾವೂ ನಿಮ್ಮ ಮನೆಗೆ ಬರೋದಿಲ್ಲ

Advt_Headding_Middle
Advt_Headding_Middle

 

ಮನೆಯ ಗೇಟು ಹಾಗೂ ಗೋಡೆಗೆ ತಾವೇ ಬೋರ್ಡ್ ಹಾಕಿಕೊಂಡ ಗ್ರಾ.ಪಂ. ಸದಸ್ಯ

ಕೊರೊನಾ ವೈರಸ್ ತಡೆಗೆ ವಿಶೇಷ ಕಾಳಜಿ

“ನಮ್ಮ ಮನೆಗೆ ಯಾರೂ 21 ದಿನ ಬರಬೇಡಿ. ನಾವೂ ಕೂಡಾ ಯಾರ ಮನೆಗೂ 21 ದಿನ ಬರುವುದಿಲ್ಲ ಎಂದು ಮಂಡೆಕೋಲು ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡ ತಮ್ಮ ಮನೆಯ ಗೇಟು ಹಾಗೂ ಮನೆಯ ಗೋಡೆಯ ಮೇಲೆ ಬರೆದು ಕೊರೊನ ತಡೆ ವಿಚಾರದಲ್ಲಿ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಮನೆಯ ಗೋಡೆಯ ಮೇಲೆ ಈ ರೀತಿ ಬರೆದು ಸ್ವಯಂ ಜಾಗೃತಿ ಯೊಂದಿಗೆ ಕೊರೊನಾ ತೊಲಗಿಸಲು ಕೈ ಜೋಡಿಸೋಣ ಎಂದಿದ್ದಾರೆ.

” ತಾನು ಪಂಚಾಯತ್ ಸದಸ್ಯನಾಗಿರುವುದರಿಂದ ಸಮಸ್ಯೆ ಹೇಳಿಕೊಳ್ಳಬೇಕಿದ್ದರೆ ದೂರವಾಣಿಗೆ ಕರೆ ಮಾಡಬಹುದು. ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿರುವ ಅವರು, “ಕೊರೊನಾ ವೈರಸ್ ತಡೆ ಗಟ್ಟಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ಅಗತ್ಯ ಕ್ರಮ ಕೈಗೊಂಡಿದೆ. ಗ್ರಾ.ಪಂ. ಅಧ್ಯಕ್ಷ ರು ಆಯಾ ವಾರ್ಡಿನ ಆಗು ಹೋಗುಗಳನ್ನು ನೋಡಿಕೊಳ್ಳಲು ಸೂಚಿಸಿದ್ದಾರೆ. ಮತ್ತು ಗ್ರಾ.ಪಂ. ನಲ್ಲಿ ಪಿ.ಡಿ.ಒ. ಹಾಗೂ ಸಿಬ್ಬಂದಿಗಳು ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆ. ಪಂಜಿಕಲ್ಲಿನ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರ ಜತೆ ಮಾಹಿತಿ ಪಡೆಯಲಾಗುತ್ತಿದೆ. ನನ್ನ ಭಾಗದ ಜನಗಳಿಗೆ ಒಂದು ತಿಂಗಳಿಗೆ ಬೇಕಾದ ಅಗತ್ಯ ವಸ್ತುಗಳ ಸಂಗ್ರಹಕ್ಕೆ ಸೂಚಿಸಲಾಗಿದೆ. ಸಮಸ್ಯೆ ಯಾದರೆ ಸಂಪರ್ಕಿಸುವಂತೆಯೂ ಹೇಳಿದ್ದೇವೆ. ದೇಶದ ಪ್ರಧಾನಿ ಯವರು ಲಾಕ್ ಡೌನ್ ಮಾಡಲು ಹೇಳಿದ್ದರಿಂದ ನಾವು ಮನೆ ಬಿಟ್ಟು ಎಲ್ಲಿಯೂ ಹೋಗಿಲ್ಲ. ಮನೆಯಲ್ಲಿ ಯಾರೂ ಬರಬಾರದೆಂದು ಬೋರ್ಡ್ ಹಾಕಿದ್ದೇವೆ. ಪ್ರತಿ ಯೊಬ್ಬರೂ ಈ ರೀತಿ ಸ್ವಯಂ ಜಾಗೃತಿ ಮೂಡಿಸಿಕೊಳ್ಳಲು ಸಹಕರಿಸಬೇಕು. ಯಾರಿಗಾದರೂ ತೊಂದರೆಯಾದರೆ ನಮ್ಮ ದೂರವಾಣಿ ಸಂಖ್ಯೆ ನನ್ನ ಭಾಗದ ಜನರಲ್ಲಿ ಇದೆ ಅಥವಾ ಗ್ರಾ.ಪಂ. ನ್ನು ಸಂಪರ್ಕ ಮಾಡಿದರೆ ಅಗತ್ಯ ವಸ್ತುಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬಾಲಚಂದ್ರರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.