Breaking News

ಪ್ರತಿ ಮನೆಗೆ ಕನಿಷ್ಟ 2 ತಿಂಗಳ ದಿನಸಿ ಸಾಮಗ್ರಿಯನ್ನು ಕೊಡುವ ವ್ಯವಸ್ಥೆ ಸರ್ಕಾರ ಮಾಡಲಿ : ತಿರುಮಲೇಶ್ವರಿ ಅಡ್ಕಾರು

Advt_Headding_Middle
Advt_Headding_Middle

 


ಮಹಾಮಾರಿ ಕೊರೋನಾ ,ಎಂಬ ಹೆಸರೇ ಹೇಳುವಂತೆ ಇದೊಂದು ವಿಶ್ವ ವ್ಯಾಪಿಯಾಗಿ ಹರಡಿ ತನ್ನ ಕಪಿ ಮುಷ್ಠಿಯಲ್ಲಿ ಹಿಡಿದು, ಜನಸಾಮಾನ್ಯರಿಂದ – ಉನ್ನತ ಮಟ್ಟದವರು ಎನಿಕೊಂಡವರನ್ನು ಬಿಡದೆ ಬಹಳ ಸಂಕಷ್ಟಕ್ಕೆ ತಂದೊಡ್ಡಿದೆ. ಆದುದರಿಂದ ಈ ಮಾರಿಯನ್ನು ಓಡಿಸುವುದಕ್ಕಾಗಿ ಇಂದು ನಾವೆಲ್ಲರೂ ಜನತಾ ಕರ್ಫ್ಯೂವನ್ನು ಪಾಲಿಸಬೇಕು. 21 ದಿನಗಳ ಕಾಲ ಮನೆಯಲ್ಲಿ ಇದ್ದು ಸರಕಾರದ ಆಜ್ಞೆಯನ್ನು ಪಾಲಿಸಬೇಕೆಂದು ಹೇಳಬಯಸುತ್ತೇನೆ. ಹಾಗೆಯೇ ಇದು ಹೀಗೆ ಮುಂದುವರಿದರೆ ಜನಸಾಮಾನ್ಯರು ನಿತ್ಯದ ಬಳಕೆಯ ವಸ್ತುಗಳಿಗಾಗಿ ಪರದಾಡಬೇಕಾದೀತು. ಆದುದರಿಂದ ಸರಕಾರವು ಪ್ರತಿ ಮನೆಗೆ ಕನಿಷ್ಟ 2 ತಿಂಗಳ ದಿನಸಿ ಸಾಮಗ್ರಿಯನ್ನು ಕೊಡುವ ವ್ಯವಸ್ಥೆ ಮಾಡಲಿ..ಯಾರು ಹಸಿವಿನಿಂದ ಬಳಲದಂತೆ ಕಾಯಬೇಕು ಎಂದು ತಿಳಿಯಬಯಸುತ್ತೇನೆ. ಮುಂಜಾಗ್ರತೆಯ ಕ್ರಮವೆಂದರೆ ಸದ್ಯಕ್ಕೆ ಯಾವುದೇ ಬ್ಯಾಂಕು ಅಥವಾ ಹಣಕಾಸಿನ ಸಂಘ ಸಂಸ್ಥೆಗಳು ಸಾಲ ಮರುಪಾವತಿಗಾಗಿ ಜನರನ್ನು ಒತ್ತಾಯ ಮಾಡದಂತೆ ಸರಕಾರ ಸೂಚಿಸಬೇಕು ಮತ್ತು ಬಾಡಿಗೆಗೆ ವಾಸವಿರುವವರಿಂದ 1,2 ತಿಂಗಳ ಬಾಡಿಗೆಯನ್ನು ಬಲವಂತವಾಗಿ ಕೇಳದಂತೆ ಸರಕಾರ ಸೂಚಿಸಬೇಕು.

ತಿರುಮಲೇಶ್ವರಿ ಅಡ್ಕಾರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.