ಸುದ್ದಿ ಬಿಡುಗಡೆಯವರ ಕಾರ್ಯ ಶ್ಲಾಘನೀಯ – ಎಂ. ಜಿ. ಕಾವೇರಮ್ಮ

Advt_Headding_Middle
Advt_Headding_Middle

ಮಹಾಮಾರಿ ಕರೋನಾ ವಿಶ್ವ ವ್ಯಾಪಿಯಾಗಿ ಹರಡಿದೆ.ಯಾರೋ ಮಾಡಿದ ತಪ್ಪಿಗಾಗಿ ಇನ್ಯಾರೋ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ನಮ್ಮ ಪ್ರಧಾನಿ ಮೋದೀಜಿಯವರು 21 ದಿನಗಳ ಕಾಲ ಸ್ವಯಂ ಗೃಹಬಂಧನದಲ್ಲಿರಲು ಆದೇಶ ಹೊರಡಿಸಿದುದು ಸ್ತುತ್ಯಾರ್ಹ. ಆದರೆ ಗರ್ಭಿಣಿ ಸ್ತ್ರೀಯರಿಗೆ ಪ್ರಸವ ವೇದನೆ ಬಂದಾಗ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ವಹಿಸಿಕೊಂಡು ಅವರಿಗೆ ರಕ್ಷಣೆ ಕೊಡುವ ವ್ಯವಸ್ಥೆಯನ್ನು ಮಾಡಬೇಕು.ದಿನಕೂಲಿ ನೌಕರರಿಗೆ ಒಂದು ಹೊತ್ತಿನ ಊಟವನ್ನಾದರೂ ಒದಗಿಸುವ ವ್ಯವಸ್ಥೆಯನ್ನು ಮಾಡಬೇಕು. ಸುಳ್ಯದ ಜನತೆ ಸರಕಾರದ ಆದೇಶವನ್ನು ನಿಯತ್ತಾಗಿ ಪಾಲಿಸುತ್ತಿರುವುದು ಸಂತೋಷಕರ.ಸುದ್ದಿ ಬಿಡುಗಡೆಯವರು ಜನ ಜಾಗೃತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಸೇವೆ ಅಮೋಘವಾದುದು. ಬೇಗನೇ ಕರೋನಾ ಭಾರತವನ್ನು ಬಿಟ್ಟು ತೊಲಗಲಿ.ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮೋದೀಜಿಯವರ ಆದೇಶವನ್ನು ನಿಯತ್ತಾಗಿ ಪಾಲಿಸೋಣ.
ಸರ್ವೇ ಜನೇ ಸುಖಿನೋ ಭವಂತು.

ಎಂ. ಜಿ. ಕಾವೇರಮ್ಮ. ನಿಸರ್ಗ ಸುಳ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.