12 ಗಂಟೆ ಬಳಿಕ ಮತ್ತೆ ಸ್ತಬ್ಧವಾಯಿತು ಜನಜೀವನ

Advt_Headding_Middle
Advt_Headding_Middle

ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಭಾರತ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಸುಳ್ಯ ನಗರ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಾಂತರ ಪ್ರದೇಶಗಳು ಸಂಪೂರ್ಣವಾಗಿ ಸ್ಥಬ್ದಗೊಂಡಿದೆ.

 

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಜನರ ದಿನಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಎಪ್ರಿಲ್ 14ರವರೆಗೆ ಪ್ರತಿ ದಿನ ಬೆಳಿಗ್ಗೆ 6ರಿಂದ12 ಗಂಟೆಯವರೆಗೆ ಸಮಯ ನಿಗದಿ ಮಾಡಿದ್ದು, ಜನರು ಈ ಸಮಯದಲ್ಲಿ ತಮ್ಮ ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಅಗತ್ಯ ವಸ್ತುಗಳಾದ ತರಕಾರಿ, ಮೆಡಿಕಲ್ ಸೇವೆ, ದಿನಸಿ ಅಂಗಡಿ ಹಾಗೂ ಸೂಪರ್ ಮಾರ್ಕೆಟ್ ಗಳು ಮಾತ್ರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿದ್ದು, ಪ್ರತೀ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಿಳಿ ಬಣ್ಣದಲ್ಲಿ ಚೌಕಾಕಾರದ ಮಾರ್ಕ್ ಮಾಡಲಾಗಿದ್ದು, ಜನರು ಆ ನಿಗದಿಪಡಿಸಿದ ಮಾರ್ಕ್ ಒಳಗಡೆ ಕ್ಯೂ ನಿಂತು ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು.

ಉಳಿದಂತೆ ಗ್ರಾಮಾಂತರ ಪ್ರದೇಶಗಳಾದ ಜಾಲ್ಸೂರು, ಬೆಳ್ಳಾರೆ, ಗುತ್ತಿಗಾರು, ಅರಂತೋಡು, ಕಲ್ಲುಗುಂಡಿ, ಪಂಜ, ಸುಬ್ರಹ್ಮಣ್ಯ, ಹರಿಹರ ಪಲ್ಲತಡ್ಕ, ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಅಂಗಡಿಗಳ ಮುಂದೆ ಇದೇ ರೀತಿಯಲ್ಲಿ ಮಾರ್ಕ್ ಮಾಡಲಾಗಿದ್ದು, ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಸಾಮಾಗ್ರಿಗಳನ್ನು ಖರೀದಿಸಿದರು.

ಕೆಲವೊಂದು ಗ್ರಾಮಾಂತರ ಪ್ರದೇಶಗಳಲ್ಲಿ ದಿನಸಿ ಅಂಗಡಿಗಳಲ್ಲಿ ಸರಕು ಸಾಗಾಟದ ವಾಹನಳ ಅಲಭ್ಯತೆಯಿಂದ ಸಾಮಾಗ್ರಿಗಳ ಕೊರತೆಯಾಗುತ್ತಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.