ಕ್ಷೌರ ವೃತ್ತಿ ಯನ್ನು ಅವಶ್ಯ ಸೇವೆಯೆಂದು ಪರಿಗಣಿಸಲು ಸರಕಾರಕ್ಕೆ ತಾಲೂಕು ಸವಿತಾ ಸಮಾಜ ಮನವಿ

Advt_Headding_Middle
Advt_Headding_Middle

ಕ್ಷೌರಿಕ ವೃತ್ತಿ ವಾಣಿಜ್ಯ ಉದ್ದೇಶದ್ದಲ್ಲ. ಅದು ಕುಲಕಸುಬು. ಆರೋಗ್ಯದ ಮತ್ತು ನೆಮ್ಮದಿಯ ದೃಷ್ಟಿಯಿಂದ ಕೂಡಾ ಕ್ಷೌರ ಸೇವೆ ಅತೀ ಅಗತ್ಯ. ಆದ್ದರಿಂದ ಸರಕಾರವು ಕ್ಷೌರಿಕ ವೃತ್ತಿಯನ್ನು ಅವಶ್ಯಕ ಸೇವೆಯ ಪಟ್ಟಿಗೆ ಸೇರಿಸಿ, ಕಾರ್ಯನಿರ್ವಹಿಸಲು ಅನುವು ಮಾಡಿ ಕೊಡಬೇಕು. ಕ್ಷೌರಿಕರಿಗೆ ಮಾಸ್ಕ್ ಮತ್ತು ಗ್ಲೌಸ್ ಉಚಿತ ಅಥವಾ ರಿಯಾಯಿತಿ ದರದಲ್ಲಿ ಒದಗಿಸಬೇಕು” ಎಂದು ಸುಳ್ಯ ತಾಲೂಕು ಸವಿತಾ ಸಮಾಜ ಹಾಗೂ ಸುಳ್ಯ ತಾಲೂಕು ಬಾರ್ಬರ್ಸ್ ಅಸೋಸಿಯೇಶನ್ ರಾಜ್ಯ ಸರಕಾರವನ್ನು ಒತ್ತಾಯಿಸಿವೆ.


ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಘೋಸಿಸಲಾಗಿರುವುದರಿಂದ ಸಾವಿರಾರು ಬಡ ಕ್ಷೌರಿಕರ ಕುಟುಂಬ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಬಡವರಿಗೆ ನೆರವಾಗುವುದಕ್ಕಾಗಿ ಸರಕಾರವು ಕ್ಷೌರಿಕರೂ ಸೇರಿದಂತೆ ಎಲ್ಲ ಬಡವರ ಮನೆಗಳಿಗೂ ತಿಂಗಳ ಪಡಿತರ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು. ಎಲ್ಲ ಬಡವರಿಗೂ ಒಂದು ಸಿಲಿಂಡರ್ ಗ್ಯಾಸ್ ಉಚಿತವಾಗಿ ನೀಡಬೇಕು. ಸಾಲದ ಮೇಲಿನ ಬಡ್ಡಿಯನ್ನು ಎರಡು ತಿಂಗಳು ಮನ್ನಾ ಮಾಡಬೇಕಲ್ಲದೆ, ಸಾಲದ ಕಂತು ಮರುಪಾವತಿಯ ಅವಧಿಯನ್ನು ಜೂನ್ ವರೆಗೆ ಮುಂದೂಡಬೇಕು” ಎಂದು ಅವರು ಮನವಿಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಸವಿತಾ ಸಮಾಜದ ಅಧ್ಯಕ್ಷ ಗುರುರಾಜ ಅಜ್ಜಾವರ, ಬಾರ್ಬರ್ಸ್ ಅಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಭಂಡಾರಿ, ಪದಾಧಿಕಾರಿಗಳಾದ ಅವಿನಾಶ್ ಕೇರ್ಪಳ, ಧನು ಮೂರ್ನಾಡು ಹಾಗೂ ಗೌರವ ಸಲಹೆಗಾರರಾಗಿರುವ ಹರೀಶ್ ಬಂಟ್ವಾಳ್ ರವರು ತಹಶೀಲ್ದಾರ್ ಅನಂತಶಂಕರರಿಗೆ ಮನವಿ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.