ಕೊರೊನಾ ವೈರಸ್ ತಡೆಗಟ್ಟಲು ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ – ಮಣಿಯಾನ ಪುರುಷೋತ್ತಮ

Advt_Headding_Middle
Advt_Headding_Middle

 

ಕೊರೊನಾ ವೈರಸನ್ನು ತಡೆಗಟ್ಟಲು ನಾವು ಪಂಚಾಯತ್ ವತಿಯಿಂದ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ.
ಜೀನಸು, ಪಡಿತರ, ಹಾಲು, ಮೆಡಿಕಲ್, ತರಕಾರಿ ಅಂಗಡಿಗಳು ಅಪರಾಹ್ನ 12.00 ಗಂಟೆವರೆಗೆ ತೆರೆದಿದ್ದು, ಅಂಗಡಿಗಳ ಮುಂದೆ ಜನಸಂದಣಿಯನ್ನು ನಿಯಂತ್ರಿಸಲು ಅಂತರವನ್ನು ಕಾಯ್ದುಕೊಳ್ಳಲು ಗ್ರಾಮ ಪಂಚಾಯತು ವತಿಯಿಂದ ಸುಣ್ಣದ ಗುರುತುಗಳನ್ನು ಹಾಕಲಾಗಿದೆ.

ವಿದೇಶ ಮತ್ತು ಪರ ಊರಿನಿಂದ ಬಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರನ್ನು ಪ್ರತ್ಯೇಕವಾಗಿ ಮನೆಯಲ್ಲಿರುವಂತೆ ತಿಳಿಸಲಾಗಿದೆ.
ಹಾಗೂ ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಗ್ರಾಮ‌ ಪಂಚಾಯತಿಗೆ ತಿಳಿಸಬೇಕಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಈ ಬಗ್ಗೆ ಎರಡು ಗ್ರಾಮಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಗ್ರಾಮ ಮಟ್ಟದ ಕಾರ್ಯಪಡೆಗಳನ್ನು ರಚಿಸಿಕೊಂಡು ಕೊರೊನಾ ತಡೆಗಟ್ಟುವ ಬಗ್ಗೆ ಸರಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ.
ಈ ಬಗ್ಗೆ ಪ್ರತೀ ಮನೆ ಮನೆಗಳಿಗೆ ಮಾಹಿತಿ ನೀಡಲಾಗುತ್ತಿದೆ ಹಾಗೂ ಮಾ.27 ರಂದು ಗ್ರಾಮ ಪಂಚಾಯತು ಸಭಾಂಗಣದಲ್ಲಿ ಗ್ರಾಮ ಮಟ್ಟದ ಕಾರ್ಯಪಡೆಯ ಸದಸ್ಯರ ತುರ್ತು ಸಭೆಯನ್ನು ಕರೆಯಲಾಗಿದೆ. ಭಾರತ ಲಾಕ್ ಡೌನ್ ಗೆ ಪಂಚಾಯತು ಮಟ್ಟದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಮಣಿಯಾನ ಪುರುಷೋತ್ತಮ
ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಪಂಜ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.