ಶಾಸಕ ಎಸ್. ಅಂಗಾರ ಮಂಗಳೂರು ಆಸ್ಪತ್ರೆಗೆ

Advt_Headding_Middle
Advt_Headding_Middle

 

ಕಡಬದಲ್ಲಿ ಲೋ ಬಿಪಿಯಿಂದ ಅಸ್ವಸ್ಥಗೊಂಡಿದ್ದ ಶಾಸಕರು

ಲೋ ಬಿಪಿ ಹಿನ್ನಲೆಯಲ್ಲಿ ದಿಢೀರ್ ಅಸ್ವಸ್ಥಗೊಂಡ ಸುಳ್ಯ ಶಾಸಕ ಎಸ್. ಅಂಗಾರ ಅವರನ್ನು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಡಬದಲ್ಲಿ ಇಂದು ಅಧಿಕಾರಿಗಳ ಮತ್ತು ವರ್ತಕರ ಸಭೆ ನಡೆಸಿದ್ದ ಅಂಗಾರರು ಬಳಿಕ ಕಡಬ ಸಹಕಾರಿ ಸಂಘಕ್ಕೆ ಹೋಗಿ ಪಡಿತರ ವಿತರಣೆಗೆ ಸಂಬಂಧಿಸಿದ ದೂರುಗಳ ಮತ್ತು ಸಮಸ್ಯೆ ಪರಿಹಾರದ ಮಾಹಿತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಅಸ್ವಸ್ಥಗೊಂಡಾಗ ಸಮೀಪದಲ್ಲೇ ಇರುವ ಕಡಬ ಸರಕಾರಿ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಲಾಯಿತಲ್ಲದೆ, ಪಕ್ಕದಲ್ಲೇ ಇರುವ ಜನೌಷಧಿ ಕೇಂದ್ರದಲ್ಲಿ ಇ.ಸಿ.ಜಿ. ಪರಿಶೀಲಿಸಲಾಯಿತು. ಬಳಿಕ ಮಂಗಳೂರಿನ ಡಾ.ಪದ್ಮನಾಭ ಕಾಮತ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದರು. ಅವರ ಸಲಹೆಯಂತೆ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕೊಂಡೊಯ್ದಲಾಯಿತು. ಜತೆಗಿದ್ದ ಪುತ್ತೂರು ಎ.ಪಿ.ಎಂ.ಸಿ.ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮತ್ತಿತರರು ಶಾಸಕರನ್ನು ಪುತ್ತೂರಿಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿಗೆ ಕೆ.ಎಂಸಿ. ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಶಾಸಕರು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.