Breaking News

ನಮ್ಮನ್ನು ನಾವೇ ರಕ್ಷಿಸಿಕೊಳ್ಳೊಣ : ಕುದ್ಪಾಜೆ

Advt_Headding_Middle
Advt_Headding_Middle

ಕೋರೊನ ,( Covid19)
ಸೋಂಕಿನಿಂದ ನಮ್ಮ ದೇಶವು ತತ್ತರಿಸಿರುವುದು ಎಲ್ಲರಿಗೂ ತಿಳಿದ ವಿಷಯ.ಮಾನ್ಯ ಪ್ರಧಾನ ಮಂತ್ರಿಯವರ Lock down ಆದೇಶವನ್ನು ಜನರು ಪಾಲಿಸದೆ ಇರುವುದು ಬೇಸರದ ಸಂಗತಿ. ನಮ್ಮ ಸುಳ್ಯದ ಜನತೆಗೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿರುವುದು ಸತ್ಯ.ಪ್ರಸ್ತುತ ಸಮಸ್ಯೆ ಗೆ ಸ್ಪಂದಿಸಿ ಜೀವನ ನಡೆಸುವುದು ಅತೀ ಅಗತ್ಯ.ಪ್ರತಿಯೊಂದಕ್ಕೊ ಒಂದೊಂದು ಮಾರ್ಗೊಪಯೋಗಗಳಿವೆ.ಅವುಗಳನ್ನು ಹುಡುಕಿಕೊಂಡು ಜೀವನ ನಡೆಸುವುದು ಅತೀ ಅಗತ್ಯ. ನಾವು ನಮ್ಮ ಜೀವವನ್ನು ರಕ್ಷಣೆ ಮಾಡುವುದರೊಂದಿಗೆ , ನಮ್ಮ ಜೀವವನ್ನು ರಕ್ಷಿಸಲು ಹೆಣಗಾಡುವ ವೈದ್ಯಕೀಯ ಮತ್ತು ಪೋಲಿಸ್ ಇಲಾಖೆ ಗಳ ಕಾರ್ಯತತ್ಪರತೆಗೆ ಕೈ ಜೋಡಿಸುವುದು ಅತೀ ಅಗತ್ಯ.ಯುವಕರಲ್ಲಿ ಜಾಗ್ರತಿ ಮೂಡಿಸುವುದರೊಂದಿಗೆ, ಗುಂಪುಗಾರಿಕೆ ನಡೆಸುತ್ತಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು
ಅತೀ ಅಗತ್ಯ.ಅಗತ್ಯ ವಸ್ತುಗಳನ್ನು ಖರೀದಿಸಲು ನಿಗದಿ ಪಡಿಸಿದ ಸಮಯವನ್ನು ದುರುಪಯೋಗ ಮಾಡುವುದನ್ನು ಮಾಧ್ಯಮ ಗಳಲ್ಲಿ ಕಾಣಬಹುದು.ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಸಮಸ್ಯೆಗಳಿಗೆ ನಾವು ನಮ್ಮನ್ನು ಬಲಿ ತೆಗೆದುಕೊಂಡಂತೆ.ದಯವಿಟ್ಟು ಸರ್ಕಾರದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ.
ಸುಳ್ಯದ ಜನತೆಯಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೇ ಎಪ್ರಿಲ್ 20 ರ ವರೆಗೆ ಮನೆಯಲ್ಲಿ ಇದ್ದುಕೊಂಡು ಕೊರೋನವನ್ನು ತೊಲಗಿಸೋಣ.

ಧನಲಕ್ಷ್ಮಿ ಕುದ್ಪಾಜೆ
ಪ್ರಧಾನ ಕಾರ್ಯದರ್ಶಿ
ರಾಜ್ಯ ಸರ್ಕಾರಿ ನೌಕರರ ಸಂಘ, ಸುಳ್ಯ ತಾಲೂಕು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.