ಸರಕಾರದ ಆದೇಶದಂತೆ ನಡೆದುಕೊಳ್ಳುವುದೊಂದೇ ನಮಗಿರುವ ದಾರಿ – ಶಿವಪ್ರಸಾದ್ ಕೊಲ್ಲರ್ನೂಜಿ ಸಂಚಾಲಕರು, ಬಳಕೆದಾರರ ವೇದಿಕೆ ಕಳಂಜ

Advt_Headding_Middle
Advt_Headding_Middle

ಒಈಗಾಗಲೇ ವೈದ್ಯರುಗಳು ತಿಳಿಸಿರುವಂತೆ ಕೊರೊನ ವೈರಸ್ ಬಗ್ಗೆ ಆತಂಕ ಬೇಡ. ಜಾಗ್ರತೆಯಿಂದ ಇರಬೇಕು. ಈಗಾಗಲೇ ಸರಕಾರವು ಆದೇಶಿಸಿದಂತೆ ಯಾರು ಕೂಡಾ ಮನೆಗಳಿಂದ ಹೊರ ಬರಲೇ ಬಾರದು. 60 ವರ್ಷಗಳಿಂದ ಮೇಲ್ಪಟ್ಟವರು,.ಹೃದಯ ಸಮಸ್ಯೆಗಳಿರುವವರು, ಅಸ್ತಮಾ ಸಮಸ್ಯೆಯಿರುವವರು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಉಳ್ಳವರು ಇತ್ಯಾದಿ ಬಹಳ ಜಾಗ್ರತೆಯಿಂದಿರಬೇಕು..ಚಿಕ್ಕ ಮಕ್ಕಳನ್ನು ಕೂಡಾ ಜಾಗ್ರತೆಯಿಂದ ನೋಡಿಕೊಳ್ಳಬೇಕು.

ಶೀತ, ನೆಗಡಿ. ಗಂಟಲು ಕೆರೆತ, ಕೆಮ್ಮು, ಉಸಿರಾಟದ ಸಮಸ್ಯೆಗಳು,.ಮೈ ಕೈ ನೋವು, ಆಯಾಸ ಇತ್ಯಾದಿ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕೆಂದು ವೈದ್ಯರು ಹೇಳುತ್ತಾರೆ.

ಆಗಾಗ ಸಾಬೂನಿನಿಂದ 20 ಸೆಕೆಂಡುಗಳ ತನಕ ಕೈತೊಳೆಯಬೇಕು. ಮನೆಗಳಲ್ಲಿ ಮತ್ತು ಹೊರಗೆ ಸ್ವಚ್ಛತೆಯಿರಬೇಕು. ಒಬ್ಬ ಇನ್ನೊಬ್ಬನೊಡನೆ ಮಾತನಾಡುವಾಗ ಒಂದು ಮೀಟರ್ ದೂರದಲ್ಲಿರಬೇಕು. ಶೇಕ್ ಹ್ಯಾಂಡ್ ಮಾಡುವ ಬದಲು ನಮಸ್ಕರಿಸಬೇಕು.

ಈ ರೀತಿ ವೈದ್ಯರು ತಿಳಿಸಿರುವಂತೆ ಪಾಲಿಸಿದರೆ ಕೊರೊನಾ ಸಮಸ್ಯೆಯಿಂದ ಪಾರಾಗಬಹುದು. ಕೊರೊನಾವು ಒಬ್ಬನಿಂದ ಇನ್ನೊಬ್ಬನಿಗೆ ಬಹಳ ಬೇಗನೆ ಹಬ್ಬುತ್ತಿರುವ ಕಾರಣ ಪ್ರತಿಯೊಬ್ಬನು ಜಾಗ್ರತೆಯಿಂದಿದ್ದು ಯಾರನ್ನೂ ಅನಗತ್ಯವಾಗಿ ಸಂಪರ್ಕಿಸಲೇ ಬಾರದು.

ಈಗ ಸರಕಾರವು ತಿಳಿಸಿದಂತೆ ಅನುಸರಿಸಿದರೆ ಕೊರೊನಾ ಸಮಸ್ಯೆಯಿಂದ ಪಾರಾಗಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.