ನಮ್ಮ ಹಾಗೂ ದೇಶದ ರಕ್ಷಣೆ ನಮ್ಮ ಕೈಯಲಿದೆ: ಪೂರ್ಣಿಮಾ ಚೊಕ್ಕಾಡಿ

Advt_Headding_Middle
Advt_Headding_Middle

21 ದಿನಗಳ ಕಾಲ ನಮ್ಮನ್ನು ನಾವೇ ಬಂಧಿಸಿಕೊಂಡಿಲ್ಲವೆಂದಲ್ಲಿ ವೈರಾಣು ನಮ್ಮನ್ನೇ ಬಂಧಿತವನ್ನಾಗಿಸುತ್ತದೆ. ಸರ್ಕಾರ ನಮ್ಮ ಒಳಿತಿಗಾಗಿ ನೀಡಿದ ಆದೇಶಗಳನ್ನು ಪಾಲಿಸದೇ ಇರುವುದರಿಂದ ಇತರರಿಗೂ ತೊಂದರೆಯಾಗುತ್ತದೆ. ಆರೋಗ್ಯ ಕೇಂದ್ರ, ಪೋಲಿಸರು ತ್ಯಾಗಮಯಿಯೆಂದು ಕಾರ್ಯ ನಿರ್ವಹಿಸುತ್ತಿದ್ದಾರೆ.ಕುಟುಂಬವನ್ನು ತೊರೆದು ದೇಶದ ಜನತೆಯನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ, ಹಾಗೂ ಮಾಧ್ಯಮದವರು ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದ್ದಾರೆ. ಅದು ನಮ್ಮ ಒಳಿತಿಗಾಗಿಯೆಂದು ಯಾಕೆ ಅರಿತುಕೊಳ್ಳುವುದಿಲ್ಲ. ದಿನಸಿಗಳು ಪ್ರತಿದಿನ ಬೇಕೆಂದು ಅನಾವಶ್ಯಕವಾಗಿ ತಿರುಗಾಡಿದರೆ ಇದರಿಂದ ನಮ್ಮ ಮನೆಗೆ ನಾವೇ ವೈರಾಣುಗಳನ್ನು ಕೊಂಡೊಯ್ಯವ ಸ್ಥಿತಿ ಬಂದಿತು. ಆದರೂ ಗಂಭೀರತೆ ತಿಳಿದಿಲ್ಲ, ಕೆಲವರು ಪೋಲಿಸರು ನೀಡಿದ ಪೆಟ್ಟನ್ನು ಪ್ರಸಾದವೆಂದು ಪೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಲೈಕ್ಸ್, ಕಾಮೆಂಟ್ಸ್ ಬರುವಷ್ಟು ಮುಂದುವರೆದರೂ ವೈರಾಣು ದಾಳಿಯಿಂದ ಮುಕ್ತಿ ಪಡೆಯಲು ಚಿಂತಿಸುತ್ತಿಲ್ಲ. 21 ದಿನಗಳ ಕಾಲ ಸರಕಾರದ ನಿಯಮವನ್ನು ಪಾಲಿಸದೇ ಇದ್ದಲಿ ಇನ್ನೂ ಅದೇಷ್ಟೋ ದಿನಗಳು ಕ್ವಾರಂಟೈನ್ ಆಗಿರಬೇಕಾದಿತು ಯೋಚಿಸೋಣಾ. ಈ ಸಮಯವು ನೆಮ್ಮದಿಯಿಲ್ಲದ ಕಠಿಣದ ಬದುಕನ್ನು ಕಳೆಯುತ್ತಿದ್ದೇವೆ, ನೆಮ್ಮದಿಯ ಬದುಕಿಗಾಗಿ ,ನಮ್ಮ ರಕ್ಷಣೆ ಸರ್ಕಾರ ನೀಡಿದ ಆದೇಶದಲ್ಲಿದೆ ಅವುಗಳನ್ನು ಸ್ವೀಕರಿಸೋಣಾ..

ಪೂರ್ಣಿಮಾ ಚೊಕ್ಕಾಡಿ,

ಮುಖ್ಯ ಶಿಕ್ಷಕಿ -ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.