Breaking News

ಲಾಕ್ ಡೌನ್ ಹಿನ್ನೆಲೆ : ಕಳಂಜದಲ್ಲಿ ಬಾಕಿಯಾದ ಚೆನ್ನರಾಯ ಪಟ್ಟಣದ ಕುಟುಂಬ

Advt_Headding_Middle
Advt_Headding_Middle

ಸಕಾಲದಲ್ಲಿ ತಲುಪಿಸುವಲ್ಲಿ ನೆರವಾದ ಎಸ್.ಕೆ ಎಸ್. ಎಸ್ .ಎಫ್. ಬೆಳ್ಳಾರೆ ವಿಖಾಯ ಹಾಗೂ ಶಂಸುಲ್ ಉಲಮಾ ಚಾರಿಟೇಬಲ್ ಸದಸ್ಯರು

ವಾರದ ಹಿಂದೆ ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟನದ ಮನ್ಸೂರ್ ಎಂಬ ಯುವಕ ಕಳಂಜದ ತನ್ನ ಮಾವನ ಮನೆಗೆ ಬಂದಿದ್ದು ಮರಳಿ ಊರಿಗೆ ಹಿಂತಿರುಗಲು ಅಸಾಧ್ಯವಾಯಿತು .ಯಾಕೆಂದರೆ ಕೊರೋನಾ ವೈರಸ್ ಹಾವಳಿಯಿಂದ ಲಾಕ್ ಡೌನ್ ಹಿನ್ನೆಲೆಯಿಂದ ಹೋಗಲು ಅಸಾಧ್ಯ ವಾಯಿತು . ಮನ್ಸೂರ್ ಎಂಬ ಯುವಕನಿಗೆ ಎಮರ್ಜೆನ್ಸಿ ಊರಿಗೆ ತೆರಳಬೇಕಿತ್ತು ಯಾಕಂದರೆ ಅವರ ತಾಯಿ ಚೆನ್ನರಾಯ ಪಟ್ಟಣದಲ್ಲಿ ಒಬ್ಬಳೇ ಇದ್ದು ಮಗನಲ್ಲಿ ಬೇಗನೆ ಬಾ ಮಗನೆ ಮನೆಗೆ ಎಂದು ಹೇಳಿದಳು ಆದರೆ ಹೋಗಲು ಮನ್ಸೂರಿಗೆ ಲಾಕ್ ಡೌನ್ ಹಿನ್ನೆಲೆ ಅಸಾಧ್ಯ ವಾದ ವಿಷಯ ಬೆಳ್ಳಾರೆ ಎಸ್ಕೆ ಎಸ್ ಎಸ್ ಎಫ್ ವಿಖಾಯ ಹಾಗೂ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಇವರ ಗಮನಕ್ಕೆ ಬಂತು.ಈ ಸಮಯದಲ್ಲಿ ಎಲ್ಲರೂ ಹೊರಹೋಗಲು ಹಿಂಜರಿಯುವ ಈ ಸಮಯದಲ್ಲಿ ವಿಖಾಯ ಹಾಗೂ ಟ್ರಸ್ಟ್ ಸದಸ್ಯ ರಾದ ಜಮಾಲುದ್ದೀನ್ ಮಣಿಮಜಲು ಹಾಗೂ ಅಝರುದ್ದೀನ್ ಬೆಳ್ಳಾರೆ ತಕ್ಷಣ ಸ್ಪಂದಿಸಿ ಊರಿಗೆ ತಲುಪಿಸುವಲ್ಲಿ ನೆರವಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.