ಕಲ್ಲಪ್ಪಳ್ಳಿ, ಕನ್ನಡಿ ತೋಡು, ಕನ್ಯಾನ, ಮುರೂರು ಸಹಿತ ಗಡಿ ಪ್ರದೇಶಗಳಲ್ಲಿ ಮಣ್ಣು ಹಾಕಿ ರಸ್ತೆ ಬಂದ್

Advt_Headding_Middle
Advt_Headding_Middle

 

ಕರ್ನಾಟಕ ಸರಕಾರದ ಕ್ರಮದ ವಿರುದ್ಧ ಕೇರಳ ಸರಕಾರ ಮತ್ತು ಗಡಿ ಪ್ರದೇಶದ ಜನರ ಅಸಮಾಧಾನ

ಪ್ರಧಾನಮಂತ್ರಿಗಳ ಗಮನಕ್ಕೆ ತಂದ ಕೇರಳ ಮುಖ್ಯಮಂತ್ರಿ,
ಇಂದು ಬೆಂಗಳೂರಿನ ಸಭೆಯಲ್ಲಿ ತೀರ್ಮಾನ

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ಗಡಿ ಪ್ರದೇಶಗಳಲ್ಲಿ ಕರ್ನಾಟಕ ಸರಕಾರವು ಬಾರಿಕೇಡ್ ಹಾಕಿ ಬಂದ್ ಮಾಡಿದ ಬಳಿಕ ಮಣ್ಣು ಹಾಕಿಯೂ ಬಂದ್ ಮಾಡಿದ ಕ್ರಮದ ವಿರುದ್ಧ ಕೇರಳದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿ ಕೇರಳ ಮುಖ್ಯಂತ್ರಿಯವರು ಈ ವಿಷಯವನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತಂದಿರುವುದಾಗಿ ತಿಳಿದುಬಂದಿದೆ.

ಕೊರೋನಾ ವ್ಯಾಪಕತೆಯ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ವಾಹನ ಸಂಚಾರ ನಿರ್ಬಂಧಿಸುವ ಹಿನ್ನೆಲೆಯಲ್ಲಿ ಕರ್ನಾಟಕದ ಅಧಿಕಾರಿಗಳು ಬಾರಿಕೇಡ್ ಇರಿಸಿ ಬಂದ್ ಮಾಡಿದ್ದರು. ಅಲ್ಲಿ ಪೊಲೀಸರನ್ನೂ ನಿಯೋಜನೆಗಿಳಿಸಲಾಗಿತ್ತು. ಆದರೆ ಎರಡು ದಿನಗಳ ಬಳಿಕ ಈ ಪ್ರದೇಶಗಳಲ್ಲಿ ರಸ್ತೆಗೆ ಜೆ.ಸಿ.ಬಿ.ಮೂಲಕ ಮಣ್ಣಿನ ರಾಶಿ ಹಾಕಿ ಬಂದ್ ಮಾಡಲಾಗಿತ್ತು.

ಸುಳ್ಯ ಕಾಸರಗೋಡು ಸಂಪರ್ಕದ ಪಾಣತ್ತೂರಿನ ಕಲ್ಲಪ್ಪಳ್ಳಿ, ಬಂದಡ್ಕದ ಕನ್ನಡಿತೋಡು, ಅಡೂರಿನ ಕನ್ಯನ, ಪಂಜಿಕಲ್ಲಿನ ಮುರೂರು ಭಾಗದಲ್ಲಿ ಹೀಗೆ ಬಂದ್ ಮಾಡಲಾಗಿತ್ತು. ಅಲ್ಲದೆ ಕರ್ನಾಟಕ ಕೇರಳ ಗಡಿ ಪ್ರದೇಶದ ತಲಪಾಡಿ, ವಯನಾಡು, ಗುಂಡ್ಲುಪೇಟೆ ಭಾಗಗಳನ್ನೂ ಬಂದ್ ಮಾಡಲಾಗಿತ್ತು. ಇದರಿಂದಾಗಿ ತೀರಾ ತುರ್ತು ಸಂದರ್ಭ ಎದುರಾದರೂ ಸಂಪರ್ಕ ಸಾಧ್ಯವಾಗದ ಸ್ಥಿತಿ ಇತ್ತು. ಕಾಸರಗೋಡಿನಿಂದ ತುರ್ತು ಸಂದರ್ಭದಲ್ಲಿ ಮಂಗಳೂರುಗಳಿಗೆ ರೋಗಿಗಳನ್ನು ಸಾಗಿಸಲೂ ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಈ ಕ್ರಮ ಕೇರಳದಲ್ಲಿ ಬಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ಈ ವಿಷಯ ತಂದಿದ್ದರಲ್ಲದೆ, ಕರ್ನಾಟಕ ಸರಕಾರದ ಗಮನಕ್ಕೂ ಮುಖ್ಯ ಕಾರ್ಯದರ್ಶಿಗಳ ಮೂಲಕ ತಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಭೆಯಲ್ಲಿ ನಿರ್ಧಾರ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.