ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಜಾನಕಿ ನಿಧನ

Advt_Headding_Middle
Advt_Headding_Middle

ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಜಾನಕಿ ಯವರು ಮಾ. 27ರಂದು ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. ಇವರು ಬ್ರಹ್ಮಾಕುಮಾರಿ ಸಂಸ್ಥೆಯ 140 ದೇಶಗಳಲ್ಲಿರುವ ಹನ್ನೊಂದು ಸಾವಿರಕ್ಕೂ ಅಧಿಕವಾಗಿರುವ ಸೇವಾಕೇಂದ್ರಗಳಿಗೆ ಆಡಳಿತಾಧಿಕಾರಿಣಿಯಾಗಿದ್ದರು. . ತನ್ನ 17 ನೇ ವಯಸ್ಸಿನಲ್ಲಿಯೇ ಬ್ರಹ್ಮಾಕುಮಾರಿ ಸಂಸ್ಥೆಯ ಸಂಪರ್ಕಕ್ಕೆ ಬಂದ ಇವರು ನಿರಂತರ ಈಶ್ವರೀಯ ಮಾರ್ಗದರ್ಶನದಂತೆ ನಡೆದು ವಿಶ್ವದಾದ್ಯಂತ ಕೊಟ್ಯಾಂತರ ಮಾನವರಿಗೆ ಈಶ್ವರನ ದಿವ್ಯ ಸಂದೇಶವನ್ನು ತಲುಪಿಸುವ ನಿಸ್ವಾರ್ಥ ಸೇವೆಯನ್ನು ಮಾಡಿದರು . ಇವರಿಗೆ ಅನೇಕ ಡಾಕ್ಟರೇಟ್ ಪದವಿಗಳು ಅಂತಾರಾಷ್ಟ್ರೀಯ ಪುರಸ್ಕಾರಗಳು ಸಂದಿವೆ. ಮಾತ್ರವಲ್ಲದೆ ವಿಶ್ವದ ಅತ್ಯಂತ ‘ಸ್ಥಿರ ಬುದ್ಧಿಯ ಮಹಿಳೆ ‘ ಎಂದು ವೈಜ್ಞಾನಿಕವಾಗಿ ಪ್ರಮಾಣೀಕರಿಸಲಾಗಿದೆ .2019 ರಲ್ಲಿಯೂ ಸುಮಾರು ಹನ್ನೊಂದು ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿ ಜನರಿಗೆ ಈಶ್ವರೀಯ ಸಂದೇಶವನ್ನು ತಲುಪಿಸುವ ಸೇವೆ ಮಾಡಿರುವುದು ದಾಖಲೆಯ ವಿಷಯವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.