Breaking News

ರೈತನ ಬದುಕು ಇನ್ನಷ್ಟು ಶೋಚನೀಯವಾಗಲಿದೆ : ನೂಜಾಲು ಪದ್ಮನಾಭ ಗೌಡ

Advt_Headding_Middle
Advt_Headding_Middle

ಸಾಲದಲ್ಲಿಯೇ ಹುಟ್ಟಿ ಸಾಲದಲ್ಲಿಯೇ ಬದುಕಿ ಸಾಲದಲ್ಲಿಯೇ ಸಾಯುವ ರೈತನ ಬದುಕಿಗೆ ಕೊರೋನ ಮಹಾಮಾರಿ ಬರಸಿಡಿಲಿನಂತೆ ಬಂದೆರಗಿದೆ.ದಿನನಿತ್ಯ ಬದುಕಿನ ವಿವಿಧ ಸಮಸ್ಯೆಗಳನ್ನು ಎದುರಿಸಿಕೊಂಡು ಹಾಗೂ ಹೀಗೂ ಜೀವನ ಸಾಗಿಸುತ್ತಿದ್ದ ರೈತನ ಬದುಕು ಮೂರಾಬಟ್ಟೆಯಾಗಲಿದೆ.

ಈ ‌ಬಾರಿಯ ರಾಷ್ಟೀಯ ವಿಪತ್ತು ಕೊರೋನ ಮಹಾಮಾರಿಯ ನಿರ್ವಹಣೆಯ
ಪ್ರಥಮ ಆದ್ಯತೆಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವದು .ಸರಕಾರ ಲಾಕ್ ಡೌನ್ ಘೋಷಿಸಿದೆ. ಇದರಿಂದಾಗಿ ಎಲ್ಲಾ ರೀತಿಯ ಉತ್ಪಾದನಾ ಕೆಲಸಗಳು ನಿಂತು
ಹೋಗಿ ಇಂದಿನ ದಿನಗಳು ಆದಾಯವೇ ಇಲ್ಲದ ಖರ್ಚಿನ ದಿನಗಳು.
ರೈತನ ಬವಣೆಗಳನ್ನುಒಂದೊಂದಾಗಿ ಯೋಚಿಸಿದಾಗ ಭವಿಷ್ಯ ವೇ ಇಲ್ಲವೇನೋ ಎಂಬಂತಾಗಿದೆ. ಪರವೂರು ಪರದೇಶಗಳಲ್ಲಿ ಉದ್ಯೋಗ ವ್ಯವಹಾರಗಳನ್ನು ನಡೆಸುತ್ತಿದ್ದ ಮನೆ ಮಂದಿ ಮಕ್ಕಳು ಮರಳಿ ಮನೆಗೆ ಬಂದಿದ್ದಾರೆ. ತುತ್ತಿನ ಚೀಲ ತುಂಬಲು ಎರಡು ಮೂರು ಪಟ್ಟು ಹೆಚ್ಚು ಖರ್ಚಾಗಲಿದೆ. ಸರಕಾರ ಘೋಷಿಸಿರುವ ಲೋಕ್ ಡೌನ್ ಸದ್ಯಕ್ಕಂತೂ ನಿಲ್ಲುವುದಿಲ್ಲ. ಕನಿಷ್ಟ ಮೂರು ನಾಲ್ಕು ತಿಂಗಳು ಮುಂದುವರಿಯಲಿದೆ. ಆನಂತರವೂ ಯಥಾಸ್ಥಿತಿ ಬರಲು ವರ್ಷಗಳೇ ಬೇಕಾಗಬಹುದು.
ರೈತನ ಕ್ರೃಷಿ ಉತ್ಪನ್ನಗಳನ್ನು ಖರೀದಿಸುವವರೇ ಇಲ್ಲವಾಗಿದೆ. ಅಡಿಕೆ ತೆಂಗಿನಕಾಯಿ ಕಾಳುಮೆಣಸು ಕೋಕೋ ರಬ್ಬರ್ ಸಾಲಮಾಡಿ ವಿಪರೀತ ಖರ್ಚು ಮಾಡಿ ಬೆಳೆಸಿದ ಬೆಳೆಯನ್ನು ಕೇಳುವವರೇ ಇಲ್ಲವಾಗಿದೆ. ವಾಣಿಜ್ಯ ಬೆಳೆಗಳ ನ್ನೇ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳು ಆಹಾರವಸ್ತುಗಳಿಗಾಗಿ ಇತರೇ ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ.ಆದಾಯವೇ ಇಲ್ಲದ ರೈತರು ಖರೀದಿಸುವ ಶಕ್ತಿಯನ್ನೇ ಸಂಪೂರ್ಣ ಕಳೆದುಕೊಂಡಿದ್ದಾರೆ.
ಬಹುವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಕ್ರೃಷಿಯನ್ನು ಯಾವ ರೀತಿಯ ಲ್ಲೂ ಕಡೆಗಣಿಸುವಂತಿಲ್ಲ. ನಿರಂತರ ಕ್ರೃಷಿಕಾರ್ಯಗಳನ್ನು ಮುಂದುವರಿಸದಿದ್ದರೆ ಮುಂದಿನ ವರ್ಷಕ್ಕೆ ಬೆಳೆಯೇ ಇ ಲ್ಲದಾಗುತ್ತದೆ. ಈಗಾಗಲೇ ಸಾಕಷ್ಟು ಖರ್ಚುವೆಚ್ಚ ಗಳನ್ನು ಮಾಡಿ ಬೆಳೆಸಿದ ಫಸಲು ಕೈಗೆ ಸಿಕ್ಕಬೇಕಾದರೆ ನೀರು ಗೊಬ್ಬರ ಔಷಧಿ ಹಾಗೇ ಇನ್ನಿತರ ಅನೇಕ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಅಷ್ಟಲ್ಲದೆ ಉತ್ಪನ್ನಗಳನ್ನು ಮಾರಲು ಮಾರುಕಟ್ಟೆ ಯೂ ಬೇಕಾಗಿದೆ.
ಕ್ರೃಷಿ ಉತ್ಪನ್ನಗಳು ಇಲ್ಲದಿದ್ದರೆ ಕೈಗಾರಿಕೆ ಗಳೂ ಇಲ್ಲವಾಗುತ್ತವೆ. ಇದು ದೇಶದ ಆರ್ಥಿಕತೆಯ ಮೇಲೆ ಬಹಳಷ್ಟು ಪರಿಣಾಮಗಳನ್ನು ಬೀರಲಿದೆ. ರಾಷ್ಟ್ರದ ಬೊಕ್ಕಸ ತುಂಬಬೇಕಾದರೆ ಕ್ರೃಷಿಉತ್ಪನ್ನಗಳ ಪಾತ್ರ ಹಿರಿದಾಗಿದೆ. ಕ್ರೃಷಿಉತ್ಪನ್ನಗಳು ಕುಸಿಯದಂತೆ ಅದರ ಮಾರುಕಟ್ಟೆಯೂ ಕುಸಿಯದಂತೆ ಸರಕಾರ ನೋಡಿ ಕೊಳ್ಳಬೇಕಾಗಿದೆ. ಒಟ್ಟು ರೈತನ ಮೂಲಭೂತ ಅಗತ್ಯಗಳನ್ನು ಪೂರೈಸಲು ಸರಕಾರ ಆದ್ಯತೆಯನ್ನು ನೋಡಬೇಕಾಗಿದೆ.
ಕೂಲಿಗಾರರ ಸಮಸ್ಯೆ ನೀರು ಗೊಬ್ಬರ ಔಷಧಿಗಳಲ್ಲದೆ ಜೀವನ ನಿರ್ವಹಣೆಗೆ ಇತರ ಖರ್ಚುಗಳು ಸೇರಿ ಇದಕ್ಕೆಲ್ಲಾ ಸರಕಾರ ಸ್ಪಂದಿಸಬೇಕಾಗಿದೆ.
ರೈತರು ಈಗಾಗಲೇ ಮಾಡಿರುವ ಸಾಲಗಳನ್ನು ಸಾಲದ ಕಂತುಗಳನ್ನು ಮರುಪಾವತಿಸಲು ವಾಯಿದೆಯನ್ನು ಒಂದು ವರ್ಷದ ಅವಧಿಗೆ ಮುಂದುವರಿಸಬೇಕಾಗಿದೆ. ಸದ್ಯ ಯಾವುದೇ ಉತ್ಪತ್ತಿ ಇಲ್ಲದಿರುವ ದರಿಂದ ಪಿ ಯಮ್ ಕಿಸಾನ್ ಸನ್ಮಾನ್ ಯೋಜನೆ ಮೂಲಕ ಅವರವರ ಕ್ರೃಷಿಭೂಮಿಗೆ ಅನುಗುಣವಾಗಿ 2ರಿಂದ 5 ಲಕ್ಷದವರೇಗೆ ಬಡ್ಡಿರಹಿತ ಹೊಸದಾಗಿ ಸಾಲ ಕೊಡಬೇಕು.
ಪಿ ಯಮ್ ಕಿಸಾನ್ ಸನ್ಮಾನ್ ಹಳೆಯ ಯೋಜನೆಯ 2ಸಾವಿರ ಮಾತ್ರ ಕೊಟ್ಟರೆ ಏನು ಕೊಟ್ಟಂತಾಗುತ್ತಾಗುತ್ತದೆ?.
ಈಗಾಗಲೇ ಶ್ರಮಿಕರಿಗೆ ,ಉದ್ಯೋಗಿಗಳಿಗೆ, ಬಿ ಪಿ ಯಲ್ ಕಾರ್ಡುದಾರರಿಗೆ, ಬಡ ಮಹಿಳೆಯರ ಹೆಸರಿನಲ್ಲಿ
ಸರಕಾರದ ಉದ್ಯೋಗಿಗಳಿಗೆ ಇನ್ನೂ ಅನೇಕ ವರ್ಗದ ಜನರಿಗೆ
ಕೊಟ್ಟಿರುವ ಸೌಲಭ್ಯಗಳನ್ನು ನೋಡಿ ದಾಗ ರೈತರು ಊಟ ಮಾಡದೆಯೂ ಬದುಕಬಹುದು ಎಂದು ನಮ್ಮ ಪ್ರಧಾನಿಯವರು ತಿಳಿದು ಕೊಂಡಂತಿದೆ. ರಾಜ ಧರ್ಮವನ್ನು ಪಾಲಿಸುವಂತೆ ಮಾಜಿ ಪ್ರಧಾನಿ ವಾಜಪೇಯಿ ಯವರು ಒಮ್ಮೆ ಎಚ್ಚರಿಸಿದ್ದುನೆನಪಾಗುತ್ತಿದೆ. ಈಗಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ, ಯಾವದೇ ಕ್ರಷಿ ಆದಾಯವಿಲ್ಲದಿರುವದರಿಂದ ರೈತಕುಟುಂಬಗಳಿಗೂ ರೇಷನ್ ವ್ಯವಸ್ಥೆ ಮಾಡಲೇಬೇಕು.
ಕ್ರೃಷಿಕಾರ್ಯಗಳನ್ನು ಮುಂದುವರಿಸಲು ಅಗತ್ಯವುಳ್ಳ ಗೊಬ್ಬರ ಔಷಧಿ ನೀರಾವರಿ ಮೊದಲಾದ ಆವಶ್ಯಕತೆಗಳನ್ನು ಸಹಕಾರಿ ಸಂಘಗಳ ಮೂಲಕ ಸಾಲ ರೂಪದಲ್ಲಿ ಒದಗಿಸಬೇಕು. ಕ್ರಷಿ ಇಲಾಖೆ ತೋಟಗಾರಿಕೆ ಇಲಾಖೆ ಮುಖಾಂತರ ಸಬ್ಸಿಡಿಯಲ್ಲಿ ಅಗತ್ಯ, ವಸ್ತುಗಳನ್ನು ಪೂರೈಸಬೇಕು. ರೈತರ ಬಗ್ಯೆ ಸರಕಾರ ಕಾಳಜಿ ವಹಿಸದಿದ್ದಲ್ಲಿ ಉತ್ಪಾದನೆಯು ಕುಸಿಯಲಿದೆ. ಕ್ರೃಷಿ ಪೂರಕ ಉದ್ಯೋಗಗಳಾದ ಹೈನುಗಾರಿಕೆ ,ಜೇನು ಸಾಕಣೆ, ಆಡು ಕುರಿ ಸಾಕಣೆ, ಕೋಳಿ ಸಾಕಣೆ, ರೇಷ್ಮೆ ಕೃಷಿಯದ್ದು ಗತಿ ಅಧೋಗತಿ.
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಯೆ ಮೇಲು ಮೇಟಿಯಿಂ ರಾಟೆ ನಡೆದುದಲ್ಲದೆ ದೇಶದ ಆಟವೇ ಕೆಡುಕು ಸರ್ವಜ್ಞ.
-ನೂಜಾಲು ಪದ್ಮನಾಭ ಗೌಡ

ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಐವರ್ನಾಡು ಘಟಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.