Breaking News

ಬಳ್ಪ : ಪೇಟೆಗೆ ಬಂದವರಿಗೆ ಲಾಠಿ ರುಚಿ

Advt_Headding_Middle
Advt_Headding_Middle

 

ಬಳ್ಪ ಬಸ್ ನಿಲ್ದಾಣದ ಬಳಿಯ ಸರಕಾರಿ ಶಾಲೆಯ ಸಮೀಪ ಇಂದು ಮುಂಜಾನೆ 6.45 ರ ಸುಮಾರಿಗೆ ಪೊಲೀಸರು ಲಾಠಿ ಬೀಸಿದ ಘಟನೆ ವರದಿಯಾಗಿದೆ.

ದ.ಕ. ಜಿಲ್ಲೆಯಾದ್ಯಂತ ಬಂದ್ ಆಚರಿಸುವಂತೆ ನಿನ್ನೆ ರಾತ್ರಿ ದ.ಕ. ಜಿಲ್ಲಾಧಿಕಾರಿ ಆದೇಶ ಮಾಡಿದ್ದು, ಈ ಬಗ್ಗೆ ಮಾಹಿತಿ ಇಲ್ಲದ ಕೆಲವರು ಇಂದು ಮುಂಜಾನೆ ಬಳ್ಪ ಪೇಟೆಯಲ್ಲಿ ಅಂಗಡಿಗೆ ಕೆಲಸಕ್ಕೆ ಹೋಗುವವರು ಬಳ್ಪ ಸರಕಾರಿ ಶಾಲೆಗೆ ಹೋಗುವ ಮೆಟ್ಟಿಲಲ್ಲಿ ಕುಳಿತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪೋಲೀಸರು ನಾಲ್ಕು, ಐದು ಮಂದಿಗೆ ಲಾಠಿಯಿಂದ ಹೊಡೆದು ಓಡಿಸಿದರು. ಇದೇ ಹೊತ್ತಿನಲ್ಲಿ ಅಟೋ ರಿಕ್ಷಾವೊಂದು ಬಂದಿದ್ದು, ರಿಕ್ಷಾ ಚಾಲಕನಿಗೂ ಲಾಠಿಯ ರುಚಿ ತೋರಿಸಿದರೆನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.