ನಾಳೆ ಬೆಳ್ಳಾರೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

Advt_Headding_Middle
Advt_Headding_Middle

 

ಬೆಳ್ಳಾರೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು ಮಾ.31 ರಂದು ಮಂಗಳವಾರ ಎಲ್ಲಾ ದಿನಸಿ ಅಂಗಡಿಗಳು ಬೆ.6.00 ರಿಂದ ಮಧ್ಯಾಹ್ನ 3.00 ವರೆಗೆ ತೆರೆಯಲಿದ್ದು ಸಾರ್ವಜನಿಕರು ಸುರಕ್ಷಿತ ಸಾಮಾಜಿಕ ಅಂತರ ಪಾಲಿಸಿ ಖರೀದಿಸಬಹುದು.
ಆದರೆ ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ದಿನಸಿ ವ್ಯಾಪಾರಿಗಳಿಗೆ ಸಾಮಾನು ದಾಸ್ತಾನು ಕೊರತೆ ಇದ್ದಲ್ಲಿ ಇಂದು ಬೆಳ್ಳಾರೆ ಸಗಟು ವ್ಯಾಪಾರಿಗಳು ಅಥವ ದೊಡ್ಡ ಮಟ್ಟದ ವ್ಯಾಪಾರಸ್ಥರಿಂದ ಸಾಮಾನು ತರಿಸಿಕೊಳ್ಳಬಹುದು. ಗಾಡಿ ಗಳಲ್ಲಿ ಅಗತ್ಯ ವಸ್ತು ಸಾಗಾಟ ವಾಹನ ಎಂದು ಬರೆಯುವುದು. ಆದರೆ ಯಾವುದೇ ಕಾರಣಕ್ಕೆ ಇಂದು ಸಾರ್ವಜನಿಕರಿಗೆ ಸಾಮಾಗ್ರಿ ಖರೀದಿಸಲು ಅವಕಾಶವಿರುವುದಿಲ್ಲ. ಸಣ್ಣ ಅಂಗಡಿದಾರರು ಪೇಟೆಗೆ ಬರುವಾಗ ಪೋಲಿಸ್ ಠಾಣೆಗೆ ಅಥವಾ ಪಂಚಾಯತ್ ಗೆ ಮಾಹಿತಿ ನೀಡುವುದು..ಚಿಲ್ಲರೆ ವ್ಯಾಪಾರಸ್ಥರಿಗೆ ಸಾಮಾಗ್ರಿ ನೀಡುವಾಗ ಅಂಗಡಿಯ ಶಟ್ಟರ್ ಮುಚ್ಚಿ ವಿತರಿಸುವುದು.

ಹೆಚ್ಚಿನ ಮಾಹಿತಿಗಾಗಿ
+917760381009
ಧನಂಜಯ ಕೆ.ಆರ್ ಗ್ರಾಮಾಭಿವೃದ್ದಿ ಅಧಿಕಾರಿಗಳು ಬೆಳ್ಳಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.