Breaking News

ನಾಳೆ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ

Advt_Headding_Middle
Advt_Headding_Middle

 

ಅಗತ್ಯವಿದ್ದಷ್ಟೇ ಖರೀದಿಸಿ, ಆಹಾರ ಸಾಮಾಗ್ರಿಗಳಿಗೆ ಸಮಸ್ಯೆ ಆಗುವುದಿಲ್ಲ : ಎ.ಸಿ. ಮನವಿ

 

ನಾಳೆ (31.3.2020) ಅಗತ್ಯ ವಸ್ತು ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆ ತನಕ ಅವಕಾಶ ನೀಡಲಾಗಿದೆ. ಪೇಟೆ ಬಂದವರು ಒಬ್ಬರಿಂದೊಬ್ಬರ ಅಂತರ ಕಾಯ್ದು ಕೊಂಡು ಅಗತ್ಯ ವಿದ್ದಷ್ಟು ಮಾತ್ರ ಖರೀದಿಸಿ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಮನವಿ ಮಾಡಿಕೊಂಡಿದ್ದಾರೆ.

ಇಂದು ಸಂಜೆ ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ನ.ಪಂ. ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, “ಲಾಕ್ ಡೌನ್ ವಿಚಾರ ಎಲ್ಲರಿಗೂ ಗೊತ್ತಿದೆ. ಅದನ್ನು ನಾಳೆ ಸ್ವಲ್ಪ ಸಡಿಲಿಕೆ ಮಾಡಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು. ಯಾರೂ ವಸ್ತುಗಳನ್ನು ಅಗತ್ಯ ಕ್ಕಿಂತ ಹೆಚ್ಚಿಗೆ ಖರೀದಿಸಬೇಡಿ. ಒಂದೆರಡು ದಿನದಲ್ಲಿ ಮತ್ತೆ ಖರೀದಿಗೆ ಅವಕಾಶ ಇದೆ. ಆಹಾರ ಸಾಮಾಗ್ರಿಗಳ ಕೊರತೆಯಾಗದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಸಾರ್ವಜನಿಕ ರು ಸಹಕರಿಸಬೇಕು ಎಂದು ಯತೀಶ್ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಅನಂತಶಂಕರ್, ನ.ಪಂ. ಮುಖ್ಯಾಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ಸದಸ್ಯರುಗಳಾದ ವಿನಯ್ ಕಂದಡ್ಕ, ಬಾಲಕೃಷ್ಣ ಕೊಡೆಂಕಿರಿ, ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ಸುಧಾಕರ ಕುರುಂಜಿಭಾಗ್, ಡೇವಿಡ್ ಧೀರ ಕ್ರಾಸ್ತ, ಬಾಲಕೃಷ್ಣ ರೈ ದುಗಲಡ್ಕ, ನಾರಾಯಣ, ಬುದ್ದ ನಾಯ್ಕ, ಶಶಿಕಲಾ ನೀರಬಿದಿರೆ, ಪೂಜಿತ ಕೆ.ಯು. ಸರೋಜಿನಿ ಪೆಲತಡ್ಕ, ಶೀಲಾ ಕುರುಂಜಿ, ವಾಣಿ ಜಟ್ಟಿಪಳ್ಳ, ಸುಶೀಲ ಕಲ್ಲಮುಟ್ಲು, ಕಿಶೋರಿ ಶೇಟ್, ಶಿಲ್ಪ ಸುದೇವ್, ಪ್ರವೀತಾ ಕಾಯರ್ತೋಡಿ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.