Breaking News

ಕನಕಮಜಲು ಪ್ರಾ.ಕೃ.ಪ.ಸ.ಸಂಘ ಹಾಗೂ ಗ್ರಾ.ಪಂ. ಕಾರ್ಯಪಡೆಯ ತುರ್ತು ಸಭೆ

Advt_Headding_Middle
Advt_Headding_Middle

 

 

ಗ್ರಾಮದಲ್ಲಿ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕುರಿತು ಚರ್ಚೆ

ಗ್ರಾಮದ ಪಡಿತರ ಫಲಾನುಭವಿಗಳಿಗೆ ಎಪ್ರಿಲ್ ಹಾಗೂ ಮೇ ತಿಂಗಳ ಪಡಿತರ ಸಾಮಾಗ್ರಿಗಳನ್ನು ವಿತರಿಸುವ ಕುರಿತು ಕೋವಿಡ್-19 ಗ್ರಾಮ ಪಂಚಾಯತಿಯ ಕಾರ್ಯಪಡೆ ಹಾಗೂ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ತುರ್ತು ಸಭೆಯು ಕನಕಮಜಲು ಸೊಸೈಟಿಯ ಕನಕಸೌಧ ಸಭಾಭವನದಲ್ಲಿ ಮಾ.31ರಂದು ಜರುಗಿತು.
ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಹಕಾರಿ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಸೊಸೈಟಿ ನಿರ್ದೇಶಕರುಗಳಾದ ಶ್ರೀಕೃಷ್ಣ ಭಟ್ ನೆಡಿಲು, ಕರುಣಾಕರ ರೈ ಕುಕ್ಕಂದೂರು, ಮಹೇಶ್ವರ ಕಾರಿಂಜ, ಗ್ರಾ.ಪಂ. ಸದಸ್ಯ ದಿವಾಕರ ಕಾಳಪ್ಪಜ್ಜನಮನೆ, ಬಾಲಚಂದ್ರ ನೆಡಿಲು, ಜಯಪ್ರಸಾದ್ ಕಾರಿಂಜ, ಹೇಮಂತ್ ಪಿ.ಎಂ, ಜಗನ್ನಾಥ ಬಿ.ಹೆಚ್, ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ಭವಾನಿ ಬುಡ್ಲೆಗುತ್ತು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.