Breaking News

ಎಸ್.ಎಸ್.ಎಫ್ ಹಾಗೂ ಎಸ್. ವೈ. ಎಸ್ ವತಿಯಿಂದ ಸುಳ್ಯ ಪೇಟೆಯಲ್ಲಿ ಕೊರೋನಾ ಲಾಕ್ ಡೌನ್ ಬಗ್ಗೆ ಜನಜಾಗೃತಿ

Advt_Headding_Middle
Advt_Headding_Middle

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಛೇರಿ, ಸುಳ್ಯ ಇದರ ನಿರ್ದೇಶನದಂತೆ ಎಸ್. ವೈ. ಎಸ್ ಹಾಗೂ ಎಸ್.ಎಸ್ .ಎಫ್ ಸುಳ್ಯ ಡಿವಿಷನ್ ಸಮಿತಿಯ ವತಿಯಿಂದ ಸುಳ್ಯ ನಗರ ವ್ಯಾಪ್ತಿಯಲ್ಲಿ ನೋವೆಲ್ ಕೊರೋನಾ ವೈರಸ್ ಬಗ್ಗೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜನ ಜಾಗೃತಿಯನ್ನು ಮೂಡಿಸುವ ಕಾರ್ಯವು ನಡೆಯಿತು. ಲಾಕ್ ಡೌನಿನ ನಡುವೆ ಅಗತ್ಯವಸ್ತುಗಳ ಖರೀದಿಗಾಗಿ ಮುಗಿ ಬೀಳುತ್ತಿರುವ ಜನರ ಮಧ್ಯೆ ಹಾದು ಬಂದ ಜಾಗೃತಿ ವಾಹನವು ಕೊರೋನಾವು ಹರಡುವುದನ್ನು ತಪ್ಪಿಸಲು ಸಾಮಾಜಿಕ ಅಂತರವನ್ನು ಕಾಪಾಡುವಂತೆ ಮನವಿ ಮಾಡಿತು. ದ.ಕ ಜಿಲ್ಲೆಯಾದ್ಯಂತ ಇವತ್ತು ಬೆಳಗ್ಗೆ 6 ಗಂಟೆಯಿಂದ 3 ಗಂಟೆಯ ತನಕ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ಸಾರ್ವಜನಿಕರಿಗೆ ಅವಕಾಶವನ್ನು ನೀಡಿದ್ದು, ಈ ಸಂದರ್ಭದಲ್ಲಿ ಕೊರೋನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಸ್. ವೈ. ಎಸ್ ಹಾಗೂ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯು ಈ ಜಾಗೃತಿಯನ್ನು ಹಮ್ಮಿಕೊಂಡಿದೆ. ಸಾಮಾಜಿಕ ಅಂತರವನ್ನು ಕಾಪಾಡುವುದರ ಜೊತೆಗೆ ಸಮಯಪ್ರಜ್ಞೆಯೊಂದಿಗೆ ಕೊರೋನಾ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕೆಂದು ಜಾಗೃತಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಜನಜಾಗೃತಿ ನಡೆಸುತ್ತಿರುವ ಎಸ್. ವೈ. ಎಸ್ ಹಾಗೂ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯ ಈ ಕಾರ್ಯವು ಎಲ್ಲೆಡೆಗಳಿಂದಲೂ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ. ಎಸ್ ಉಮರ್ ರವರು ಪೋಲೀಸ್ ಅನುಮತಿ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಸಂಪೂರ್ಣ ಸಹಕಾರಗಳನ್ನು ನೀಡಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.