Breaking News

ಸುಳ್ಯದಲ್ಲಿರುವ ವಲಸಿಗ ಕಾರ್ಮಿಕರಿಗೆ ಆಹಾರ ಪೂರೈಕೆ ಕುರಿತು ಸಭೆ

Advt_Headding_Middle
Advt_Headding_Middle

 

ನಾಳೆ ಸಂಜೆಯೊಳಗೆ ಸರ್ವೆ – ಎ.2ರಿಂದ ಆಹಾರ ಪೂರೈಕೆಗೆ ನಿರ್ಧಾರ

ಬಡವರಿಗೂ ಆಹಾರ, ಮೆಡಿಸಿನ್ ಪೂರೈಕೆ ಕುರಿತು ಚರ್ಚೆ

ಸುಳ್ಯ ನಗರ ವ್ಯಾಪ್ತಿಯಲ್ಲಿರುವ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸಲು ನ.ಪಂ.ನಲ್ಲಿ ನಡೆದ ಸಭೆಯಲ್ಲಿ ನಾಳೆ ಸಂಜೆಯೊಳಗೆ ನಗರ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ, ನಾಳಿದ್ದಿನಿಂದ ಆಹಾರ ತಯಾರಿಸಿ ಅವರ ಮನೆಗೆ ತಲುಪಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಎ. 2 ರಿಂದಲೇ ಆಹಾರ ಪೂರೈಕೆ ಆಗಲಿದ್ದು, ಎ.2,3 ಮತ್ತು 4ರಂದು ಎಂ.ಬಿ.ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರು ಹಾಗೂ ಇತರ ಸಂಘಟನೆ ಸೇರಿ ಆಹಾರ ಒದಗಿಸಲು ಒಪ್ಪಿಕೊಂಡಿದ್ದು, ಅದು ಯಶಸ್ವಿಯಾದರೆ ಅದನ್ನೆ ಮುಂದುವರಿಸಲು ನಿರ್ಧರಿಸಲಾಗಿದೆ.

ನ.ಪಂ. ಮುಖ್ಯಾಧಿಕಾರಿ ಮತ್ತು ಮತ್ತಡಿಯವರು ಸಭೆ ನಡೆಸಿಕೊಟ್ಟರು. ಸಭೆಯ ಆರಂಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಗಳು ವಲಸೆ ಕಾರ್ಮಿಕರ ಕುರಿತು ಆಗಬೇಕಾದ ವಿಚಾರಗಳನ್ನು ಪ್ರಸ್ತಾಪಿಸಿದರು. ಆಗ ಮಾತನಾಡಿದ ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವರು “ಸುಳ್ಯ ನಗರ ವ್ಯಾಪ್ತಿಯ 20 ವಾರ್ಡ್‌ ಗಳಲ್ಲಿ ಎಷ್ಟು ಮಂದಿ ವಲಸಿಗ ಕಾರ್ಮಿಕರಿದ್ದಾರೆಂಬ ಪಟ್ಟಿ ಮಾಡಿ. ಅವರಿಗೆ ಆಹಾರ ತಯಾರಿಸಿ ಅವರು ಇರುವಲ್ಲಿಗೆ ಒದಗಿಸಿ ಕೊಡುವ ವ್ಯವಸ್ಥೆ ಕಲ್ಪಿಸೋಣ ಎಂದು ಹೇಳಿ ತಾವು ಈಗಾಗಲೇ ಮಾಡಿಕೊಂಡಿರುವ ತಯಾರಿಯ ಕುರಿತು ಹೇಳಿದರು. ಅವರ ಮಾತಿಗೆ ಪೂರಕವಾಗಿ ಮಾತನಾಡಿದ ಎಂ.ವೆಂಕಪ್ಪ ಗೌಡರು ” ಈ ವಿಚಾರವನ್ನು ನಾವೂ ಈಗಾಗಲೇ ಮಾತನಾಡಿಕೊಂಡಿದ್ದೇವೆ. ಇದರ ಜತೆಗೆ ಇತರ ನಮ್ಮ ಊರಿನಲ್ಲಿರುವ ಬಡವರು ಕೂಡ ಹೊರಗೆ ಹೋಗದ ಸ್ಥಿತಿ ಇದೆ. ಆ ಕುರಿತು ಮಾತನಾಡೋಣ ಎಂದರು. ಎಲ್ಲರಿಗೂ ಸಾಮಾಗ್ರಿ ಪೂರೈಸೋಣ ಎಂದು ಕಂಟ್ರಾಕ್ಟರ್ ಗೋಪಾಲಕೃಷ್ಣ ರು ಹೇಳಿದರೆ, “ಪುರಭವನದಲ್ಲಿ ತಯಾರಿಸಿ ಕೊಡೊಣ ಎಂದು ಸದಸ್ಯ ಉಮ್ಮರ್ ಸಲಹೆ ನೀಡಿದರು. ಹೀಗೆ ಅಭಿಪ್ರಾಯ ವಿನಿಮಯ ನಡೆಯಿತು. ಬಳಿಕ ಮಾತನಾಡಿದ ಎಂ.ಬಿ. ಸದಾಶಿವರು ” ನಾವು, ಕಾರ್ಮಿಕರ ಸಂಘ, ಮತ್ತಿತರ ಸೇರಿ ನಾವೇ ಆಹಾರ ತಯಾರಿಸಿ ಎ.2ರಿಂದ ಕೊಡುತ್ತೇವೆ. ಅದು ಯಶಸ್ವಿಯಾದರೆ ಅದನ್ನೇ ಮುಂದುವರಿಸೋಣ. ಇಲ್ಲವಾದರೆ ಆ ಕುಟುಂಬಗಳಿಗೂ ಆಹಾರ ಸಾಮಾಗ್ರಿ ಒದಗಿಸೋಣ ಎಂದು ಹೇಳಿದರು. ಅದಕ್ಕೆ ಸಭೆ ಒಪ್ಪಿಗೆ ಸೂಚಿಸಿತು. “ಮೆಡಿಸಿನ್ ಸಮಸ್ಯೆ ಯಾರಿಗಾದರೂ ಬೇಕಾದರೆ ನೋಡಿಕೊಳ್ಳಿ. ಅದಕ್ಕೆ ವಲಸಿಗರೇ ಆಗಬೇಕೆಂದಿಲ್ಲ ಎಂದು ಎಂ.ಬಿ.ಯವರು ಹೇಳಿದರು.

ಅದರಂತೆ ನಾಳೆ ಸಂಜೆ ಯೊಳಗೆ ನ.ಪಂ. ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರ ಸರ್ವೆ ನಡೆಸಿ, ನಾಳಿದ್ದಿನಿಂದ ಮೂರು ದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಆಹಾರ ತಯಾರಿಸಿ ವಿತರಿಸುವ ಮತ್ತು ಬಳಿಕ ಯಶಸ್ವಿಯಾದರೆ ಅದನ್ನೇ ಮುಂದು ವರಿಸುವ ಬಗ್ಗೆ ನಿರ್ಧರಿಸಲಾಯಿತು.

ನಗರದ ಇತರ ಬಡವರಿಗೆ ಆಹಾರ ಒದಗಿಸುವ ಬಗ್ಗೆ, ವರ್ತಕರ ಸಂಘದವರು ಈಗಾಗಲೇ ತ ಕ್ವಿಂಟಾಲ್ ಅಕ್ಕಿ ನೀಡಿರುವ ಕುರಿತೂ ಪ್ರಸ್ತಾಪವಾಯಿತು. ನ.ಪಂ.ಇಂಜಿನಿಯರ್ ಶಿವಕುಮಾರ್, ಹೆಚ್.ಐ.ರವಿಕೃಷ್ಣ, ನ.ಪಂ. ಸದಸ್ಯರುಗಳಾದ ಬಾಲಕೃಷ್ಣ ರೈ ದುಗಲಡ್ಕ, ಬಾಲಕೃಷ್ಣ ಭಟ್ ಕೊಡೆಂಕಿರಿ, ಉಮ್ಮರ್ ಕೆ.ಎಸ್., ಡೇವಿಡ್ ಧೀರ ಕ್ರಾಸ್ತ, ನಾರಾಯಣ, ಬುದ್ದ ನಾಯ್ಕ, ರಿಯಾಜ್ ಕಟ್ಟೆಕ್ಕಾರ್, ಸುಧಾಕರ ಕುರುಂಜಿಭಾಗ್, ಶರೀಫ್ ಕಂಠಿ, ಸರೋಜಿನಿ ಪೆಲತಡ್ಕ, ಕಿಶೋರಿ ಶೇಟ್, ಪ್ರವಿತ ಪ್ರಶಾಂತ್, ವಾಣಿ ಕೊಡಿಯಾಬೈಲು, ಸುಶೀಲ ಕಲ್ಲುಮುಟ್ಲು, ಪೂಜಿತ ಕೆ.ಯು. ಶಿಲ್ಪ ಸುದೇವ್, ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ಕಾರ್ಮಿಕರ ಸಂಘದ ನಾಗರಾಜ ಮೇಸ್ತ್ರಿ, ಜಾನಿ ಕೆ.ಪಿ., ಬಿಜು ಅಗಸ್ಟಿನ್, ಕಂಟ್ರಾಕ್ಟರ್ ಗೋಪಾಲಕೃಷ್ಣ ಕರೋಡಿ, ಮಂಜುನಾಥ್, ಇಂಜಿನಿಯರ್ ಸಂಘದ ಖಲಂದರ್ ಎಲಿಮಲೆ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.