Breaking News

ರೋಗಿಯೆಂದು ಬಿಂಬಿಸಿ ಆಂಬುಲೆನ್ಸ್ ನಲ್ಲಿ ಬಂದ ಪ್ರಕರಣ

Advt_Headding_Middle
Advt_Headding_Middle

 

ಪಂಜದ ಯುವಕನ ಮೇಲೆ ನಿಯಮ ಉಲ್ಲಂಘಿಸಿ ಸಂಚಾರ ಮಾಡಿದ ಕೇಸು

ಮಂಗಳೂರಿಗೆ ಕರೆದೊಯ್ದು ಮತ್ತೆ ಪರೀಕ್ಷೆ


ರೋಗಿ ಎಂದು ಬಿಂಬಿಸಿ ಆಂಬುಲೆನ್ಸ್ ನಲ್ಲಿ ಬಂದ ಪ್ರಕರಣಕ್ಕೆ ಸಂಬಂಧಿಸಿ ಐವತೊಕ್ಲು ಗ್ರಾಮದ ಅಳ್ಪೆ ವಿಜಯಕುಮಾರ್ ಎಂಬವರ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಿಜಯಕುಮಾರ್ ಅವರು ರಾಯಚೂರಿನಲ್ಲಿ ಕೆಲಸದಲ್ಲಿದ್ದು ಊರಿಗೆ ಬರುವ ಉದ್ದೇಶದಿಂದ ಕುಂದಾಪುರದ ಮಿತ್ರನ ಮನೆಗೆ ಬಂದು ಮಾ.30 ರಂದು ಆಂಬುಲೆನ್ಸ್ ನಲ್ಲಿ ಊರಿಗೆ ತಲುಪಿದ್ದರು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದಲ್ಲದೆ ಕೊರೋನಾ ಸಂಬಂಧ ಲಾಕ್ ಡೌನ್ ಇರುವ ಹೊರತಾಗಿಯೂ ದೂರದ ಊರಿನಿಂದ ಈ ರೀತಿ ಬಂದು ನಿಯಮ ಉಲಂಘಿಸಿದ್ದಕ್ಕೆ ಸಂಬಂಧಿಸಿ ಊರವರು ಪಂಜ ಗ್ರಾ.ಪಂ. ಪಿಡಿಒ ಪುರುಷೋತ್ತಮ ಮಣಿಯಾನ ಅವರಿಗೆ ದೂರು ಸಲ್ಲಿಸಿದ್ದರು.
ಇದನ್ನಾಧರಿಸಿ ಪಿಡಿಒ ಅವರು ಸುಬ್ರಹ್ಮಣ್ಯ ಠಾಣೆಗೆ ಅಳ್ಪೆ ವಿಜಯಕುಮಾರ್ ಅವರ ಮೇಲೆ ದೂರು ಸಲ್ಲಿಸಿದ್ದು ಸುಬ್ರಹ್ಮಣ್ಯ ಠಾಣೆಯಲ್ಲಿ ನಿಯಮ ಉಲಂಘಿಸಿ ಸಂಚಾರ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದಕ್ಕಾಗಿ ಪ್ರಕರಣ ದಾಖಲಾಗಿದೆ.

ದೂರದ ಊರಿನಿಂದ ಬಂದದಕ್ಕಾಗಿ ಊರವರ ಆತಂಕ, ದೂರನ್ನಾಧರಿಸಿ ವಿಜಯಕುಮಾರ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗಿ ಕೊರೋನಾ ಕ್ಕೆ ಸಂಬಂಧಿಸಿ ಲಕ್ಷಣ ಕಂಡು ಬರದ ಹಿನ್ನೆಲೆಯಲ್ಲಿ ಮನೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.