ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮೀಣ ಕಾರ್ಯಪಡೆ ಸಮಿತಿ ಸಭೆ

Advt_Headding_Middle
Advt_Headding_Middle

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಕಾರ್ಯಪಡೆಯ ಸಭೆಯು ಮಾ.31 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮೀಣ ಕಾರ್ಯಪಡೆ(Village taskforce) ಸಮಿತಿಯ ಅಧ್ಯಕ್ಷರಾದ ಶ್ರೀ ಮತಿ ಚೈತ್ರಾ ಕಟ್ಟತ್ತಾರು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಗ್ರಾಮೀಣ ಕಾರ್ಯಪಡೆ ಸಮಿತಿ ಸಭೆಯ ನಡವಳಿಗಳು.
ಹಾಜರಿ ಪುಸ್ತಕದಲ್ಲಿ ಸಹಿ ಮಾಡಿರುವಂತೆ ಗ್ರಾಮೀಣ ಕಾರ್ಯಪಡೆಯ ಅಧ್ಯಕ್ಷರೂ ಹಾಗೂ ಪದಾಧಿಕಾರಿಗಳು ಸೇರಿದಂತೆ ಒಟ್ಟು 35 ಮಂದಿ ಪ್ರಾರಂಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೇಖರ್ ಯು.ಡಿ ರವರು ಎಲ್ಲರನ್ನೂ ಸ್ವಾಗತಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್-19 ಕೊರೊನಾ ವೈರಸ್ ನಿಯಂತ್ರಣಕ್ಕೆ ಸರಕಾರ ಹೇರಿರುವ ಲಾಕ್ ಡೌನ್ ಮತ್ತು ಅಂತರ ಕಾಯ್ಧು ಕೊಳ್ಳುವಿಕೆಯನ್ನು ಯಶಸ್ವಿಗೊಳಿಸಲು ಮತ್ತು ಮುಂದಿನ ದಿನಗಳಲ್ಲಿ ಲಾಕ್ ಡೌನ್ ಆದೇಶಗಳು ಮುಂದುವರಿದಲ್ಲಿ ದಿನಬಳಕೆ ವಸ್ತುಗಳ ಪೂರೈಕೆ ,ಪಡಿತರ ವಿತರಣಾ ವ್ಯವಸ್ಥೆ ಹಾಗೂ ಆಶಕ್ತರಿಗೆ ಸ್ವಂದಿಸುವ ಕುರಿತು ಮಾಹಿತಿ ನೀಡಿ ಮಾರಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಗ್ರಾಮದ ಪ್ರತಿಯೊಂದು ಕುಟುಂಬವು ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಹಾಗೂ ಗ್ರಾಮೀಣ ಕಾರ್ಯಪಡೆಯೂ ಈ ನಿಟ್ಟಿನಲ್ಲಿ ಸೂಕ್ತ ತಿರ್ಮಾನಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸಬೇಕೆಂದು ಕೋರಿದರು ತದನಂತರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದ ಆರೋಗ್ಯ ಇಲಾಖಾ ಮಾಹಿತಿಯನ್ನು ಹಿರಿಯ ಆರೋಗ್ಯ ಸಹಾಯಕಿಯಾಗಿರುವ ಶ್ರೀಮತಿ ಮೋಹಿನಿ ರವರು ಸಭೆಗೆ ನೀಡಿದರು ಮತ್ತು ವಿದೇಶದಿಂದ ಐವರ್ನಾಡಿನ ಕಯೋಳ್ತಡ್ಕ ಮನೆಗೆ ಬಂದಿರುವ ಶ್ರೀ ಆಶೋಕ ಎಂಬವರು ಹೊಮ್ ಕ್ವಾರಂಟೈನ್ ಅವಧಿಯಲ್ಲಿ ಪೇಟೆಗೆ ಬರಬೇಕೆಂದು ಕೋರಿರುವುದನ್ನು ತಿಳಿಸಿದರು.ತದ ನಂತರ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಪ್ರಸ್ತಾವನೆ, ಆರೋಗ್ಯ ಇಲಾಖಾ ಮಾಹಿತಿ ಹಾಗೂ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿ ಸರಕಾರದ ನಿರ್ದೇಶನಗಳನ್ನು ಪರಿಶೀಲಿಸಿ ಸಮಿತಿಯೂ ಕೂಲಂಕುಶವಾಗಿ ಚರ್ಚಿಸಿ ಈ ಕೆಳಗಿನ ನಿರ್ಣಯಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು.
1)ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ದಿನಸಿ ವರ್ತಕರ ಸಭೆ ಕರೆದು ಕರ್ಪ್ಯೂ ಸಡಿಲದ ಅವಧಿಯಲ್ಲಿ ಹಾಗೂ ಬಿಡುವಿನ ದಿನ ಜನಸಂಧಣಿ ಕಡಿಮೆ ಮಾಡುವ ಉದ್ದೇಶದಿಂದ ದೂರವಾಣಿ ಕರೆ ಮೂಲಕ ಗ್ರಾಹಕರ ಬೇಡಿಕೆ ಸ್ವೀಕರಿಸಿ ಜನಸಂದಣಿ ಯಾಗದಂತೆ ಅವಶ್ಯಕ ವಸ್ತುಗಳ ವಿತರಣೆಗೆ ಕ್ರಮ ವಹಿಸಬೇಕೆಂದು ನಿರ್ಣಯಿಸಲಾಯಿತು. ಮತ್ತು ವರ್ತಕರು ದಾಸ್ತಾನುಗಾರರಿಂದ ಅವಶ್ಯಕ ಸಾಮಾಗ್ರಿಗಳ ನ್ನು ಪೂರೈಕೆ ಮಾಡಿಕೊಳ್ಳುವರೇ ಗ್ರಾಮ ಪಂಚಾಯತ್ ನಿಂದ ಪಾಸ್ ಒದಗಿಸುವುದಾಗಿ ನಿರ್ಣಯಿಸಲಾಯಿತು.
2)ಗ್ರಾಮ ಪಂಚಾಯತ್ ವ್ಯಾಪ್ತಿಯ ದಿನಸಿ ವರ್ತಕರಿಗೆ ನ್ಯಾಯಯುತ ಬೆಲೆಯಲ್ಲಿ ದಿನಸಿ ಸಾಮಾನುಗಳನ್ನು ಮಾರಟ ಮಾಡಬೇಕೆಂದು ಸೂಚಿಸಲು ನಿರ್ಣಯಿಸಲಾಯಿತು.
3)ಗ್ರಾಮ ಪಂಚಾಯತ್ ಸಹಕಾರದೊಂದಿಗೆ ದಿನಸಿ ಸಾಮಾಗ್ರಿಗಳನ್ನು ಅತ್ಯಂತ ಹೆಚ್ಚಿನ ಆಶಕ್ತಿ ಮತ್ತು ಮುತುವರ್ಜಿಯಿಂದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ವಿತರಿಸಲು ಕ್ರಿಯಾಶೀಲತೆಯಿಂದ ಸಹಕರಿಸುತ್ತಿರುವ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,ಉಪಾಧ್ಯಕ್ಷರು,ಆಡಳಿತ ಮಂಡಳಿ ಹಾಗೂ ಸಿಬ್ಬಂಧಿಗಳನ್ನು ಪ್ರಶಂಸಿಸಲಾಯಿತು.
4)ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ನ್ಯಾಯಬೆಲೆ ಅಂಗಡಿಯ ಮೂಲಕ ಸರಕಾರದ ನಿಭಂಧನೆಗಳನ್ನು ಪರಿಶೀಲಿಸಿಕೊಂಡು ವಾರ್ಡ್ ವಾರು ಜನವಸತಿ ಪ್ರದೇಶಕ್ಕೆ ಅನ್ವಯಿಸುವಂತೆ ಸೂಕ್ತ ದಿನಾಂಕಗಳನ್ನು ಗೊತ್ತು ಪಡಿಸಿ ಪಡಿತರ ಸರಬರಾಜನ್ನು ಮಾಡುವುದಾಗಿಯೂ ಹಾಗೂ ಪಡಿತರ ವಿತರಣೆಗೆ ಸಾರ್ವಜನಿಕ ಅನುಕೂಲಕ್ಕಾಗಿ ಗ್ರಾಮ ಪಂಚಾಯತ್ ಪಿಕಪ್ ವಾಹನವನ್ನು ಬಳಸಿಕೊಳ್ಳುವುದಾಗಿ ನಿರ್ಣಯಿಸಲಾಯಿತು.
5)ಸಹಕಾರಿ ಬ್ಯಾಂಕಿನ ದಿನಸಿ ಅಂಗಡಿಯಲ್ಲಿ ಜನಸಂಧಣಿ ಉಂಟಾಗದಂತೆ ದೂರವಾಣಿ ಮುಖೇನಾ ಬೇಡಿಕೆ ಪಡೆದು ಗ್ರಾಹಕರ ವಿತರಣಾ ಕ್ರಮ ಕೈಗೊಂಡಿರುವುದನ್ನು ಅಭಿನಂಧಿಸಲಾಯಿತು. ಮತ್ತು ಇದೇ ರೀತಿಯ ಸೇವೆಯನ್ನು ಇನ್ನಷ್ಠು ವಿಸ್ತರಿಸುವಂತೆ ಕೋರಲಾಯಿತು.
6)ಹೋಮ್ ಕ್ವಾರಂಟೈನ್ ನಲ್ಲಿರುವ ಶ್ರೀ ಆಶೋಕ ರವರ ಮನೆಗೆ ವಿಲೇಜ್ ಟಾಸ್ಕ್ ಪೋರ್ಸ್ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ನೀಡುವುದಾಗಿ ನಿರ್ಣಯಿಸಲಾಯಿತು.
7)ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಅನುಕೂಲವಾಗುವ ನೆಲೆಯಲ್ಲಿ ಐವರ್ನಾಡು ಪ್ರಾ,ಕೃ,ಪ,ಸಹಕಾರಿ ಸಂಘದ ದಿನಸಿ ಮತ್ತು ನ್ಯಾಯಬೆಲೆ ಅಂಗಡಿಯನ್ನು ಪ್ರತಿದಿನ ತೆರೆದಿಡಲು ಅನುಮತಿ ನೀಡಬೇಕೆಂದು ಸಂಬಂಧಪಟ್ಟವರನ್ನು ಕೊರಬೇಕೆಂದು ನಿರ್ಣಯಿಸಲಾಯಿತು ಮತ್ತು ನ್ಯಾಯಬೆಲೆ ಅಂಗಡಿಗೆ ಹಾಗೂ ದಿನಸಿ ವರ್ತಕರಿಗೆ ದಿನಸಿ ಸಾಮಾನುಗಳ ಪೂರೈಕೆಗೆ ದಾಸ್ತಾನುದಾರರಿಂದ ಸರಬರಾಜು ವ್ಯವಸ್ಥೆಯನ್ನು ಜಿಲ್ಲಾಡಳಿತ ರೂಪಿಸಬೇಕೆಂದು ನಿರ್ಣಯಿಸಲಾಯಿತು.
8)ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ಪ್ಯೂ ಸಂಧರ್ಭಗಳಲ್ಲಿ ತೀವ್ರ ತೊಂದರೆ ಅನುಭವಿಸುವ ದುರ್ಬಲ ನಿರ್ಗತಿಕ ಅರ್ಹ ಕುಟುಂಬಗಳನ್ನು ಗುರುತಿಸಿ ಅವರಿಗೆ ವಿಲೇಜ್ ಟಾರ್ಸ್ಕ್ ಪೋರ್ಸ್ ಕಮಿಟಿ ವತಿಯಿಂದ ನೆರವು ನೀಡಬೇಕೆಂದು ನಿರ್ಧರಿಸಲಾಯಿತು ಅಲ್ಲದೆ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯ ಮತ್ತು ಅವಶ್ಯಕ ಸಾಮಾಗ್ರಿಗಳನ್ನು ಸಮಿತಿಯಿಂದ ಸ್ಥಳೀಯ ಸಹಕಾರಿ ಬ್ಯಾಂಕಿನ ದಿನಸಿ ವಿಭಾಗದ ಮೂಲಕ ನೀಡುವುದಾಗಿ ನಿರ್ಣಯಿಸಲಾಯಿತು. ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳ ವಿರುದ್ದ ಹೋರಾಡುವ ಸಂಧರ್ಭದಲ್ಲಿ ಅಗತ್ಯ ಆಕಸ್ಮಿಕ ಖರ್ಚು ವೆಚ್ಚಗಳನ್ನು ಬರಿಸಲು,ಅತ್ಯಂತ ನಿರ್ಗತಿಕರಿಗೆ , ಬಡವರಿಗೆ ನೆರವು ನೀಡಲು ಮತ್ತು ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಹಸ್ತ ನೀಡುವ ಸದ್ದುದ್ದೇಶದಿಂದ Aivarnadu Village Task Force Commite ಹೆಸರಿನಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉಳಿತಾಯ ಖಾತೆ ತೆರೆಯುವುದಾಗಿಯೂ ಮತ್ತು ಕನಿಷ್ಠ ರೂ 1000 ಕ್ಕಿಂತ ಕಡಿಮೆಯಾಗದಂತೆ ಧನಸಹಾಯವನ್ನು ಈ ಖಾತೆಗೆ ಸ್ವೀಕರಿಸುವುದಾಗಿಯೂ ನಿರ್ಣಯಿಸಲಾಯಿತು , ಮತ್ತು ದೇಣಿಗೆ ನೀಡುವವರಿಗೆ ಮಾಹಿತಿ ನೀಡುವ ಸದ್ದುದ್ದೇಶದಿಂದ Social media ಮೂಲಕ ಪ್ರಚುರ ಪಡಿಸುವುದಾಗಿ ನಿರ್ಣಯಿಸಲಾಯಿತು.ಮತ್ತು ಪ್ರಥಮ ದೇಣಿಗೆ ನೀಡಿರುವ ಶ್ರೀ ವಿಕ್ರಂ ಪೈ ಉಪಾಧ್ಯಕ್ಷರು ಐವರ್ನಾಡು ಪ್ರಾ,ಕೃ,ಪ,ಸ.ಸಂಘ ಇವರನ್ನು ಅಭಿನಂದಿಸಲಾಯಿತು.
9)Village taskforce commite ಉಳಿತಾಯ ಖಾತೆಯನ್ನು ಜಂಟಿಯಾಗಿ ನಿರ್ವಹಿಸಲು ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಲಿಖಿತವಾಗಿ ತಿಳಿಸಿದ್ದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಿಗೆ ಜಂಟಿ ಖಾತೆ ನಿರ್ವಹಣೆಗೆ ಅಧಿಕಾರ ನೀಡುವುದಾಗಿ ನಿರ್ಣಯಿಸಲಾಯಿತು.
10) ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಾರ್ಡಿನ ಸದಸ್ಯರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿವಿಧ ವಾರ್ಡ್ ಗಳಲ್ಲಿ ಇರುವ ತೀರಾ ನಿರ್ಗತಿಕರು, ದುರ್ಬಲರು ಮತ್ತು ನೆರವು ಪಡೆಯಲು ಸಂಕಷ್ಠದ ಅರ್ಹ ಮಾನದಂಡ ಹೊಂದಿರುವವರನ್ನು ಮತ್ತು ಅಂತಹ ಕುಟುಂಬಗಳನ್ನು ಗುರುತಿಸಬೇಕೆಂಬುದಾಗಿಯೂ ಮತ್ತು ಅಂತಹವರಿಗೆ ವಿಲೇಜ್ ಟಾಸ್ಕ್ ಪೋರ್ಸ್ ಕಮಿಟಿಯಿಂದ ಪುಡ್ ಕಿಟ್ ಮತ್ತು ವೈದ್ಯಕೀಯ ನೆರವನ್ನು ನೀಡುವುದಾಗಿ ನಿರ್ಣಯಿಸಲಾಯಿತು.
11)ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ಅನುಕೂಲವಾಗಲು ಗ್ರೇಡೆಡ್ ಪ್ಯಾಬ್ರಿಕ್ ಬಟ್ಟೆ ಬಳಸಿ ಮಾಸ್ಕ್ ತಯಾರಿಸಲು ಎರಡು ಘಟಕಗಳಿಗೆ/ಸ್ವಸಹಾಯ ಸಂಘಗಳಿಗೆ ತಾತ್ಕಾಲಿಕ ಅನುಮತಿ ನೀಡುವುದಾಗಿ ನಿರ್ಣಯಿಸಲಾಯಿತು.
12)ಕರ್ಪ್ಯೂ ಅವಧಿಯಲ್ಲಿ ಶಾಲಾ ಮೈದಾನ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದಂತೆ ಆರಕ್ಷಕರಾದ ಶ್ರೀ ನವೀನ್ ರವರು ಮಾಹಿತಿ ನೀಡುದುದನ್ನು ಮತ್ತು ಸದ್ರಿ ಅವರು ನೀಡಿದ ಆರಕ್ಷಕ ಮಾಹಿತಿಗಳನ್ನು ಸಭೆಯಲ್ಲಿ ದಾಖಲಿಸಿಕೊಳ್ಳಲಾಯಿತು.
13)ಕೋವಿಡ್-19 ಸೋಂಕಿನ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 31/03/2020 ರ ವರೆಗೆ ನೀಡಿರುವ KFDC ರಬ್ಬರ್ ನಿಗಮದ ಕಾರ್ಮಿಕರ ರಜೆಯನ್ನು ಕೇಂದ್ರ ಸರಕಾರವು ನಿಗದಿಪಡಿಸಿದ ಏಪ್ರಿಲ್ 14 ರ ಲಾಕ್ ಡೌನ್ ಅವಧಿವರೆಗೆ ವಿಸ್ತರಿಬೇಕೆಂದು ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಲಿಂಗಂ ರವರ ಕೋರಿಕೆಯನ್ನು ಕೆ.ಎಪ್.ಡಿ.ಸಿ ನಿಗಮದ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದವರಿಗೆ ಕಳುಹಿಸುವದಾಗಿ ನಿರ್ಣಯಿಸಲಾಯಿತು.
14)ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆಯ ವತಿಯಿಂದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಭಿಸಿರುವ ಬಡಕುಟುಂಬಗಳಿಗೆ ಮತ್ತು ಸಕ್ಕರೆ ಕಾಯಿಲೆ ಹಾಗೂ ಬಿ.ಪಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಔಷಧಿ ವಿತರಿಸಬೇಕೆಂದು ನಿರ್ಣಯಿಸಲಾಯಿತು.
ಕೊನೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಂದಿಸಿದರು..

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.