ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ವರ್ತಕರ ಸಭೆ

Advt_Headding_Middle
Advt_Headding_Middle

 


ಐವರ್ನಾಡು ಗ್ರಾಮ ಪಂಚಾಯತ್ ಕಾರ್ಯಪಡೆಯ ವತಿಯಿಂದ ಎ.1 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಐವರ್ನಾಡು ಗ್ರಾಮ ವ್ಯಾಪ್ತಿಯ ವರ್ತಕರ ಸಭೆಯು ನಡೆಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತ್ತು ವರ್ತಕರು ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಈ ಕೆಳಗಿನ ನಿಯಮಗಳನ್ನು ಪಾಲಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

1).ಸರಕಾರ ನಿಗದಿ ಪಡಿಸಿದ ದಿನಸಿ ವ್ಯಾಪಾರಕ್ಕೆ ಬಿಡುವಿನ ದಿನ ಹಾಗೂ ಸಮಯದಂದು ಅಂಗಡಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಹಕರು ದೂರವಾಣಿ ಮೂಲಕ ಕರೆಮಾಡಿ ವರ್ತಕರಲ್ಲಿ ಅಹಾರ,ಸಾಮಾಗ್ರಿಗಳ ಪಟ್ಟಿ ನೀಡುವುದು.
2) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ದಿನಸಿ ವರ್ತಕರ ಸಭೆ ಕರೆದು ಕರ್ಪ್ಯೂ ಸಡಿಲದ ಅವಧಿಯಲ್ಲಿ ಹಾಗೂ ಬಿಡುವಿನ ದಿನ ಜನಸಂಧಣಿ ಕಡಿಮೆ ಮಾಡುವ ಉದ್ದೇಶದಿಂದ ದೂರವಾಣಿ ಕರೆ ಮೂಲಕ ಗ್ರಾಹಕರ ಬೇಡಿಕೆ ಸ್ವೀಕರಿಸಿ ಜನಸಂದಣಿ ಯಾಗದಂತೆ ಅವಶ್ಯಕ ವಸ್ತುಗಳ ವಿತರಣೆಗೆ ಕ್ರಮ ವಹಿಸಬೇಕೆಂದು ನಿರ್ಣಯಿಸಲಾಯಿತು. ಮತ್ತು ವರ್ತಕರು ದಾಸ್ತಾನುಗಾರರಿಂದ ಅವಶ್ಯಕ ಸಾಮಾಗ್ರಿಗಳ ನ್ನು ಪೂರೈಕೆ ಮಾಡಿಕೊಳ್ಳುವರೇ ಗ್ರಾಮ ಪಂಚಾಯತ್ ನಿಂದ ಪಾಸ್ ಒದಗಿಸುವುದಾಗಿ ನಿರ್ಣಯಿಸಲಾಯಿತು.
2).ವರ್ತಕರು ವ್ಯಾಪಾರ ಬಂದ್ ಇರುವ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಳನ್ನು ಪ್ಯಾಕ್ ಮಾಡಿ ಬಿಡುವಿನ ಸಂದರ್ಭದಲ್ಲಿ,ಬಿಡುವಿನ ದಿನ ಗ್ರಾಹಕರ ಕರೆ ಮಾಡಿ ಅವರನ್ನು ಬರ ಹೇಳಿ ಸಾಮಾಗ್ರಿ ಸರಬರಾಜು ಮಾಡುವುದು.
3).ಸರಕಾರ ನಿಗದಿಪಡಿಸಿದ ಬಿಡುವಿನ ದಿನ ಹಾಗೂ ಸಮಯದಲ್ಲಿ,ಅಂಗಡಿಗಳಲ್ಲಿ ರುವ ದಾಸ್ತಾನು ಸಾಮಾಗ್ರಿಗಳನ್ನು ಆದಷ್ಠು ಹಂಚಿ ಎಲ್ಲರಿಗೂ ಸಿಗುವಂತೆ ಸರಬರಾಜು ಮಾಡಲು ಆದ್ಯತೆ ನೀಡುವುದು.
4) ಗ್ರಾಮ ಪಂಚಾಯತ್ ವ್ಯಾಪ್ತಿಯ ದಿನಸಿ ವರ್ತಕರಿಗೆ ನ್ಯಾಯಯುತ ಬೆಲೆಯಲ್ಲಿ ದಿನಸಿ ಸಾಮಾನುಗಳನ್ನು ಮಾರಾಟ ಮಾಡಬೇಕೆಂದು ಸೂಚಿಸಲು ನಿರ್ಣಯಿಸಲಾಯಿತು
4).ಅಂಗಡಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸದೇ ಮತ್ತು ಕನಿಷ್ಠ 3 ಮೀಟರ್ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ವ್ಯಾಪಾರ ಮಾಡಬಾರದು.
5).ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪರವಾನಿಗೆ ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು.
6).ಗ್ರಾಮ ಪಂಚಾಯತ್ ಗೆ ವರ್ತಕರು ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದರು
7).ಸಭೆಯಲ್ಲಿ ಭಾಗವಹಿಸಿದ ವರ್ತಕರು ಗ್ರಾಮ ಪಂಚಾಯತ್ ನಿರ್ಣಹಿಸಿ ಕೈಗೊಂಡ ನಿಯಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಅನುಷ್ಠಾನಗೊಳಿಸಿ ಸಹಕಾರ ನೀಡುವ ಭರವಸೆ ನೀಡಿದರು.
9).ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗೆ ಅಗತ್ಯ ವಸ್ತುಗಳಿಗೆ ಪೋನ್ ಮೂಲಕ ಬೇಡಿಕೆ ಸಲ್ಲಿಸಲು ವರ್ತಕರ ದೂರವಾಣಿ ಸಂಖ್ಯೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ.ಸಾರ್ವಜನಿಕರು ಇದನ್ನು ಸದುಪಯೋಗಿಸಿ ಅಂಗಡಿಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ವಿನಂತಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.