ಪೆರಾಜೆ ಕೊರೋನ ಕಾರ್ಯ ಪಡೆಯ ವಿಶೇಷ ಸಭೆ

Advt_Headding_Middle
Advt_Headding_Middle

 

ಹೊರಗಿನಿಂದ ಬರುವ ವ್ಯಕ್ತಿಗಳ ಕುರಿತು ನಿಗಾ ಇರಿಸಲು ತೀರ್ಮಾನ

ಸುದ್ದಿ ಸಂಸ್ಥೆಯ ತುರ್ತು ಸ್ಪಂದನೆಗೆ ಕೃತಜ್ಞತೆ

ಪೆರಾಜೆ ಗ್ರಾಂ. ಪಂ. ವ್ಯಾಪ್ತಿಯ ಕೊರೊನ ಮುಂಜಾಗ್ರತಾ ಕ್ರಮ ಕಾರ್ಯ ಪಡೆಯ ಸಭೆಯು ಗ್ರಾಂ. ಪಂ. ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮದಲ್ಲಿರುವ ಸಮಸ್ಯೆಯ ಬಗ್ಗೆ ತೀವ್ರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಪೆರಾಜೆ ಗ್ರಾಮ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕಳ್ಳ ಬಟ್ಟಿ ಸಾರಾಯಿಯ ವ್ಯವಹಾರ ನಡೆಯುತ್ತದೆ ಎಂಬ ಬಗ್ಗೆ, ಜ್ಯೋತಿ ಪ್ರೌಢಶಾಲೆ ಮತ್ತು ಕನ್ನಡ ಪೆರಾಜೆ ಆಟದ ಮೈದಾನದಲ್ಲಿ ಆಟವಾಡುತ್ತಿರುವ ಬಗ್ಗೆ, ಕುಂಬಳಚೇರಿ ಮತ್ತು ಕನ್ನಡ ಪೆರಾಜೆ ಶಾಲಾ ಬಳಿ ಇರುವ ಅಂಗಡಿಗಳು ತೆರೆದು ಹೆಚ್ಚಿನವರು ಇಲ್ಲಿ ಗುಂಪಾಗಿ ಕುಳಿತುಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಹುಡುಗರ ತಂಡವೊಂದು ಬೈಕಿನಲ್ಲಿ ಸುಮ್ಮನೆ ತಿರುಗಾಡುವ ಧೃಶ್ಯಗಳು ಕಂಡು ಬರುತ್ತವೆ. ಇದಕ್ಕೆಲ್ಲ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಈಗಾಗಲೇ ಸುದ್ದಿ ಪತ್ರಿಕೆಯ ಪ್ರತಿನಿಧಿಗಳು ಅವಶ್ಯಕ ಔಷಧಿಗಳನ್ನು ಸುದ್ದಿ ಮಾಧ್ಯಮದವರು ತಿಳಿಸಿದ ಕೂಡಲೇ ನಮಗೆ ತಂದು ಕೊಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಅಲ್ಲದೆ ಗ್ರಾಮದಲ್ಲಿ ಕಟ್ಟೆಚ್ಚರಿಕೆಯಿಂದ ಹೊರಗಿನಿಂದ ಬಂದ ಮಾಹಿತಿಯನ್ನು ಸಂಗ್ರಹಿಸ ಬೇಕು ಈಗಾಗಲೇ ಸುಮಾರು 50 ಜನರು ಪರಊರಿಂದ ಅವರ ಮನೆಗೆ ಬಂದಿರುತ್ತಾರೆ ಅವರನ್ನು ಈಗಾಗಲೇ ಗುರುತಿಸಲಾಗಿದೆ. ಏಪ್ರಿಲ್ 2ರಂದು ಅವರ ಕೈಗೆ ಸೀಲ್ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಪೊಲೀಸ್ ಇಲಾಖೆಯವರು ಮುತುವರ್ಜಿ ವಹಿಸಬೇಕೆಂದು ಅಧಿಕಾರಿಗಳಿಗೆ ವಿನಂತಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಧರಣಿಧರ, ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯ ಉದಯಚಂದ್ರ ಕುಂಬಳಚೇರಿ, ಗ್ರಾಮಲೆಕ್ಕಾಧಿಕಾರಿ ರಮೇಶ್, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಶೈಲಜಾ, ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ’ ಆಶಾ ಕಾರ್ಯಕರ್ತೆ ಶ್ರೀಮತಿ ಹೇಮಲತಾ, ಸ್ಥಳೀಯ ವೈದ್ಯರಾದ ಡಾ. ಲಕ್ಷ್ಮೀಶ ಬೀಟ್ ಪೊಲೀಸ್ ಕೃಷ್ಣಮೂರ್ತಿ, ಪಿಡಿಒ ಮಹದೇವಪ್ರಭು, ಡಾ. ಅಶೋಕ್, ಸುದ್ದಿ ಬಿಡುಗಡೆಯ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.