ಕೊಳ್ತಿಗೆ : ಅಕ್ರಮ ಮದ್ಯ ಮಾರಾಟ – ಕೇಸು ದಾಖಲು

Advt_Headding_Middle
Advt_Headding_Middle

ಕೊಳ್ತಿಗೆ ಗ್ರಾಮದ ಉರುಂಬಿ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಧಾಳಿ ನಡೆಸಿದ್ದು ಆರೋಪಿ ಓಡಿ ಪರಾರಿಯಾಗಿದ್ದು ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಎ.1 ರಂದು ನಡೆದಿದೆ.

ಬೆಳ್ಳಾರೆ ಪೊಲೀಸ್ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಕೋವಿಢ್ -19 ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯದ ವೇಳೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕುಂಟಿಕಾನ ಉರುಂಬಿ ಕಾಲೋನಿ ಎಂಬಲ್ಲಿ ಮನೆಯ ಹಿಂಬದಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯವನ್ನು ವಶದಲ್ಲಿ ಇಟ್ಟುಕೊಂಡು ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ಹರೀಶ್ (24 ) ಉರುಂಬಿ ಕಾಲೋನಿ ಕುಂಟಿಕಾನ ಎಂಬಾತನು ಓಡಿ ಪರಾರಿಯಾಗಿದ್ದು ಸ್ಥಳದಲ್ಲಿದ್ದ 2 ರಟ್ಟಿನ ಬಾಕ್ಸ್ ಗಳನ್ನು ಪರಿಶೀಲಿಸಲಾಗಿ 1ರಲ್ಲಿ Mysore Lancer Whisky ಎಂಬ ಬ್ರಾಂಡಿನ ತಲಾ 180ml ನ 48 ಕ್ವಾರ್ಟರ್ ಬಾಟಲ್ ಗಳು . ಮತ್ತು ಇನ್ನೊಂದರಲ್ಲಿ 36 ಕ್ವಾರ್ಟರ್ ಗಳು ಪತ್ತೆಯಾಗಿರುತ್ತದೆ. (ಪ್ರತಿಯೊಂದು ಕ್ವಾಟರ್ ಬಾಟಲಿ ಮೌಲ್ಯ ರೂ 61 ರಂತೆ ಒಟ್ಟು ರೂಂ 5124/_ ಆಗಿರುತ್ತದೆ) ಕೊವಿಡ್ -19 ವೈರಸ್ ಸೋಂಕು ಹರಡದಂತೆ ಜಿಲ್ಲಾಡಳಿತವು ಎಲ್ಲಾ ಬಾರ್ ಮತ್ತು ವೈನ್ ಶಾಪ್ ಗಳನ್ನುಮುಚ್ಚಿದ್ದರೂ ಆರೋಪಿಯು ಎಲ್ಲಿಂದಲೋ ಮದ್ಯವನ್ನು ತಂದು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ತನ್ನ ಮನೆಯ ಬಳಿ ದಾಸ್ತಾನಿರಿಸಿ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಮದ್ಯವನ್ನು ಮಹಜರು ನಡೆಸಿ ವಶಕ್ಕೆ ಪಡೆದು ಓಡಿ ಪರಾರಿಯಾದ ಆರೋಪಿ ಹರೀಶನ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.