ಜಾಲ್ಸೂರು ಗ್ರಾ.ಪಂ. ನಲ್ಲಿ ಕೊವಿಡ್ 19 ಕಾರ್ಯಪಡೆಗೆ ಯೂಟ್ಯೂಬ್ ಮೂಲಕ ತರಬೇತಿ ಕಾರ್ಯಕ್ರಮ 

Advt_Headding_Middle
Advt_Headding_Middle


ಕೊವಿಡ್-19 ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಗ್ರಾಮ ಮಟ್ಟದಲ್ಲಿ ರಚನೆಯಾಗಿರುವ ಕಾರ್ಯಪಡೆಗೆ ಯೂಟ್ಯೂಬ್ ಮೂಲಕ ತರಬೇತಿ ನೀಡುವ ಕಾರ್ಯಕ್ರಮವು ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ಎ.1ರಂದು ಜರುಗಿತು.
ರಾಜ್ಯ ಸರ್ಕಾರದ ವತಿಯಿಂದ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ವೀಡಿಯೋವನ್ನು ಯೂಟ್ಯೂಬ್ ಮೂಲಕ ಪ್ರಸಾರ ಮಾಡಿ ಗ್ರಾ.ಪಂ. ಕಾರ್ಯಪಡೆಯ ಪದಾಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎಸ್.ನಾಯಕ್, ಉಪಾಧ್ಯಕ್ಷ ದಿನೇಶ್ ಅಡ್ಕಾರು, ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೂವಪ್ಪ ಗೌಡ, ಗ್ರಾ.ಪಂ. ಕಾರ್ಯದರ್ಶಿ ಸುಬ್ಬಯ್ಯ, ಪಂಚಾಯತಿ ಸದಸ್ಯರುಗಳು, ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾ.ಪಂ. ಕಾರ್ಯಪಡೆಯ ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.