Breaking News

ಕೊರೋನಾ ಪರಿಸ್ಥಿತಿ : ಸುಳ್ಯದಲ್ಲಿ ಉಸ್ತುವಾರಿ ಸಚಿವರ ಸಭೆ

Advt_Headding_Middle
Advt_Headding_Middle

 

ಅಧಿಕ ದರ ವಸೂಲಿ ಮಾಡಿದರೆ ಕ್ರಮ : ಕೋಟ

ಈ ಹಂತದಲ್ಲಿ ಸರಳ ಜೀವನ ನಡೆಸಲು ಸಚಿವರ ಮನವಿ

ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮತ್ತು ಈ ದಿನಗಳಲ್ಲಿ ಎಲ್ಲರೂ ಸರಳ ಜೀವನ ನಡೆಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮನವಿ ಮಾಡಿಕೊಂಡಿದ್ದಾರೆ.

ಇಂದು ಸುಳ್ಯದಲ್ಲಿ ಮುನ್ನೆಚ್ಚರಿಕೆ ಹಾಗೂ ತಾಲೂಕಿನ ಸಮಸ್ಯೆಗಳ ಕುರಿತು ತಿಳಿಯಲು ಸುಳ್ಯ ತಾ.ಪಂ. ನಲ್ಲಿ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿದರು.

“ಕೊರೊನಾ ವೈರಸ್ ಓಡಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇದನ್ನು ಎಲ್ಲರೂ ಪಾಲಿಸಬೇಕು. ಮೊನ್ನೆ ಜಿಲ್ಲೆಯಲ್ಲಿ ಮೂರು ದಿನ ಪೂರ್ತಿ ಬಂದ್ ಮಾಡಲಾಗಿತ್ತು. ಮೂರು ದಿನ ಕಳೆದ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಜನರು ಬಂದಾಗ ಆಗಿರುವ ಸಮಸ್ಯೆ ಗಳು, ತೊಂದರೆಗಳನ್ನು ನೋಡಿದ್ದೇವೆ. ಆದ್ದರಿಂದ ಮರುದಿನದಿಂದ ಬೆಳಗ್ಗೆ 7ರಿಂದ 12ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಇದು ಮುಂದಿನ ಆದೇಶದ ವರೆಗೆ ಮುಂದುವರಿಯಲಿದೆ ಎಂದು ಸಚಿವರು ಹೇಳಿದರು.

ಅವಕಾಶ ನೀಡಲಾಗಿದೆ ಎಂದು ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಈ ಸಂದರ್ಭದಲ್ಲಿ ಸರಳ ಜೀವನಕ್ಕೆ ಏನು ಬೇಕೊ ಅದನ್ನಷ್ಟೆ ಖರೀದಿಸಿ ಎಂದು ಸಚಿವರು ವಿನಂತಿಸಿಕೊಂಡರು. ಎಲ್ಲಿಯೂ ಎರಡು ಮೂರು ಜನರಿಗಿಂತ ಹೆಚ್ಚು ಗುಂಪು ಸೇರಬಾರದು. ಸೇರಿದರೂ ಅಂತರ ಕಾಯ್ದುಕೊಳ್ಳಿ. ಅಂತರ ಕಾಯ್ದುಕೊಳ್ಳುತ್ತಿದ್ದಾರ ಎಂಬುದನ್ನು ನಮ್ಮ ಅಧಿಕಾರಿಗಳಿಗೆ ನೋಡಿಕೊಳ್ಳಲು ಹೇಳಿದ್ದೇವೆ ಎಂದು ಸಚಿವರು ಹೇಳಿದರು.

ದಿನಸಿ ವಸ್ತುಗಳ ಬೆಲೆ ಹೆಚ್ಚಿಗೆ ಪಡೆಯುತ್ತಿರುವ ಕುರಿತು ಸಭೆಯಲ್ಲಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಪ್ರಸ್ತಾಪಿಸಿದಾಗ, ” ಕೆಲವರು ಹೋಲ್ ಸೇಲ್ ಗೆ ಪಡೆದು ಒಂದೆರಡು ರೂ ಮಾರ್ಜಿನ್ ಇಟ್ಟು ಸೇಲ್ ಮಾಡಿದರೆ ತಪ್ಪಲ್ಲ. ಆದರೆ 10 ರೂ ಗಳ ವಸ್ತುಗಳ 20 ರೂ ಗೆ ಮಾರುತ್ತಾರಾದಾರೆ ಆ ರೀತಿಯ ಕಂಪ್ಲೈಂಟ್ ನೀಡಿ. ಕ್ರಮ ಕೈಗೊಳ್ಳೊಣ” ಎಂದು ಸಚಿವರು ಹೇಳಿದರು.

ಕೊರೊನಾ ವೈರಸ್ ಭೀತಿ ಬಳಿಕ ಹೆಚ್ಚಿನ ಕಡೆಗಳಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಜತೆ ಇತರ ಅಧಿಕಾರಿಗಳು ಕೈ ಜೋಡಿಸುವಂತೆ ಆಗಬೇಕು. ಈ ಸಮಯದಲ್ಲಿ ಅಧಿಕಾರಿಗಳು ಫೀಲ್ಡ್ ನಲ್ಲಿ ಇರುವಂತೆ ಮಾಡಬೇಕು ಎಂದು ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು ಹೇಳಿದಾಗ, “ಈ ಸಮಯದಲ್ಲಿ ಅಧಿಕಾರಿಗಳು ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಆಗ ಸಭೆಯಲ್ಲಿದ್ದ ಇ.ಒ.ಭವಾನಿಶಂಕರರು ತಾ.ಪಂ. ಹಾಗೂ ಪಿ.ಡಿ.ಒ
ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.