ಗೂನಡ್ಕ : ಬಿಸಿಲಿನ ತಾಪಕ್ಕೆ ಕಂಗಾಲಾದ ಜನರಿಗೆ ಕಾರ್ಯಕರ್ತರಿಂದ ನೀರು ವಿತರಣೆ

Advt_Headding_Middle
Advt_Headding_Middle

ಸರಕಾರವು ಪಡಿತರ ವಿತರಣೆ ಆರಂಭಿಸಿದ್ದು, ಅದನ್ನು ಪಡೆಯಲು ರೇಷನ್ ಅಂಗಡಿಯ ಮುಂದೆ ಜನರು ಜಮಾಯಿಸಿದರು. ಸರತಿ ಸಾಲಾಗಿ ನಿಂತವರು ಬಿಸಿಲ ಬೇಗೆಗೆ ಬೆಂದು ಬಾಯಾರಿಕೆಯಿಂದ ಕಂಗಾಲಾದರು. ವಿಷಯ ಮನದಟ್ಟು ಮಾಡಿದ ಗೂನಡ್ಕ ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ಸ್ವಾಂತನ ಟೀಂ ಕಾರ್ಯಕರ್ತರು ಕೂಡಲೇ ಕಾರ್ಯಪ್ರವೃತ್ತರಾಗಿ ಬಾಟಲ್ ನೀರು ಖರೀದಿಸಿ ಸರ್ವರಿಗೂ ವಿತರಿಸಿ ಮಾನವೀಯತೆ ಮೆರೆದರು.

ಈ ಸಂಧಂರ್ಭ ಕಾರ್ಯಕರ್ತರಾದ ಸಿದ್ದೀಕ್ ಗೂನಡ್ಕ, ಹಾರಿಸ್ ಗೂನಡ್ಕ, ಉನೈಸ್,ಕಾಶಿಫ್,ಮುನೀರ್ ಪ್ರಗತಿ ಮುಂತಾದವರು ಕಾರ್ಯಾಚರಿಸಿದರು.ಪ್ರಸ್ತುತ ಸ್ವಾಂತನ ಟೀಂ ವತಿಯಿಂದ ಜನರಿಗೆ ಅವಶ್ಯಕವಾದ ಮೆಡಿಸಿನ್ ಸುಳ್ಯದಿಂದ ತಲುಪಿಸುವ ಸೇವೆ ನಡೆಯುತ್ತಿದೆ. ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಎಸ್ ಎಸ್ ಎಫ್ ಅಧ್ಯಕ್ಷ ಹಸೈನಾರ್ ದೊಡ್ಡಡ್ಕ ರವರು ಕೋವಿಡ್ 19 ಹಿನ್ನೆಲೆಯಲ್ಲಿ ತೊಂದರೆಗೊಳಗಾದ ವರಿಗೆ ಅಗತ್ಯ ಸೇವೆಗೈಯ್ಯಲು ಸಲಹೆ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.