ಅರಂತೋಡು – ತೊಡಿಕಾನ ಗ್ರಾಮದ ಪ್ರಮುಖರ ಸಭೆ

Advt_Headding_Middle
Advt_Headding_Middle

ಸರ್ಕಾರದ ಸೂಚನೆಯ ಅನ್ವಯ ಪಡಿತರ ವಿತರಣೆಯನ್ನು ವಿಕೇಂದ್ರೀಕರಣಗೊಳಿಸಿ ಸುಗಮವಾಗಿ ವಿತರಿಸುವ ದೃಷ್ಟಿಯಿಂದ ಯೋಜನೆಯ ರೂಪುರೇಷೆ ಸಿದ್ಧಪಡಿಸಲು ಅರಂತೋಡು ತೊಡಿಕಾನ ಗ್ರಾಮದ ಪ್ರಮುಖರ ಸಭೆ ನಡೆಯಿತು.

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಾಸುದೇವ ನಾಯಕ್, ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಿವಾನಂದ ಕುಕ್ಕುಂಬಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಸಹಕಾರಿ ಸಂಘದ ನಿರ್ದೇಶಕರಾದ ವಿನೋದ್ ಉಳುವಾರು, ಚಂದ್ರಶೇಖರ್ ಚೋಡಿಪಣೆ, ಕುಸುಮಾಧರ A V, ನಿಧೀಶ್, ಸೋಮಶೇಖರ್ ಪೈಕ, ಹರಿಪ್ರಸಾದ್ ಕಿರ್ಲಾಯ,ಅಪ್ಪುಕುಂಞಿ ಜನಾರ್ದನ ಕೆ ಯುವ ಬ್ರಿಗೇಡ್ ಮತ್ತು ಬಜರಂಗದಳ ಸದಸ್ಯರು ಭಾಗವಹಿಸಿದ್ದರು. ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಸಹಕಾರಿ ಸಂಘದ ವ್ಯಾಪ್ತಿಯ ನಾಗರಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪಡಿತರವನ್ನು ತ್ವರಿತವಾಗಿ ವಿತರಿಸುವ ಬಗ್ಗೆ ವಿಸ್ತೃತವಾದ ಚರ್ಚೆ ನಡೆದು ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1.ಬೈಲುವಾರು ಪಡಿತರವನ್ನು ಅರಂತೋಡು ಮತ್ತು ತೊಡಿಕಾನ ಗ್ರಾಮದಲ್ಲಿ ವಿತರಿಸುವುದು.
2.ಅರಂತೋಡು ಮತ್ತು ತೊಡಿಕಾನ ಗ್ರಾಮದ ವ್ಯಾಪ್ತಿಯಲ್ಲಿ ಹದಿನೈದು ವಿತರಣಾ ಕೇಂದ್ರಗಳನ್ನು ಗುರುತಿಸಲಾಯಿತು.
3.ಕೇಂದ್ರ ಕಚೇರಿಯಿಂದ ವಿತರಣಾ ಕೇಂದ್ರಗಳಿಗೆ ಪಡಿತರವನ್ನು ಸಾಗಾಟ ಮಾಡಲು ವಾಹನವನ್ನು ದಾನಿಗಳಿಂದ ಪಡೆಯಲು ನಿರ್ಧರಿಸಲಾಯಿತು.
4.ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ಸ್ವಯಂ ಸೇವಕರನ್ನು ಬಳಸಿಕೊಂಡು ಪಡಿತರವನ್ನು ವಿತರಿಸು ವುದೆಂದು ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.