ಮನೆಯಲ್ಲಿ ಕಲಾಕಾರನಾದ ಸೈನಿಕ

Advt_Headding_Middle
Advt_Headding_Middle


ಮಹಾಮಾರಿ ಕೊರೊನವನ್ನು ಓಡಿಸಲು ಎಲ್ಲರೂ ಮಾನ್ಯ ಪ್ರಧಾನ ಮಂತ್ರಿಯವರ ಆದೇಶದಂತೆ ಮನೆಯಲ್ಲಿ ಕುಳಿತು ಸಮಯವನ್ನು ಮನೆಯವರ ಜೊತೆ ಕಳೆಯುತ್ತಿದ್ದಾರೆ. ಒಂದೆಡೆ ಆರ್ಥಿಕ ಪರಿಸ್ಥಿತಿ, ದೇಶದ ದುಸ್ಥಿತಿ ನೆನೆಸಿಕೊಂಡರೆ ಮರುಕವುಂಟಾಗುವುದು ಸಹಜ. ಜೀವನ ನಡೆಸಬೇಕಾದರೆ ಇದೆಲ್ಲ ಮಾಡಬೇಕಾದ್ದು ನಿಜ.


ಈ ಸಂದರ್ಭದಲ್ಲಿ ನಾನು ನನ್ನ ಮಗ, ಪತಿಯ ಜೊತೆ ಜಮ್ಮು ಕಾಶ್ಮೀರದಲ್ಲಿದ್ದೇನೆ. ಪತಿ ದಯಾನಂದ ಜಾಲುಮನೆ ೧೬ ವರ್ಷಗಳಿಂದ ಸೈನ್ಯದಲ್ಲಿ ವಾರ್ ಟ್ಯಾಂಕ್ ಗನ್ನರ್ / ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಸೈನ್ಯ ಎಂದರೆ ಶಿಸ್ತು. ನನ್ನ ಪತಿ ಕೆಲವು ಆಫೀಸ್ ಕೆಲಸದ ನಿಮಿತ್ತ ಹತ್ತಿರದ ರಾಜ್ಯ ಚಂಡೀಘಡಕ್ಕೆ ಹೋಗಿದ್ದರು. ಎರಡು ದಿನ ಮುಗಿಸಿ ಹಿಂದಕ್ಕೆ ಬರುವಷ್ಟರಲ್ಲಿ ಕೊರೊನದ ಅಟ್ಟಹಾಸ ಜಾಸ್ತಿಯಾಗಿತ್ತು. ಬಂದು ೩ನೇ ದಿವಸದಲ್ಲಿ ದೇಶ ಸಂಪೂರ್ಣ ಲಾಕ್‌ಡೌನ್ ಆಯ್ತು. ಆರ್ಮಿ ಎಂದರೆ ಗೊತ್ತಿರುವ ಹಾಗೆ ಶಿಸ್ತು. ಬಿಡುವಿನ ಸಮಯ ಎಂಬುದೇ ಇಲ್ಲ. ಹೊರಗೆ ಹೋದ ಕಾರಣ ೧೪ ದಿನ ಹೋಮ್ ಕ್ವಾರಂಟೈನ್. ಕೆಲಸ ಕಚೇರಿ, ಗಾಡಿ ಕಚೇರಿಯದ್ದು ಆದರೂ ಆರ್ಮಿಯಲ್ಲಿ ನಿಯಮ, ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ.
ನನ್ನ ಪತಿ ಹಲವು ದಿನಗಳಿಂದ ಮನೆಯಲ್ಲಿ ಕೆಲವು ಕ್ರಿಯಾಶೀಲ ಚಟುವಟಿಕೆ ಮಾಡಬೇಕು ಎಂದು ನೆನೆಸಿದ್ದರೂ ಆಗಲಿಲ್ಲ. ಎಲ್ಲಾ ಉದ್ಯೋಗದ ತರಹ ಇಲ್ಲಿ ವಾರದ ರಜೆಯೂ ಇಲ್ಲ. ದೇಶ ಸೇವೆ ಅಲ್ವಾ. ಭಾರತಾಂಬೆಯ, ನಮ್ಮೆಲ್ಲರ ರಕ್ಷಣೆ ಮಾಡುತ್ತಿರುವವರು. ಈ ಸಂದರ್ಭದಲ್ಲಿ ನಮ್ಮ ಜೊತೆ ಸಮಯವನ್ನು ಕಳೆಯುವುದರ ಜೊತೆಗೆ ಮನೆಯಲ್ಲಿ ದೇವರ ಗುಡಿ, ಡ್ರೆಸ್ಸಿಂಗ್ ಮಿರರ್, ಸೌಂಡ್ ಬಾಕ್ಸ್, ಟೇಬಲ್, ಬಾತ್ ಐಟಂ ಇಡುವಂತಹ ಸೆಲ್ಫ್ ಇದನ್ನೆಲ್ಲ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ.
ವಾರ್ ಟ್ಯಾಂಕ್ ಗನ್ನರ್ ಆದರೂ ಈ ಕೆಲಸವನ್ನು ನೋಡಿ ಕಲಿತು ಪ್ರಯೋಗಕ್ಕೆ ತಂದಿದ್ದಾರೆ. ಸೈನಿಕ ಎಂದರೆ ದೇಶಸೇವೆ ಮಾತ್ರವಲ್ಲ ಕಲಾಕರಾನೂ ಹೌದು. ತನ್ನ ಸಮಯವನ್ನು ಒಂದು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದು ತುಂಬಾ ಸಂತೋಷದಾಯಕ.


ಜಯಶ್ರೀ ದಯಾನಂದ ಜಾಲುಮನೆ
ಕೊಲ್ಲಮೊಗ್ರು, ಮಡಪ್ಪಾಡಿ ಗ್ರಾಮ

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.