Breaking News

ಜಿಲ್ಲಾಡಳಿತ ಎತ್ತಿಗೆ ಜ್ವರವಾದರೆ ಎಮ್ಮೆಗೆ ಬರೆ ಹಾಕಿದಂತೆ ಮಾಡುತ್ತಿದೆ : ಪಿ.ಎಸ್.ಗಂಗಾಧರ್

Advt_Headding_Middle
Advt_Headding_Middle

 


ಜಿಲ್ಲಾಧಿಕಾರಿಗಳು, ಕಮಿಷನರ್, ಎಸ್.ಪಿ.ಯವರ ಪತ್ರಿಕಾ ಹೇಳಿಕೆ ಕೇಳಿ ನಗಬೇಕೆ? ಅಳಬೇಕೆ ಗೊತ್ತಾಗುತ್ತಿಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಜ್ವರ ಬಂದಂತೆ ಜಿಲ್ಲಾಡಳಿತ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಎಸ್.ಗಂಗಾಧರ್ ಹೇಳಿದ್ದಾರೆ.

ಖಾಸಗಿ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ ಎಂದು ಜಿಲ್ಲಾ ಕೇಂದ್ರದಲ್ಲಿ ಎ.ಸಿ.ರೂಮಲ್ಲಿ ಕುಳಿತು ನಿರ್ಧರಿಸಿದರೆ ಪತ್ರಿಕಾಗೋಷ್ಠಿ ಸಾರ್ವಜನಿಕ ರಿಗೆ ಆಗುವ ತೊಂದರೆ ಏನು ಎಂಬುವುದು ಸುಳ್ಯದಂತಹ ಮಲೆನಾಡು ಪ್ರದೇಶಕ್ಕೆ ಭೇಟಿ ನೀಡಿ ಅರಿತು ಜಿಲ್ಲಾ ಕೇಂದ್ರದಿಂದ ಆದೇಶ ಮಾಡಬೇಕು. ಸುಳ್ಯದಂತಹ ಪ್ರದೇಶದಲ್ಲಿ ಬಾಡಿಗೆ ವಾಹನಗಳೆಂದರೆ ಖಾಸಗಿ ವಾಹನಗಳೇ ಆಗಿದೆ. ಇದು ಸುಳ್ಯದ ಜನರಲ್ಲಿ ವಿಚಾರಿಸಿದರೆ ಮಾತ್ರ ಅರ್ಥ ಆಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳನ್ನು ಗುಲಾಮರನ್ನಾಗಿಸುವ ಕೆಲಸ ಆಗುತ್ತದೆ ಎಂದರೆ ತಪ್ಪಾಗಲಾರದು. ಮೂರು ದಿನ ಲಾಕ್ ಡೌನ್ ಮಾಡಿ ಒಂದು ದಿನ ಸುಳ್ಯ ಪೇಟೆಯಲ್ಲಿ ಸಂಚರಿಸಲಾಗದಷ್ಟು ರಶ್ ಆಯಿತು. ಪತ್ರಿಕಾಗೋಷ್ಠಿ ಯಲ್ಲಿ ಆದೇಶ ಮಾಡಿದವರಿಗೆ ಇದು ಗೊತ್ತೆ ? ಮತ್ತೆರಡು ದಿನ ಯಾವುದೇ ಗೊಂದಲ ಇಲ್ಲದೇ ನಿಗದಿತ ಅವಧಿಯಲ್ಲಿ ಜನ ಬಂದು ವ್ಯವಹರಿಸಿದ್ದಾರೆ. ಅದಕ್ಕೆ ಜನ ಹೊಂದಿಕೊಂಡರೂ ಕೂಡಾ ಏಕಾಏಕಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿರುವುದು ಯಾವ ನ್ಯಾಯ?

ಸುಳ್ಯದಲ್ಲಿ ಪಡಿತರ ವಿತರಣೆ ವ್ಯವಸ್ಥೆ ನಡೆಯುತ್ತಿದೆ. ಸುಮಾರು 12ರಿಂದ 14 ಲೋಡು ಅಕ್ಕಿ ಮಂಗಳೂರಿನಿಂದ ಬರುತ್ತದೆ. ಸುಳ್ಯ ಪೇಟೆಯಲ್ಲಿ ಮೂರು ವಿತರಣಾ ಕೇಂದ್ರಗಳಿವೆ. ಪ್ರತಿಯೊಂದರಲ್ಲೂ 750 ಕ್ಕಿಂತಲೂ ಹೆಚ್ಚಿನ ಪಡಿತರ ಚೀಟಿ ವ್ಯವಸ್ಥೆ ಇದೆ. ಇಷ್ಟು ಜನರು ವಾಹನ ಬಿಟ್ಟು ಬನ್ನಿ ಬಾಡಿಗೆ ವಾಹನದಲ್ಲಿ ಬನ್ನಿ ಎಂದರೆ ಹೇಗೆ?. ಒಟ್ಟಾರೆಯಾಗಿ ಕಾನೂನು ಗಳನ್ನು ಜಾರಿಗೆ ತರುವ IAS, IPS ಅಧಿಕಾರಿಗಳು ಜನರನ್ನು ಕಷ್ಟಗಳಿಗೆ ದೂಡುವ ಪ್ರಯೋಗಗಳನ್ನು ಮಾಡಿ ವಿಘ್ನ ಸಂತೋಷಿಗಳಾಗುತ್ತಿದ್ದಾರೆಯೇ?ಎಂಬ ಜಿಜ್ಞಾಸೆ ಮೂಡುವಂತಾಗಿದೆ.
ಕಾನೂನು ಬೇಕು. ಅದು ಜನ ಸಾಮಾನ್ಯರ ಮೇಲಿನ ಸವಾರಿಯಾಗಬಾರದು. ಖಾಸಗಿ ವಾಹನಗಳ ನಿರ್ಬಂಧ ಸಡಿಲಿಸಬೇಕು ಎಂದು ಪಿ.ಎಸ್. ಗಂಗಾಧರ್ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.