ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಧಾಳಿ : ಆರೋಪಿ ವಶ

Advt_Headding_Middle
Advt_Headding_Middle

 


ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಗೆ ಅಬಕಾರಿ ಇಲಾಖೆಯವರು ಧಾಳಿ ನಡೆಸಿ, ೧೧೫ ಲೀ ಗೇರು ಹುಳಿ, ಒಂದೂವರೆ ಲೀಟರ್ ಕಳ್ಳಭಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ಪಾತ್ರೆಗಳನ್ನು ಸೇರಿ ಓರ್ವ ಆರೋಪಿಯನ್ನು ವಶ ಪಡಿಸಿಕೊಂಡಿರುವ ಘಟನೆ ಮಾ.೩ರಂದು ಬೆಳ್ಳಾರೆಯಿಂದ ವರದಿಯಾಗಿದೆ.
ಬೆಳ್ಳಾರೆ ಕಲ್ಲೋಣಿಯ ಜನಾರ್ದನ ಎಂಬವರು ತಮ್ಮ ಮನೆಯ ಸಮೀಪ ಗೇರು ಹಣ್ಣಿನ ಸಾರಾಯಿ ತಯಾರಿಸುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಧಾಳಿ ನಡೆಸಿದ ಸುಳ್ಯದ ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ರಾಧಾ ಎಸ್.ಪಿ. ನೇತೃತ್ವದ ತಂಡ ಆರೋಪಿ ಜನಾರ್ಧನ ಹಾಗೂ ಅವರು ತಯಾರಿಸಿದ್ದ ಒಂದೂವರೆ ಲೀಟರ್ ಕಳ್ಳ ಭಟ್ಟಿ, ೧೧೫ ಲೀ ಗೇರು ಹಣ್ಣಿನ ಹುಳಿ ರಸ, ಮತ್ತು ಪಾತ್ರೆಗಳನ್ನು ವಶಕ್ಕೆ ಪಡೆದುಕೊಂಡರು.
ಅಬಕಾರಿ ಇಲಾಖೆಯ ಮಂಗಳೂರು ಉಪ ಆಯುಕ್ತರ ನಿರ್ದೇಶನದ ಮೇರೆಗೆ, ಪುತ್ತೂರು ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಸುಳ್ಯ ಅಬಕಾರಿ ಇಲಾಖೆಯ ನಿರೀಕ್ಷಕರಾದ ಮಹಾಲಿಂಗ ನಾಯ್ಕರ ಮಾರ್ಗ ಸೂಚಿಯಂತೆ, ಉಪನಿರೀಕ್ಷಕಿ ರಾಧಾ ಎಸ್.ಪಿ., ಸಿಬ್ಬಂದಿಗಳಾದ ಸಂದೀಪ್ ಅತ್ಯಾಡಿ, ಮಲ್ಲಣ್ಣ ಗೌಡ, ಶರತ್, ಅಶೋಕ್, ಶರಣಪ್ಪ, ರಘುನಾಥ ಭಜಂತ್ರಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.