ಕನಕಮಜಲು ಗ್ರಾ.ಪಂ. ಕಾರ್ಯಪಡೆಯ ಸಹಕಾರದಲ್ಲಿ ಪಡಿತರ ಸಾಮಾಗ್ರಿಗಳ ವಿತರಣೆ

Advt_Headding_Middle
Advt_Headding_Middle

ಕನಕಮಜಲು ಗ್ರಾ.ಪಂ.ನ ಕಾರ್ಯಪಡೆಯ ಸಹಕಾರದಿಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಡಿತರ ಸಾಮಾಗ್ರಿಗಳನ್ನು ಎ.3ರಂದು ವಿತರಿಸಲಾಯಿತು.


ಇದಕ್ಕೂ ಮೊದಲು ಮಾ. 31ರಂದು  ಕನಕಸೌಧ ಸಭಾಭವನದಲ್ಲಿ ಕಾರ್ಯಪಡೆಯ ಸದಸ್ಯರುಗಳು ಹಾಗೂ ಸಹಕಾರಿ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಗ್ರಾಮಸ್ಥರಿಗೆ ಪಡಿತರ ಆಹಾರ ಸಾಮಾಗ್ರಿಗಳ ವಿತರಿಸುವ ಕುರಿತು ಚರ್ಚಿಸಲಾಗಿತ್ತು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಲತ ಗಬ್ಬಲಡ್ಕ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ,  ಸೊಸೈಟಿ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಪಂಚಾಯತಿ ಸದಸ್ಯರುಗಳು, ಸೊಸೈಟಿ ನಿರ್ದೇಶಕರುಗಳು ಸೇರಿದಂತೆ ಕಾರ್ಯಪಡೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.