ತೊಡಿಕಾನ ಬಿ.ಎಸ್.ಎನ್.ಎಲ್. ಟವರ್ ಗೆ ಮತ್ತೆ ಜೀವ

Advt_Headding_Middle
Advt_Headding_Middle

 

ಯುವಕರಿಬ್ಬರ ಪರಿಶ್ರಮಕ್ಕೆ ಊರವರ ಮೆಚ್ಚುಗೆ


ತೊಡಿಕಾನದಲ್ಲಿ ಸುಮಾರು ಒಂದು ವರ್ಷಗಳಿಂದ ವಿದ್ಯುತ್ ಹೋದರೆ ನಿಶ್ಯಬ್ದವಾಗುತ್ತಿದ್ದ ಬಿ.ಎಸ್.ಎನ್.ಎಲ್. ಟವರ್ ಗೆ ಇದೀಗ ಮತ್ತೆ ಜೀವ ಬಂದಿದೆ. ವಿದ್ಯುತ್ ಹೋದರು ಕೂಡಾ 5 ಗಂಟೆಗಳ ಕಾಲ ಈ ಟವರ್ ಕಾರ್ಯಚರಣೆಯಲ್ಲಿರುತ್ತದೆ.

ವಿದ್ಯುತ್ ಹೋಯಿತೆಂದರೆ ತಾಲೂಕಿನ ಎಲ್ಲ ಬಿ.ಎಸ್.ಎನ್ ಎಲ್. ಟವರ್ ಕೂಡಾ ಮಲಗುತ್ತಿತ್ತು. ವಿದ್ಯುತ್ ಬಂದರೆ ಮತ್ತೆ ರೇಂಜ್ ಸಿಗುತ್ತಿತ್ತು.
ಆದರೆ ತಾಲೂಕಿನ ಎಲ್ಲ ಟವರ್ ನ ಪರಿಸ್ಥಿತಿ ಈಗ ತೊಡಿಕಾನಕ್ಕಿಲ್ಲ. ಈ ಪರಿಸರದ ಯುವಕರಾದ ರವೀಶ್ ಭಟ್ ಮತ್ತು ಮಿಲನ್ ರಾಮ್ ಇಬ್ಬರು ಸೇರಿಕೊಂಡು ಬಿಎಸ್‌ಎನ್‌ಎಲ್ ಉದ್ಯೋಗಿ ನವೀನ್ ರ ಸಹಕಾರ ಪಡೆದು ತೊಡಿಕಾನದ ಟವರ್ ನ ಬ್ಯಾಟರಿ ಬದಲಾಯಿಸಿ ಅದರಲ್ಲಿ ತಾಂತ್ರಿಕ ತೆಯನ್ನು ಅಳವಡಿಸಿ, ವಿದ್ಯುತ್ ಹೋದರೂ 5 ಗಂಟೆಗಳ ಕಾಲ ಹೆಚ್ಚುವರಿಯಾಗಿ ಟವರ್ ಜೀವ ಇರುವಂತೆ ಮಾಡಿದ್ದಾರೆ.
ಇವರಿಗೆ ಅರಂತೋಡು ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ರವಿ ಪಂಜಿಕೋಡಿ ಸಹಕಾರ ನೀಡಿದರು. ಈ ಕಾರ್ಯಕ್ಕೆ ಊರವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.