Breaking News

ಅಮರ ಮುಡ್ನೂರು ಗ್ರಾಮದ ಮೂರು ಕಡೆಗಳಲ್ಲಿ ಪಡಿತರ ವಿತರಣೆ ಆರಂಭ

Advt_Headding_Middle
Advt_Headding_Middle

 

ಟೋಕನ್ ವ್ಯವಸ್ಥೆ ಮೂಲಕ ಸುಗಮ ವಿತರಣೆಗೆ ಕ್ರಮ

ಕುಕ್ಕುಜಡ್ಕದ ಚೊಕ್ಕಾಡಿ ವ್ಯ.ಸೇ.ಸ.ಸಂಘದ ವತಿಯಿಂದ ಅಮರಮುಡ್ನೂರು ಗ್ರಾಮದ ವಿವಿಧ ಕಡೆಗಳಲ್ಲಿ ಬಿ.ಪಿ.ಎಲ್. ಕಾರ್ಡುದಾರರಿಗೆ ಪಡಿತರ ವಿತರಣಾ ಕಾರ್ಯಕ್ರಮ ಎ.3 ರಿಂದ ನಡೆಸಲಾಗುತ್ತಿದೆ.

ಸೊಸೈಟಿಯ ಸ್ಥಳೀಯ ನಿರ್ದೇಶಕರುಗಳು ಮತ್ತು ಸೊಸೈಟಿ ಸಿಬ್ವಂದಿ ವಿತರಣೆಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆಯಾ ಪ್ರದೇಶದ ಕಾರ್ಡುದಾರರನ್ನು ಅಲ್ಲಲ್ಲಿಗೆ ಅಂದರೆ , ದೊಡ್ಡತೋಟ, ಕುಂಟಿಕಾನ, ಪೈಲಾರು, ಕುಕ್ಕುಜಡ್ಕ, ಹಾಸನಡ್ಕ ಮೊದಲಾದೆಡೆಗೆ ಬರಲು ಹೇಳಿ ನಿಗದಿತ ಅಂತರದಲ್ಲಿ ಅವರನ್ನು ನಿಲ್ಲಿಸಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ರೇಶನ್ ಗೆ ಬಂದವರಿಗೆ ಟೋಕನ್ ಕೊಟ್ಟು ಅವರು ದೂರದೂರದಲ್ಲಿ ನೆರಳಲ್ಲಿ ಕೂರುವಂತೆ ಹೇಳಿ ನಂಬರ್ ಕರೆದಾಗ ಬಂದು ರೇಶನ್ ಪಡೆಯುವಂತೆ ವ್ಯವಸ್ಥೆ ರೂಪಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.