Breaking News

ಸುಳ್ಯದಲ್ಲಿ ರಸ್ತೆ ಬದಿ ವ್ಯಾಪಾರಕ್ಕೆ ನಾಳೆಯಿಂದಲೇ ಕಡಿವಾಣ

Advt_Headding_Middle
Advt_Headding_Middle

 

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಕ್ರಮ : ಎ.ಸಿ.

ಲೈಸೆನ್ಸ್ ಇಲ್ಲದೆ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ, ತಳ್ಳು ಗಾಡಿಗಳಲ್ಲಿ, ಫುಟ್ ಪಾತ್ ಗಳಲ್ಲಿ ತರಕಾರಿ, ಹಣ್ಣು, ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವುದನ್ನು ನಾಳೆಯಿಂದಲೇ ನಿಲ್ಲಿಸಲಾಗುವುದು. ಈ ಕುರಿತು ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ‌ ನೀಡಲಾಗಿದೆ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಹೇಳಿದ್ದಾರೆ.
ಇಂದು ಸಂಜೆ ತಾಲೂಕು ಕಚೇರಿಗೆ ಆಗಮಿಸಿದ ಎ.ಸಿ.ಯವರು ಮಾಧ್ಯಮ ಪ್ರತಿನಿಧಿ ಗಳ ಜತೆ ಈ ವಿಷಯ ಹೇಳಿದರು.
“ರಸ್ತೆ ಬದಿಯಲ್ಲಿ ಈ ರೀತಿ ತರಕಾರಿ, ಹಣ್ಣು ಮಾರಾಟ ಮಾಡುವುದರಿಂದ ಜನರು ಗುಂಪು ಸೇರುತ್ತಾರೆ. ಆದ್ದರಿಂದ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಆಗಬೇಕಾಗಿದೆ ಎಂದ ಅವರು, ” ಸುಳ್ಯದಲಿ ಉತ್ತಮ ರೀತಿಯಲ್ಲಿ ತರಕಾರಿ, ಹಣ್ಣು, ದಿನಸಿ ಒದಗಿಸುವ ಸಂಸ್ಥೆಗಳು‌ ಇವೆ. ಈಗ ರಸ್ತೆ ಬದಿಯಲ್ಲಿ ಇವರು ಬಂದು ವ್ಯಾಪಾರ ನಡೆಸುವುದು ಬೇಕಾಗಿಲ್ಲ” ಎಂದು ಹೇಳಿದರು.
ತಹಶೀಲ್ದಾರ್ ಅನಂತಶಂಕರ್, ನ.ಪಂ. ಮುಖ್ಯಾಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ಆರ್ ಐ ಕೊರಗಪ್ಪ ಹೆಗ್ಡೆ, ಶಂಕರ್ ಎಂ.ಎಲ್, ವಿ.ಎ.ತಿಪ್ಪೇಶಪ್ಪ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.