ಗುರುಂಪು ವಲಸೆ ಕಾರ್ಮಿಕರ ನಿವಾಸಗಳಿಗೆ ಸಹಾಯಕ ಕಮಿಷನರ್ ದಿಢೀರ್ ಭೇಟಿ

Advt_Headding_Middle
Advt_Headding_Middle

 


ಸುಳ್ಯದ ಗಾಂಧಿನಗರದ ಗುರುಂಪು ಎಂಬಲ್ಲಿ ರಿಯಾಜ್ ಕಟ್ಟೆಕಾರ್ ಅವರಿಗೆ ಸೇರಿದ ಬಾಡಿಗೆ ಕೋಣೆಗಳಲ್ಲಿ ವಲಸೆ ಕಾರ್ಮಿಕರಿರುವ ನಿವಾಸಗಳಿಗೆ ಖಚಿತ ಮಾಹಿತಿ ಮೇರೆಗೆ ಸಹಾಯಕ ಕಮಿಷನರ್ ಡಾ. ಯತೀಶ್ ಉಲ್ಲಾಳ್ ರವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಸುಮಾರು ಐವತ್ತಕ್ಕಿಂತಲೂ ಹೆಚ್ಚು ಮಂದಿ ಕಾರ್ಮಿಕರು ಉತ್ತರ ಪ್ರದೇಶ ಮತ್ತು ಗದಗ ಜಿಲ್ಲೆಯವರಾಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು .ಇದೀಗ ದೇಶದ ಲಾಕ್ ಡೌನ್ ಹಿನ್ನೆಲೆ ಕಾರಣದಿಂದಾಗಿ ಕೆಲಸವಿಲ್ಲದೆ ಹಾಗೂ ಊರಿಗೆ ತೆರಳಲಾಗದೆ ಇಲ್ಲಿರುವ ಕೋಣೆಗಳಲ್ಲಿ ಇವರು ತಂಗುತ್ತಿದ್ದಾರೆ .ಸಣ್ಣ ಸಣ್ಣ ಕೊಠಡಿಗಳಲ್ಲಿ ವಾಸವಿರುವ ಇವರು ಕೊಠಡಿಗಳಲ್ಲಿ ಸುಮಾರು ಎಂಟರಿಂದ ಹತ್ತು ಮಂದಿ ವಾಸವಿದ್ದು ಊಟಕ್ಕೂ ಸಮಸ್ಯೆ ಎದುರಾಗಿದ್ದು ಬಹಳಷ್ಟು ಆತಂಕದ ಸ್ಥಿತಿಯಲ್ಲಿರುವ ಬಗ್ಗೆ ವಿಷಯ ತಿಳಿದ ಎ.ಸಿ.ಯವರು ಭೇಟಿ ನೀಡಿ ವಿಚಾರಣೆ ನಡೆಸಿದರು.

ಈ ಸಂದರ್ಭದಲ್ಲಿ ಬಾಡಿಗೆ ಮನೆಯಲ್ಲಿರುವ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ವಾಸವಿರುವ ಪರಿಸರವನ್ನು ಸ್ವಚ್ಚಗೊಳಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಂತ್ ಶಂಕರ, ನ.ಪಂ.ಮುಖ್ಯಾಧಿಕಾರಿ ಮತ್ತಡಿ, ಇ.ಒ.ಭವಾನಿಶಂಕರ ಮತ್ತಿತರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.