Breaking News

ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಕೊರೊನಾ ಕಾರ್ಯಪಡೆ ಸಮಿತಿ ಸಭೆ

Advt_Headding_Middle
Advt_Headding_Middle

 

ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ – 19 ಕಾರ್ಯಪಡೆಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಎ.3 ರಂದು ನಡೆಯಿತು.
ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿಯವರು ನೋಡೆಲ್ ಅಧಿಕಾರಿ ಯಾಗಿದ್ದು ಮಾಹಿತಿ ನೀಡಿದರು.


ಸುಳ್ಯ ತಾಕೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರು ಸಂವಾದದಲ್ಲಿ ಪಾಲ್ಗೊಂಡರು.
ಅಂಗಡಿಗಳಿಗೆ ಸರಕು ಸಾಗಾಟದ ವ್ಯವಸ್ಥೆ,ಸಾಮಾನುಗಳ ಖರೀದಿ ಸಂದರ್ಭದಲ್ಲಿ ಗ್ರಾಹಕರು ಸಾಮಾಜಿಕ ಅಂತರ, ವಸ್ತುಗಳನ್ನು ಆಯ್ದು ಕೊಳ್ಳುವ ಸಂದರ್ಭದ ಜಾಗೃತೆ,ಸ್ವಚ್ಛತೆ ,ಸಾಮಾಜಿಕ ಅಂತರ ,ದರನಿಗದಿಗೊಳಿಸುವ ಬಗ್ಗೆ ಮಾಹಿತಿ ಇತ್ಯಾದಿ ಅಂಶಗಳ ಬಗ್ಗೆ ಚರ್ಚೆ ನಡೆಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವರ್ತಕರ ಸಭೆಯ ಕುರಿತು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.