Breaking News

ಅನಿವಾರ್ಯ ಸಂದರ್ಭದಲ್ಲಿ ತುರ್ತು ಸೇವೆ ಒದಗಿಸುವುದೇ ದೊಡ್ಡ ಸಹಾಯ : ಅಶೋಕ್ ನೆಕ್ರಾಜೆ 

Advt_Headding_Middle
Advt_Headding_Middle

ಸರಕಾರದ ಆದೇಶದಂತೆ ದೇಶ ಲಾಕ್ ಡೌನ್ ಆಗಿರುವುದರಿಂದ ಮಧ್ಯಮ ವರ್ಗ ಮತ್ತು ಕೆಳ ವರ್ಗದ ಅನೇಕ ಮಂದಿ ಸಂಕಷ್ಟದಲ್ಲಿದ್ದಾರೆ. ನನ್ನ ತಾ.ಪಂ. ವ್ಯಾಪ್ತಿಯಲ್ಲಿ ಕಷ್ಟದಲ್ಲಿದ್ದವರಿಗೆ ತುರ್ತು ಸೇವಾ ಪಡೆಯ ಮೂಲಕ‌ ಸಹಾಯ ಮಾಡಲಾಗಿದೆ. ಯೇನೆಕಲ್ಲು ಗ್ರಾಮದ ಮಹಿಳೆಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಮನೆಗೆ ಕರೆಸುವ ಕೆಲಸ ಮಾಡಲಾಗಿದೆ. ಯೇನೆಕಲ್ಲಿನ ಲಾರಿ ಚಾಲಕರೊಬ್ಬರ ಲಾರಿ ಗುಂಡ್ಯದಲ್ಲಿ ಬಾಕಿ ಆಗಿತ್ತು. ಅದನ್ನು ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಿಂದ ತರಿಸಲಾಗಿದೆ. ಕಡಬ ಕಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಕ್ಕಳನ್ನು ಅವರ ಮನೆಗೆ ಕರೆತರಲಾಗಿದೆ. ಬಳ್ಪ ಭೋಗಾಯನಕೆರೆ ಭಾಗದಲ್ಲಿ ಹಲವರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಿದ್ದೇನೆ. ಕೆಲವರಿಗೆ ಅಕ್ಕಿ ನೀಡಿದ್ದೇನೆ. ತುರ್ತು ಸೇವೆ ಮಾಡಲು ನಾನು ಯಾವಾಗಲೂ ಸಿದ್ದನಿದ್ದೇನೆ.

ಅಶೋಕ್ ನೆಕ್ರಾಜೆ ತಾ.ಪಂ. ಸದಸ್ಯರು, ಸುಬ್ರಹ್ಮಣ್ಯ ಕ್ಷೇತ್ರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.