Breaking News

ಬೆಳ್ಳಾರೆ : ಜೇಸೀ ವತಿಯಿಂದ ಬಡಕುಟುಂಬಗಳಿಗೆ ದಿನನಿತ್ಯದ ಆಹಾರ ಸಾಮಾಗ್ರಿ ವಿತರಣೆ

Advt_Headding_Middle
Advt_Headding_Middle

 


ಮನುಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂಬ ಜೇಸಿ ವಾಕ್ಯದ ನುಡಿಯಂತೆ.
ನಮಗೆಲ್ಲ ತಿಳಿದಿರುವ Covid-19 ಎಂಬಂತಹ ಮಾರಕ ರೋಗದಿಂದ ನಮ್ಮ ದೇಶದಲ್ಲಿ ಇಂದು ಲಾಕ್ – ಡೌನ್ ಮಾಡಲಾಗಿದೆ.


ಈ ಒಂದು ಸಂದರ್ಭದಲ್ಲಿ ಅದೆಷ್ಟು ಬಡ ಕುಟುಂಬಗಳು ತೊಂದರೆಗೆ ಸಿಲುಕಿ ದಿನನಿತ್ಯದ ಆಹಾರ ಸಾಮಗ್ರಿಗಳು ಇಲ್ಲದೆ ಪರದಾಡುವಂತಹ ಸ್ಥಿತಿಯಲ್ಲಿದ್ದು ಈ ಒಂದು ಸಂದರ್ಭದಲ್ಲಿ ಎಲ್ಲಾ ಹಿರಿಯ – ಕಿರಿಯ ಜೇಸಿಗಳ ಮತ್ತು ವಿಶೇಷವಾಗಿ ಜೂನಿಯರ್ ಜೇಸಿ ಸಹಕಾರದೊಂದಿಗೆ ಸುಮಾರು 70 ಬಡ ಕುಟುಂಬದ ಮನೆಯವರಿಗೆ 22 ಅಗತ್ಯ ವಸ್ತುಗಳ ದಿನನಿತ್ಯದ ಬಳಕೆ ವಸ್ತುಗಳನ್ನು ಕಿಟ್ ಮುಖಾಂತರವಾಗಿ ವಿತರಿಸಲಾಯಿತು.


ಸಹಕಾರವನ್ನು ನೀಡಿದ ಜೇಸಿಯ ಅಧ್ಯಕ್ಷರಿಗೆ,ಎಲ್ಲಾ ಹಿರಿಯ – ಕಿರಿಯ ಜೇಸಿಗಳಿಗೆ , ಜೂನಿಯರ್ ಜೇಸಿ ಮಿತ್ರರಿಗೆ ಮತ್ತು ಮಾರ್ಗದರ್ಶನವನ್ನು ನೀಡಿದಂತಹ ಪುತ್ತೂರು ಉಪ ವಿಭಾಗದ ಅಧಿಕಾರಿಯವರಿಗೆ(A.C), ಬೆಳ್ಳಾರೆ ಹೊರ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ, ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ನಾಗರಾಜ್,ಗ್ರಾಪಂ ಅಭಿವೃದ್ಧಿ ಅಧಿಕಾರಿ ಧನಂಜಯ.ಕೆ,ಸುರೇಶ್ ಕುಮಾರ್ ಶೆಟ್ಟಿ ಪನ್ನೆ ಗುತ್ತು, ಸುನೀಲ್ ರೈ ಪುಡ್ಕಜೆ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.