ಸುಳ್ಯದಲ್ಲಿ ಸಹಾಯಕ ಕಮೀಷನರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

Advt_Headding_Middle
Advt_Headding_Middle

 

ಮಾಧ್ಯಮಗಳನ್ನು ದೂರವಿಟ್ಟು ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚೆ

ಕೊರೊನಾ ಭೀತಿ ಹಿನ್ನಲೆಯಲ್ಲಿ ಭಾರತ್ ಲಾಕ್ ಡೌನ್ ಆಗಿದ್ದು, ಪ್ರಸ್ತುತ ಸನ್ನಿವೇಶಗಳ ಕುರಿತಂತೆ ಇಂದು ನಡೆಯುತ್ತಿರುವ ಸಭೆಯಲ್ಲಿ ಮಾಧ್ಯಮದವರನ್ನು ದೂರ ಇಡಲಾಗಿದೆ.

ತಾಲೂಕಿನಲ್ಲಿ ಅಧಿಕಾರಿಗಳ ಸಭೆ ಆಗಿಂದಾಗೆ ನಡೆಯುತ್ತಿದ್ದು, ಈ ಎಲ್ಲಾ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಪತ್ರಕರ್ತರು ಸಭೆಯ ಸುದ್ದಿ, ಪ್ರಮುಖ ಮಾಹಿತಿ ಯನ್ನು ಸಾರ್ವಜನಿಕ ರಿಗೆ ತಲುಪಿಸುವಲ್ಲಿ‌ ಪ್ರಮುಖ ಪಾತ್ರ ವಹಿಸುತ್ತಿವೆ. ಕೊರೊನಾ ಕುರಿತು ಜಾಗೃತಿ ಕಾರ್ಯವನ್ನು ಕೂಡಾ ಮಾಡುತ್ತಿವೆ.

ಆದರೆ ಇಂದು ತಾಲೂಕು ಕಚೇರಿಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ರವರ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ತಾಲೂಕಿನ ವಿದ್ಯಮಾನಗಳನ್ನು ಚರ್ಚಿಸಲು ಆಯೋಜಿಸಲಾದ ಸಭೆಗೆ ಪತ್ರಕರ್ತರಿಗೆ ಆಡಳಿತ ಪ್ರವೇಶ ನಿರಾಕರಿಸಿತು.

ಸಭೆ ಆರಂಭವಾಗುತ್ತಿದ್ದಂತೆ ಪತ್ರಕರ್ತರನ್ನು ಗಮನಿಸಿದ ಸಹಾಯಕ ಕಮಿಷನರ್ ರವರು ಈ ಸಭೆಗೆ ಪತ್ರಕರ್ತರು ಬೇಡ, ಸಭೆ ಮುಗಿದ ಬಳಿಕ ಸಭೆಯ ಮಾಹಿತಿಯನ್ನು ನೀಡೋಣ ಎಂದು ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷರ ಜತೆ ಹೇಳಿ ಕಳುಹಿಸಿದರು. ಬಳಿಕ ಸಭೆಯಲ್ಲಿ ದ್ದವರು ಮತ್ತು ಅಲ್ಲಿಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರು ವಾಪಸಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.