HomePage_Banner
HomePage_Banner
HomePage_Banner
HomePage_Banner

ಕರ್ನಾಟಕ – ಕೇರಳ ಗಡಿ ತುರ್ತು ಸೇವೆಗಳಿಗೆ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ

ಕಾಸರಗೋಡಿನ ಕೊರೊನೇತರ ರೋಗಿಗಳನ್ನು ಹೊತ್ತ ಅಂಬ್ಯುಲೆನ್ಸ್ ಗಳನ್ನು ತಲಪಾಡಿ ಮೂಲಕ ಮಂಗಳೂರಿಗೆ ಸಂಚಾರಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ.

 

ಕಾಸರಗೋಡು ಸಹಿತ ಕೇರಳದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ವರದಿಯಾದ ಬಳಿಕ , ಕೇರಳ ಪ್ರವೇಶಿಸುವ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡಿ ಕರ್ನಾಟಕ ಸರಕಾರ ಅದೇಶ ಹೊರಡಿಸಿತ್ತು. ಬಹುತೇಕ ಕಡೆ ಮಣ್ಣು ಹಾಕಿ ಬಂದ್ ಮಾಡಲಾಗಿತ್ತು.

 

ಕಾಸರಗೋಡು ಭಾಗದ ಅನೇಕರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಬರುತ್ತಿರುವುದರಿಂದ ಈ ಆದೇಶದಿಂದಾಗಿ ಕಾಸರಗೋಡಿನಲ್ಲಿರುವ ರೋಗಿಗಳ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಅರೋಪ ವ್ಯಕ್ತವಾಗಿತ್ತು . ಮಾತ್ರವಲ್ಲ
ಸಂಚಾರ ಬಂದ್ ಮಾಡಿದ ಕಾರಣ ಆ ಭಾಗದ ಹತ್ತರಷ್ಟು ಮಂದಿ ಕೊರೊನೇತರ ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಗರ್ಭಿಣಿ‌ ಮಹಿಳೆಯರು ಸಂಕಷ್ಟ ಅನುಭವಿಸಿದ್ದರು.

ಹೀಗಾಗಿ ಸಂಚಾರ ನಿರ್ಭಂದವನ್ನು ತೆರವುಗೊಳಿಸಬೇಕೆಂದು ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ದ.ಕ ಜಿಲ್ಲಾಡಳಿತದಿಂದ ಸಂಚಾರ ನಿರ್ಭಂದ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. . ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸುಪ್ರೀಂ ಕೋರ್ಟ್ ಗೆ ಪಿಟಿಷನ್ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ಕರ್ನಾಟಕ ಮತ್ತು ಕೇರಳ ಸರಕಾರಗಳ ಗೃಹ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯದರ್ಶಿಯವರಲ್ಲಿ ಜಂಟಿ ಮಾತುಕತೆ ನಡೆಸಿ, ಅಂಬ್ಯುಲೆನ್ಸ್ ಹಾಗೂ ಅಗತ್ಯ ವಸ್ತುಗಳ ಸಾಗಣಿಕೆಗೆ ಮಂಗಳೂರು-ಕೇರಳ ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಗಡಿಯನ್ನು ತೆರವುಗೊಳಿಸಬೇಕೆಂದು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.