HomePage_Banner
HomePage_Banner
HomePage_Banner
HomePage_Banner

ಕಂದಡ್ಕ ಸಿ ಆರ್ ಸಿ ಕಾಲೋನಿ ಯ ಹಲವು ಕುಟುಂಬಗಳಿಗೆ ಪಡಿತರವಿಲ್ಲದೆ ಸಂಕಷ್ಟ : ಫಲಾನುಭವಿಗಳ ತೀವ್ರ ಆಕ್ರೋಶ

ಸರಕಾರ ಇತ್ತೀಚಿಗೆ ತಂದ ನಿಯಮದಂತೆ ಕುಟುಂಬದ ಪ್ರತಿಯೋರ್ವರು ಪಡಿತರ ವ್ಯವಸ್ಥೆಗೆ ತಂಬ್ ನೀಡಬೇಕೆಂದು ಆದೇಶದ ತಾಂತ್ರಿಕ ಕಾರಣವು ಕೊರೋನಾ ಸಂಕಷ್ಟದ ಈ ಹೊತ್ತಿನಲ್ಲಿ‌
ಕಂದಡ್ಕ ಸಿ ಆರ್‌.ಸಿ .ಕಾಲನಿಯ ಸುಮಾರು 20 ಕುಟುಂಬಗಳಿಗೆ ಪಡಿತರ ಸಿಗದಿರುವುದಕ್ಕೆ ಕಾರಣವಾಗಿದೆ.

ಸುಳ್ಯ ಸಿ.ಎ‌.ಬ್ಯಾಂಕ್ ವತಿಯಿಂದ ಪಡಿತರ ಅಕ್ಕಿ ವಿತರಿಸುವ ಕಾರ್ಯ ಆಯಾಯ ಪ್ರದೇಶದಲ್ಲಿ ನಡೆಯುತ್ತಿದ್ದು,ಎ.5 ರಂದು ಕಂದಡ್ಕ ಕಾಲನಿಯಲ್ಲಿ ಕೂಡ ಪಡಿತರ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಬಿ.ಪಿ.ಎಲ್.ಕಾರ್ಡ್ ಹೊಂದಿರುವವರು ಅಕ್ಕಿಗಾಗಿ ಬಂದಾಗ ನೀವು ತಂಬ್ ಕೊಡದ ಕಾರಣ ನಿಮ್ಮ ಕಾರ್ಡ್ ಕ್ಯಾನ್ಸಲ್ ಆಗಿದೆ, ಪಡಿತರ ಕೊಡಲು ಸಾಧ್ಯವಿಲ್ಲವೆಂದು ಸಿಬ್ಬಂದಿಗಳು ಹೇಳಿದರೆಂದೂ, ಈ ಸಮಯದಲ್ಲಿ ರೇಷನ್ ಕಾರ್ಡ್ ಇಲ್ಲದವರಿಗೂ ಕೆಲವು ಸಹಕಾರಿ ಸಂಘದವರು ಪಡಿತರ ಕೊಡುತ್ತಿದ್ದಾರೆ. ನಾವು ಕೂಡ ತಂಬ್ ಕೊಡಲು ಹೋಗಿದ್ದೇವೆ.ತಾಂತ್ರಿಕ ಸಮಸ್ಯೆ ಯಿಂದಾಗಿ ತಂಬ್ ಸರಿಯಾಗಲಿಲ್ಲ,ನಮಗೂ ಅಕ್ಕಿ ನೀಡಬೇಕು ಎಂದು ಫಲಾನುಭವಿಗಳು ಒತ್ತಾಯಿಸಿದರೆಂದೂ ತಿಳಿದುಬಂದಿದೆ.

ತಂಬ್ ಸರಿಯಾದ ಮೇಲೆ ಪಡಿತರ ನೀಡುವುದಾಗಿ ಸೊಸೈಟಿಯವರು ಹೇಳಿದರೆಂದು ತಿಳಿದುಬಂದಿದೆ.

” ನಮಗೆ ಬೇರೆ ಯಾವುದೇ ಮೂಲಗಳಿಂದ ಅಕ್ಕಿಯಾಗಲಿ,ಧವಸ ಧಾನ್ಯ ವಾಗಲಿ ಸಿಗಲಿಲ್ಲ, ರೇಷನ್ ಕೂಡ ಕೊಡದಿದ್ದರೆ ನಾವು ಹೇಗೆ ಜೀವನ ಸಾಗಿಸುವುದು,ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಈ ಸಂದರ್ಭದಲ್ಲಿ ಸೊಸೈಟಿಯವರು ಪಡಿತರ ನೀಡಬೇಕಿತ್ತು ಎಂದು ಪಡಿತರ ಸಿಗದವರು ಸುದ್ದಿಯೊಂದಿಗೆ ಅಹವಾಲು ತೋಡಿಕೊಂಡರು.

ನಾನು ರೇಷನ್ ಕಾರ್ಡ್ ಗೆ ತಂಬ್ ನೀಡಲು ಎರಡು ಸಲ ಹೋಗಿದ್ದೆ ತಂಬು ಸರಿಬರಲಿಲ್ಲ,ಮಕ್ಕಳು ದೂರ ಇದ್ದುದರಿಂದ ಬರಲಾಗಲಿಲ್ಲ.ಇದನ್ನು ಕಾರಣವಾಗಿಟ್ಟುಕೊಂಡು ರೇಷನ್ ಕೊಡದಿದ್ದರೆ ಹೇಗೆ‌. ಊಟ ಮಾಡಲು ಕಷ್ಟ ವಾಗುತ್ತದೆ. ತಂಬು,ಆಧಾರ್ ಸರಿ ಮಾಡಿಕೊಂಡು ಬನ್ನಿ ಎಂದು ಹೇಳುತ್ತಾರೆ, ಈಗ ಯಾರು ಇದ್ದಾರೆ ಅಲ್ಲಿ, ನಮಗೆ ರೇಷನ್ ಕೊಡಲೇಬೇಕು. ಸುಮಾರು 20 ಕುಟುಂಬ ರೇಷನ್ ವಂಚಿತರಾಗಿದ್ದೇವೆ.ಜನಪ್ರತಿನಿಧಿಗಳು ಸರಿ ಮಾಡಿಕೊಡಬೇಕು.
– ರಾಜಲಕ್ಷ್ಮಿ
ಸಿ.ಆರ್.ಸಿ ಕಾಲನಿ ಕಂದಡ್ಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.