Breaking News

‘ಶಬೇ ಬರಾಅತ್’ ಅನ್ನು ಮನೆಯಲ್ಲೇ ಆಚರಿಸಿರಿ: ಮುಸ್ಲಿಂ ದಾರ್ಮಿಕ ಮುಖಂಡರಿಂದ ಮನವಿ

Advt_Headding_Middle
Advt_Headding_Middle

 

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ (ಎ.8) ನಡೆಯುವ ‘ಶಬೇ ಬರಾಅತ್’ ಅನ್ನು ಮನೆಯಲ್ಲೇ ಆಚರಿಸಿರಿ. ಯಾವ ಕಾರಣಕ್ಕೂ ಸಾಮೂಹಿಕವಾಗಿ ಮಸೀದಿಗಳಲ್ಲಿ ಆಚರಿಸಬಾರದು ಎಂದು ಮುಸ್ಲಿಂ ದಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ.

ಜಗತ್ತಿನಾದ್ಯಂತ ಕೊರೋನ ಸೋಂಕು ಹರಡಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲಾಡಳಿತವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಆ ಪೈಕಿ ಧಾರ್ಮಿಕ ಕಾರ್ಯಕ್ರಮಗಳಿಗೂ ನಿರ್ಬಂಧ ವಿಧಿಸಲಾಗಿದೆ. ಅದಕ್ಕೆ ಎಲ್ಲಾ ಧರ್ಮದ ವಿದ್ವಾಂಸರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರೂ ಸಹಕರಿಸಿದ್ದಾರೆ. ಈಗಾಗಲೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಮಾಡದಿರುವ ಮೂಲಕ ಸಂಪೂರ್ಣ ಸಹಕರಿಸಿರುವ ಮುಸ್ಲಿಮರು ಖಾಝಿಗಳ ಕರೆಯಂತೆ ಎ.8ರ ‘ಶಬೇ ಬರಾಅತ್’ನ್ನು ಕೂಡ ಮನೆಯಲ್ಲೇ ಆಚರಿಸುವ ಮೂಲಕ ಕೊರೋನ ವೈರಸ್ ತಡೆಗಟ್ಟಲು ಮತ್ತು ಲಾಕ್‌ಡೌನ್ ಯಶಸ್ಸಿಗೆ ಸಹಕರಿಸಬೇಕು ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.