Breaking News

ಅಲೋಟ್ ಮೆಂಟ್ ಲಿಸ್ಟಲ್ಲಿರುವವರಿಗೆ ಪಡಿತರ ನೀಡಲಾಗುತ್ತಿದೆ

Advt_Headding_Middle
Advt_Headding_Middle

 

ಕಂದಡ್ಕ ನಿವಾಸಿಗಳ ಅಹವಾಲಿಗೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಪ್ರತಿಕ್ರಿಯೆ

ಕಂದಡ್ಕದಲ್ಲಿ ನಿನ್ನೆ ಕೆಲ ನಿವಾಸಿಗಳ ಪಡಿತರ ದೊರೆತಿಲ್ಲವೆಂಬ ಅಹವಾಲಿಗೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆಯವರು ಪ್ರತಿಕ್ರಿಯಿಸಿದ್ದು ಅಲೋಟ್ ಮೆಂಟ್ ಲಿಸ್ಟಲ್ಲಿರುವ ಎ.ಪಿ.ಎಲ್. ಕಾರ್ಡುದಾರರಿಗೆ ಪಡಿತರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಲೋಟ್ ಮೆಂಟ್ ಲಿಸ್ಟ್ ನಲ್ಲಿ ಹೆಸರಿರುವವರಿಗೆ ಪಡಿತರ ನೀಡಲಾಗುತ್ತದೆ. ಎ.ಪಿ.ಎಲ್ ಕಾರ್ಡುದಾರರು ಪಡಿತರ ರಿಕ್ವೆಸ್ಟ್ ನೀಡಿರದ ಕಾರಣ ಕೆಲವರಿಗೆ ತಾಲೂಕು ಕಚೇರಿಯಿಂದ ನೀಡಿದ ಪಟ್ಟಿಯಲ್ಲಿ ಪಡಿತರ ಪ್ರಮಾಣ ಝೀರೋ ಎಂದಿದೆ. ಈ ಬಗ್ಗೆ ತಾಲೂಕು ಕಚೇರಿಯಲ್ಲಿ ಕೇಳಿದಾಗ ಈಗ ರಿಕ್ವೆಸ್ಟ್ ಕೊಡಲು ಆಗುವುದಿಲ್ಲವೆಂದು ತಿಳಿಸಿದ್ದಾರೆ. ಹಾಗಾಗಿ ಪ್ರಕೃತ ಲಾಕ್ ಡೌನ್ ಸಂದರ್ಭದಲ್ಲಿ ಮಧ್ಯಮ ವರ್ಗದ ಎ.ಪಿ.ಎಲ್ ಪಡಿತರ ಚೀಟಿದಾರರಿಗೂ ಅನುಕೂಲವಾಗುವಂತೆ ಸಹಕಾರ ಸಂಘದಲ್ಲಿ ಅಥವಾ ಸಂಬಂದ ಪಟ್ಟ ಗ್ರಾಮ ಕರಣಿಕರ ಲಾಗ್ ಇನ್ ನಲ್ಲಿ ಅಥವಾ ಮೊಬೈಲ್ ಮೂಲಕ ನೇರವಾಗಿ ಎ.ಪಿ.ಎಲ್ ಪಡಿತರ ಚೀಟಿದಾರರು ಪಡಿತರ ರಿಕ್ವೆಸ್ಟ್ ದಾಖಲಿಸಲು ಅವಕಾಶ ಮಾಡಿಕೊಡುವಂತೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ತುರ್ತು ಮನವಿ ಮಾಡಲಾಗಿದೆ. ಮುಂದಿನ ಎರಡು ಮೂರು ದಿನಗಳೊಳಗೆ ಈ ಬಗ್ಗೆ ಇಲಾಖಾಧಿಕಾರಿಗಳಿಗೆ ಸೂಚನೆ ಬರಬಹುದೆಂಬ ನಿರೀಕ್ಷೆ ಇದೆ. ಅಲೋಟ್ ಮೆಂಟ್ ಅನ್ನು ಸರಕಾರ ಆನ್ ಲೈನ್ ನಲ್ಲಿ ಹಾಕುವುದರಿಂದ ಸಂಘವು ತಾಲೂಕು ಕಚೇರಿಯ ಸೂಚನೆಯ ಪ್ರಕಾರ ಕಾರ್ಯ ನಿರ್ವಹಿಸಬೇಕಿದೆ. ಹಾಗಾಗಿ ಎ.ಪಿ.ಎಲ್ ಮತ್ತು ಪಡಿತರ ಕಾರ್ಡು ಇಲ್ಲದ ಕುಟುಂಬಗಳ ಸಮಸ್ಯೆಯ ಬಗ್ಗೆ ಮಾನ್ಯ ಸಚಿವರಿಗೆ ಈಗಾಗಲೇ ಮನವರಿಕೆ ಮಾಡಿಸಲಾಗಿದೆ. ಉಳಿದಂತೆ ಈ ತುರ್ತು ಸಂದರ್ಭದಲ್ಲಿ ಸಂಘವು ಸ್ತಾನೀಯ ಅವಶ್ಯಕತೆಗಳನ್ನು ಗಮನಿಸಿ ನಗರ ಪಂಚಾಯತ್ ಸದಸ್ಯರು , ಗ್ರಾಮ ಕರಣಿಕರ ಸಹಕಾರದೊಂದಿಗೆ ದುಗಲಡ್ಕ ಮತ್ತು ಅಜ್ಜಾವರ ಭಾಗದಲ್ಲಿ ಈಗಾಗಲೇ ಪಡಿತರವನ್ನು ಊರಿನ ಮುಖ್ಯ ಭಾಗಕ್ಕೆ ತಲುಪಿಸಿ ಸ್ತಾನೀಯವಾಗಿ ವಿತರಿಸಲು ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಕೊರೋನ ಸಮಸ್ಯೆ ಉದ್ಭವಿಸಿದಲ್ಲಿ ಮೂರೂ ಕೇಂದ್ರದಲ್ಲಿ ಪಡಿತರವನ್ನು ವಾರ್ಡು ಮತ್ತು ಬೂತ್ ಮಟ್ಟದಲ್ಲಿ ವಿತರಣೆ ಮಾಡುವ ಬಗ್ಗೆ ಯೋಜನೆ ಮಾಡಲಾಗುತ್ತಿದೆ ಎಂದು ಸಿ.ಎ.ಬ್ಯಾಂಕ್ ಅಧ್ಯಕ್ಷರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.