HomePage_Banner
HomePage_Banner
HomePage_Banner
HomePage_Banner

ನಾಳೆಯಿಂದ ಪ್ರತಿ ಗುರುವಾರ ಸುಳ್ಯದ ಕ್ಯಾಂಪ್ಕೋ ಶಾಖೆಯಲ್ಲಿ ಕೊಕ್ಕೋ ಖರೀದಿ

 

ಸೂಚನೆಗಳನ್ನು ಪಾಲಿಸಿ ಕೊಕ್ಕೊ ತರಲು ಅವಕಾಶ

ನಾಳೆಯಿಂದ ಪ್ರತಿ ಗುರುವಾರ ಸುಳ್ಯದ ಕ್ಯಾಂಪ್ಕೋ ಶಾಖೆಯಲ್ಲಿ ಕೊಕ್ಕೋ ಖರೀದಿಗೆ ಅವಕಾಶ ಮಾಡಿಕೊಡುವುದಾಗಿ ಪ್ರಕಟಣೆ ತಿಳಿಸಿದೆ.

ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಧಿಸಿರುವ ಲಾಕ್ ಡೌನ್ ನಿಯಮದಿಂದಾಗಿ ಉತ್ಪನ್ನಗಳಾದ ಅಡಿಕೆ, ರಬ್ಬರ್ ಹಾಗೂ ಇತರೆ ಬೆಳೆಗಳನ್ನು ಖರೀದಿಸಲು ಕಷ್ಟ ಸಾಧ್ಯವಾಗಿದೆ.
ಆದಾಗ್ಯೂ ಒಂದೆರಡು ದಿನಗಳಲ್ಲಿ ಕೊಳೆಯುವ ಹಸಿ ಕೊಕ್ಕೊ ಬೀಜಗಳನ್ನು ಸಂಸ್ಕರಿಸಲು ಸದಸ್ಯರಿಗೆ ಕಷ್ಟವಾಗುವುದನ್ನು ಮನಗಂಡು
ನಮ್ಮ ಆಡಳಿತ ಮಂಡಳಿಯು ಕೊಕ್ಕೊ ಖರೀದಿಗೆ ಸರಕಾರದಿಂದ ಅನುಮತಿ ಪಡೆದಿದ್ದು ನಿರ್ಬಂಧ ಕೊನೆಗೊಳ್ಳುವ ವರೆಗೆ ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಗುರುವಾರ ಕೊಕ್ಕೊ ಖರೀದಿಸಲು ನಿರ್ಧರಿಸಿದ್ದು, ಈ ಪ್ರಕಾರ ಸುಳ್ಯ ಶಾಖೆಯಲ್ಲಿ 09.04.2020ರ ಗುರುವಾರ ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 12.00 ಗಂಟೆಯ ವರೆಗೆ ಕೊಕ್ಕೊಖರೀದಿ ಇರುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಅಡಿಕೆ ಹಾಗೂ ರಬ್ಬರ್ ಖರೀದಿಸಲು ಅಸಾಧ್ಯವಾಗಿರುದರಿಂದ ಈಗ ಗುರುವಾರದಂದು ಕೊಕ್ಕೊ ಮಾತ್ರ ತರಬೇಕು. ಅಡಿಕೆ ಹಾಗೂ ರಬ್ಬರ್ ಖರೀದಿಸುವಂತೆ ದಿನಂಪ್ರತಿ ಹಲವಾರು ಸದಸ್ಯರು ಕರೆ ಮಾಡುತ್ತಿದ್ದು, ನಮ್ಮ ಆಡಳಿತ ಮಂಡಳಿಯು ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸರಕಾರಿ ಆದೇಶಕ್ಕೆ ಕಾಯುತ್ತಿದ್ದು ಕೆಲವೇ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ವರೆಗೆ ಕಾಯಬೇಕಾಗಿ ಸಂಸ್ಥೆ ಕೋರಿದೆ.

1) ಕೊಕ್ಕೋ ತರುವ ಸಂದರ್ಭದಲ್ಲಿ ರೈತರು ಕ್ಯಾಂಪ್ಕೋ ಗುರುತು ಚೀಟಿ (ಕ್ಯಾಂಪ್ಕೋ ಐ.ಡಿ ಕಾರ್ಡು) ಅಥವಾ ಪಹಣಿ ಪತ್ರ (RTC) ದೊಂದಿಗೆ ಬರುವುದು ಕಡ್ಡಾಯ.

2) ಕ್ಯಾಂಪ್ಕೋ ಶಾಖೆಗೆ ಆಗಮಿಸುವ ಸದಸ್ಯರು ಮಾಸ್ಕ್ ಧರಿಸಿ ಪರಸ್ಪರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ವಿನಂತಿ.

3) ಈ ಗ್ರೂಪ್‌ನಲ್ಲಿ ಒಳಗೊಂಡಿರದ ನಮ್ಮ ಪರಿಸರದ ಇತರ ಸದಸ್ಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳುವಂತೆ ವಿನಂತಿ.

ಸಂಪರ್ಕ ಸಂಖ್ಯೆ :
08257 – 230474 (ಕಛೇರಿ)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.